ಆದರ್ಶತನದಿಂದ ಬಾಳಿದ ಕನ್ನಡಿಗರು; ಸ್ಮರಣೆ

ಜಗಳೂರು.ನ.2;   ತಾಲೂಕು ಕಚೇರಿ  ಅವರಣದಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು  ಅದ್ದೂರಿಯಾಗಿ ಆಚರಣೆ ಮಾಡಲಾಯಿತು ನಂತರ .ಭುವನೇಶ್ವರಿ  ಭಾವಚಿತ್ರಕ್ಕೆ  ಶಾಸಕರಾದ ಎಸ್.ವಿ ರಾಮಚಂದ್ರಪ್ಪ ಮತ್ತು ತಾಲೂಕು ದಂಡಾಧಿಕಾರಿ ಮಂಜ ನಂದಾ ಮತ್ತು ಪ್ರತಿನಿಧಿಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು  ಕನ್ನಡ ಚಿತ್ರರಂಗದ ಕಲಾವಿದರಾದ  ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ 3 ನಿಮಿಷಗಳ ಕಾಲ ಶ್ಲೋಕ ಚರಣೆ  ಮಾಡಲಾಯಿತು. ನಂತರ ವಿಶೇಷ ಉಪನ್ಯಾಸದಲ್ಲಿ ಶ್ರೀಮತಿ ರಾಣಿ ಮಾತನಾಡಿ ಕನ್ನಡದ ಅಳಿವು ಮತ್ತು ಉಳಿವಿನ ಬಗ್ಗೆ ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಕನ್ನಡ ನೆಲ-ಜಲದ ಬಗ್ಗೆ ಪೋಷಕರು ತಿಳಿಸಿಕೊಡಬೇಕು ಈ ನೆಲದಲ್ಲಿ ಅನೇಕ ಕವಿಗಳು. ವಚನಕಾರರು ಸಂತರು ಆದರ್ಶ ಮೆರೆದಿದ್ದಾರೆ. ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಮಾತನಾಡಲು ಹೆಚ್ಚು ಒತ್ತು ಕೊಡಬೇಕು ಎಂದು ಕಿವಿಮಾತು ಹೇಳಿದರು ವಿಶೇಷವಾಗಿ ತಾಲ್ಲೂಕು ಆಡಳಿತದ ವತಿಯಿಂದ ವಿಧದ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಜನರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು 10 ಸಾವಿರ ನಗದು ಬಹುಮಾನಗಳನ್ನು ನೀಡಿದರು 
 ನಂತರ  ಶಾಸಕ ಎಸ್ ವಿ ರಾಮಚಂದ್ರಪ್ಪ ಮಾತನಾಡಿ ಭದ್ರಾಮೇಲ್ದಂಡೆ ಯೋಜನೆ ಮಾಜಿ ಶಾಸಕರಿಗೆ ಮಾರ್ಗವೇ ಗೊತ್ತಿಲ್ಲ ಅಂತಾ ಹೇಳ್ತಾರೆ.ಯಡಿಯೂರಪ್ಪ ನವರ ಸರ್ಕಾರದಲ್ಲಿ ಹರಸಾಹಸ ಪಟ್ಟು ಕಾತ್ರಾಳು ಮಾರ್ಗದಿಂದ  ಬೆಳಗಟ್ಟ ಮಾರ್ಗವಾಗಿಬದಲಾವಣೆ ಮಾಡಿ 2.4 ಟಿಎಂಸಿ ನೀರನ್ನುಪೈಪ್ ಲೈನ್ ಮೂಲಕ 46 ಸಾವಿರ ಎಕರೆಗೆ ಹನಿ ನೀರಾವರಿಮಾಡಲಾಗುತ್ತಿದೆ ಕೇಂದ್ರ ನೀರಾವರಿ ಯೋಜನೆಯಡಿ 1200 ಕೋಟಿ ಹಣವನ್ನು ಕೇಂದ್ರದಿಂದ ಮಂಜೂರು ಮಾಡಿಸಲಾಯಿತುಇದೇ ತಿಂಗಳ ಕೊನೆವಾರದಲ್ಲಿ  ಮಾನ್ಯ ಮುಖ್ಯಮಂತ್ರಿ ಕರ್ನಾಟಕದ ಮುಖ್ಯ ಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೀರಾವರಿ ಸಚಿವರನ್ನು ಮತ್ತು ಸಚಿವ ಸಂಪುಟದ ಸಚಿವರನ್ನು ಕರೆಸಿ  ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ  ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ ಲಕ್ಷ್ಮಿಪತಿ. ಮುಖ್ಯ ಅಧಿಕಾರಿ ಲೊಕ್ಯ್ ನಾಯ್ಕ.  ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸಿದ್ದಪ್ಪ. ಉಪಾಧ್ಯಕ್ಷ ಮಂಜಮ್ಮ. ಪಟ್ಟಣ ಪಂಚಾಯಿತಿ ಸದಸ್ಯರಾದ ಪಾಪ ಲಿಂಗ.ಲುಕ್ಮಾನ್ ಉಲ್ಲಾಖಾನ್.ನಿರ್ಮಲ ಕುಮಾರಿ. ಲಲಿತಾ. ಸರೋಜಮ್ಮ ಇತರರಿದ್ದರು.