ಆದರ್ಶಗಳನ್ನು ಪಾಲಿಸಿದಾಗ ಮಾತ್ರ ಬಸವ ಜಯಂತಿಗೆ ಅರ್ಥ: ಡಾ. ಪಿ. ರಂಗನಾಥ್

ಕಲಬುರಗಿ,ಏ.23: ಬಸವಣ್ಣನವರು ಹಾಕಿಕೊಟ್ಟ ಆದರ್ಶಗಳನ್ನು ಪಾಲನೆ ಮಾಡಿದಾಗ ಮಾತ್ರ ಬಸವಣ್ಣ ಜಯಂತಿಗೆ ಒಂದು ಅರ್ಥ ಬರುತ್ತದೆ ಎಂದು ಕೇಂದ್ರ ಕಾರಾಗೃಹದ ಮುಖ್ಯಸ್ಥ ಡಾ. ಪಿ. ರಂಗನಾಥ್ ಅವರು ಹೇಳಿದರು.
ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಹಮ್ಮಿಕೊಂಡ ಬಸವಣ್ಣನವರ 890ನೇ ಜುಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರ ಆಶಯದಂತೆ ಪ್ರತಿಯೊಬ್ಬರು ಕಾಯಕದೊಂದಿಗೆ ಮನಕುಲವು ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡು ವಿಶ್ವಕ್ಕೆ ಮಾದರಿಯಾಗಿ ಪ್ರತಿಯೊಬ್ಬ ಭಾರತೀಯರು ನಾವೇಲ್ಲ ಒಂದೇ ಎಂಬ ಸಂದೇಶವನ್ನು ನೀಡುವುದರೊಂದಿಗೆ ಬಸವಣ್ಣನವರು ಹಾಕಿಕೊಟ್ಟ ಅರ್ದಶಗಳನ್ನು ಪಾಲನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ಬಿ.ಎಂ. ಕೊಟ್ರೇಶ್, ಸಹಾಯಕ ಅಧೀಕ್ಷಕ ವಿ. ಕೃಷ್ಣಮೂರ್ತಿ, ವೈದ್ಯಾಧಿಕಾರಿಗಳಾದ ಡಾ. ರವೀಂಧ್ರ ಬನ್ನೇರಿ, ಡಾ. ಅಣ್ಣಾರಾವ್ ಪಾಟೀಲ್, ಸಂಸ್ಥೆಯ ಎಲ್ಲ ಜೈಲರ್ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕಾರಾಗೃಹದ ಎಲ್ಲ ಬಂದಿ ನಿವಾಸಿಗಳು ಪಾಲ್ಗೊಂಡು ಬಸವಣ್ಣನವರ 890ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಿ ಯಶಸ್ವಿಗೊಳಿಸಿದರು.