ಆದರ್ಶ ದಂಪತಿಗಳು ಪ್ರಶಸ್ತಿಗೆ ಭಾಜನರಾದ ಆರ್.ಎಸ್. ಪ್ಯಾಟಿಗೌಡರ ಹಾಗೂ ನೀಲಮ್ಮ ಆರ್. ಪ್ಯಾಟಿಗೌಡರ

ವಿಜಯಪುರ,ಏ.13:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಅವಿಮುಕ್ತ ಸುಕ್ಷೇತ್ರ ಸಂಸ್ಥಾನ ವಿರಕ್ತಮಠದಲ್ಲಿ ನಡೆದ ಜಗದ್ಗುರು ಲಿಂಗೈಕ್ಯ ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ-2024 ಹಾಗೂ ಪೂಜ್ಯ ಶ್ರೀ ಮ.ನಿ.ಪ್ರ. ಗುರು ಸಂಗನಬಸವ ಮಹಾಸ್ವಾಮಿಗಳ ಜನ್ಮ ಸುವರ್ಣಮಹೋತ್ಸವದ ನಿಮಿತ್ತವಾಗಿ ಕೊಡುವ ಆದರ್ಶ ದಂಪತಿಗಳು ಪ್ರಶಸ್ತಿಗೆ ವಿಜಯಪುರ ಜಿಲ್ಲಾ ನಿಸರ್ಗ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಹಾಗೂ ನಿವೃತ್ತ ಹಿರಿಯ ಕೆ.ಎಫ್.ಎಸ್. ಅಧಿಕಾರಿ ನಿಡಗುಂದಿ ತಾಲೂಕು ವಂದಾಲ ಗ್ರಾಮದ ಆರ್.ಎಸ್. ಪ್ಯಾಟಿಗೌಡರ ಹಾಗೂ ನೀಲಮ್ಮ ಆರ್. ಪ್ಯಾಟಿಗೌಡರ ಭಾಜನರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅರಣ್ಯ, ಪರಿಸರ ಸಂರಕ್ಷಣೆ, ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಬಂದಿರುವುದನ್ನು ಪರಿಗಣಿಸಿ ಯರನಾಳ ಶ್ರೀ ಮಠದಲ್ಲಿ ಧಾರವಾಡ ಮುರಘಾಮಠದ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ಪ್ಯಾಟಿಗೌಡರ ದಂಪತಿಗಳಿಗೆ ಸನ್ಮಾನಿಸಲಾಯಿತು. ಆದರ್ಶ ದಂಪತಿಗಳಾದ ಪ್ಯಾಟಿಗೌಡರ ಕುಟುಂಬ ಇನ್ನಷ್ಟು ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರಂತರವಾಗಿ ಮುಂದುವರೆಯಲೆಂದು ಸ್ವಾಮಿಜಿಗಳು ಶುಭ ಕೋರಿದರು.
ಈ ಸಂದರ್ಭದಲ್ಲಿ ಯರನಾಳ ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಂಗನಬಸವ ಮಹಾಸ್ವಾಮಿಗಳು, ಬೆಂಗಳೂರು ಮಾರ್ತಹಳ್ಳಿ ವಿಭೂತಿಪುರ ಮಠದ ಪೂಜ್ಯ ಶ್ರೀ ಷ.ಬ್ರ.ಡಾ. ಮಹಾಂತಲಿಂಗ ಶಿವಾಚಾರ್ಯರು, ಶಿವಗಂಗೆ ಮೇಲಗಾವಿಮಠದ ಪೂಜ್ಯ ಶ್ರೀ ಷ.ಬ್ರ. ಡಾ. ಮಲ್ಲಯ್ಯ ಶಾಂತಮುನಿ ಶಿವಾಚಾರ್ಯರು, ಬಸವನ ಬಾಗೇವಾಡಿ ಖ್ಯಾತ ವೈದ್ಯ ಡಾ. ಧರ್ಮೆಶ ಮಿಣಜಗಿ, ನಾಡಿನ ವಿವಿಧ ಮಠಗಳ ಪೂಜ್ಯರು, ಗಣ್ಯರು, ಹಿರಿಯರು ಹಾಗೂ ಭಕ್ತ ಸಮೂಹ ಪಾಲ್ಗೊಂಡಿದ್ದರು.