ಆತ್ಮ ಸಾಕ್ಷಿಗೆ ವಿರುದ್ಧ ಈಶ್ವರ ಖಂಡ್ರೆ ಆರೋಪ: ಭಗವಂತ ಖೂಬಾ

ಬೀದರ,ಮಾ 13: ಅಭಿವೃದ್ಧಿ ವಿರೋಧಿ ವ್ಯಕ್ತಿತ್ವವುಳ್ಳ ಭಾಲ್ಕಿ ಶಾಸಕ ಈಶ್ವರ
ಖಂಡ್ರೆ ಮಾಡಿರುವ ಆರೋಪ ಅವರ ಆತ್ಮ ಸಾಕ್ಷಿಗೆ ವಿರುದ್ಧವಾಗಿವೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉಗ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು,ಸಂಸದನಾಗಿ, ಕಾರ್ಯಾಂಗದ ಅಧಿಕಾರಿಗಳಮೇಲೆ ಅಧಿಕಾರ ದಬ್ಬಾಳಿಕೆ ಮಾಡಿಕೊಂಡಿರುವ ಒಂದೆ ಒಂದು
ಉದಾಹರಣೆ ಕೊಟ್ಟು ಮಾತಾಡಿ, ನೀವು ಅಧಿಕಾರ ದುರ್ಬಳಕೆ
ಮಾಡಿಕೊಂಡು, ಅಧಿಕಾರಿಗಳ ಮೇಲೆ ಒತ್ತಡ ತಂದು ಸಂವಿಧಾನದ
ಆಶಯಗಳನ್ನು ಬಲಿಕೊಟ್ಟಿರುವ ಸಾವಿರಾರು ಉದಾಹರಣೆಗಳು
ಇವೆ ಎಂದಿದ್ದಾರೆ
ರಿಂಗ್ ರೊಡ್ ಕಾಮಗಾರಿಯು ಪ್ರಗತಿಯಲ್ಲಿದ್ದಾಗ
ರದ್ದುಗೊಳಿಸಿದ್ದು, ಹಾಗೂ ಅಮೃತ ಯೋಜನೆಯಡಿ ಜನವಾಡ
ಹತ್ತಿರ ಕುಡಿಯುವ ನೀರಿನ ಕಾಮಗಾರಿಯನ್ನು ರದ್ದುಗೊಳಿಸಿದ್ದಿರಿ,
ಇದಕ್ಕೆ ಅಂದು ಗುತ್ತಿಗೆದಾರು ನಿಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಅದಕ್ಕೆ
ರದ್ದುಗೊಳಿಸಿದ್ದಿರಿ, ಈ ವಿಷಯವನ್ನು ಮುಚ್ಚಿಹಾಕಲು ನನ್ನ ಮೇಲೆ
ಆರೋಪ ಮಾಡುತ್ತಿದ್ದಿರಿ.
ಗುತ್ತಿಗೆದಾರರುಕಮಿಷನ್ ಕೊಡದೆ ಇದ್ದರೆ,
ಕಾಮಗಾರಿಗಳಲ್ಲಿ ತಪ್ಪುಗಳು ಹುಡುಕಿ ಅವರಿಗೆ ಬ್ಲಾಕ್ ಲಿಸ್ಟ್ ಅಲ್ಲಿ
ಸೇರಿಸುವಂತೆ, ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಎಷ್ಟೋ
ಪತ್ರಗಳು ಇಲಾಖೆಯ ಕಡತಗಳಲ್ಲಿವೆ ಎಂದಿದ್ದಾರೆ.ನಿಮ್ಮದೆ ಪಕ್ಷದವರಾದ ಶ್ರೀಕಾಂತ ಸ್ವಾಮಿಯವರ ಮೇಲೆ,
ನೀವು ಪೌರಾಡಳಿತ ಸಚಿವರಾಗಿದ್ದಾಗ, ವಿನಾ ಕಾರಣ, ನಿಮ್ಮ
ಇಲಾಖೆಯ ಸಿಬ್ಬಂದಿಗಳಿಂದ ಅವರ ಪೆಟ್ರೋಲ್ ಪಂಪ್ ಅನ್ನು
ನೆಲಕ್ಕುರುಳಿಸಿ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿರುವುದು
ಜನ ಇನ್ನೂ ಮರೆತಿಲ್ಲ, ನಿಮ್ಮ ಈ ಕೃತ್ಯಕ್ಕೆ ನ್ಯಾಯಾಲಯವು ಸಹ
ಛೀಮಾರಿ ಹಾಕಿತ್ತು ಎಂದಿದ್ದಾರೆ.
ನಾನು ಅಭಿವೃದ್ದಿ ಕಾರ್ಯ
ಮಾಡಿಲ್ಲವೆಂದು ಆರೋಪಿಸುವ ಶಾಸಕರು, ನನ್ನ ಅಭಿವೃದ್ದಿ
ಕೆಲಸಗಳು ಎಣಿಸುತ್ತಾ ಹೊದರೆ ಶಾಸಕರಿಗೆ ಸ್ವತಃ ಅವರ
ಮೇಲೆಯೆ ಅಸೊಯೆ ಹುಟ್ಟಬಹುದು, ಶಾಸಕರ ವಿವೇಚನೆಗೆ ಮೀರಿ
ಕೆಲಸಗಳು ಈ 9 ವರ್ಷದಲ್ಲಿ ಆಗಿವೆ. ಬೀದರ ಜಿಲ್ಲೆಯಲ್ಲಿ
2014ಕ್ಕಿಂತ ಮುಂಚೆ ಏನಿತ್ತು ? ಇವಾಗ ಏನೇನಾಗಿವೆ ಎಂಬುದು ಅರಿತುಕೊಳ್ಳಿ.
ಸ್ವಲ್ಪ ನಿಮ್ಮ ಮಾನಸಿಕ ಅಸಮತೋಲವನ್ನು ನಿಯಂತ್ರಿಸಿಕೊಳ್ಳಿ,
ಇನ್ನೊಬ್ಬರ ಬಗ್ಗೆ ಹೊಟ್ಟೆ ಕಿಚ್ಚು ಪಟ್ಟು ಆರೋಗ್ಯ ಹಾಳು
ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡುತ್ತೇನೆ ಎಂದಿದ್ದಾರೆ.
ಬ್ರೀಮ್ಸ್ ಆಸ್ಪತ್ರೆಯ ಬಗ್ಗೆ ಮಾತನಾಡಲು ನಿಮಗೆ ಯಾವ
ನೈತಿಕತೆ ಇದೆ? ಉದ್ಘಾಟನೆಯಾದ ಒಂದೆ ವರ್ಷದಲ್ಲಿ
ಆಸ್ಪತ್ರೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು ಇದಕ್ಕೆ ಮುಖ್ಯ ಕಾರಣ
ನಿಮ್ಮ ದುರಾಡಳಿತ, ಗುತ್ತಿಗೆದಾರನ ಜೊತೆ ನೀವು ಮಾಡಿಕೊಂಡಿದ್ದ
ಶೇ 50 ಕಮಿಷನ್ ಒಪ್ಪಂದ.
ಯಾರ ಮಾತಿಗೂ ಬೆಲೆ ಕೊಡದ ನಿಮ್ಮ ವ್ಯಕ್ತಿತ್ವಕ್ಕೆ ಖುದ್ದು
ಸ್ಪಿಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಹೇಳಿದ್ದಾರೆ, ನೀವು
ಎಂತಹ ಶಾಸಕ ಎಂದು. ನಿಮ್ಮ
ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದ್ದ ಎಷ್ಟೋ ಕೆಲಸಗಳು
ನಾನು ಮಾಡಿಸಿದ್ದೇನೆ, ಅವುಗಳಲ್ಲಿ ಮೇಹಕರ್ ಏತ ನೀರಾವರಿಯೂ
ಒಂದಾಗಿದೆ.
ಮೇಹಕರ್ ಏತ ನೀರಾವರಿಗೆ , ನೂತನ ಅನುಭವ ಮಂಟಪಕ್ಕೆ ಅನುದಾನ ತರಲು
ಯಾಕೆ ಆಗಿರಲಿಲ್ಲಾ? ಔರಾದ ಹಾಗೂ
ಮೇಹಕರ ನೀರಾವರಿ ಯೋಜನೆಗಳಿಗೆ ನಾನು ಅನುದಾನ ತಂದಿದ್ದೇನೆ, ಈ
ಕೆಲಸ ನೀವು ಮಾಡಿದ್ದು ಎಂದು ಸುಳ್ಳು ಹೇಳಿ ಪುಕ್ಕಟ್ಟೆ
ಪ್ರಚಾರಕ್ಕೆ ಬಿದ್ದಿರುವ ನಿಮ್ಮ ಮನಸ್ಥಿತಿಗೆ ಏನು ಹೇಳಬೇಕೋ
ತಿಳಿಯದಾಗಿದೆ ಎಂದು ಭಗವಂತ ಖೂಬಾ ಕಿಡಿಕಾರಿದ್ದಾರೆ.