ಆತ್ಮ ವಿಶ್ವಾಸದಿಂದ ಉತ್ತಮ ಅಂಕಗಳು ಪಡೆಯಲು ಸಾಧ್ಯ:ಫಕೀರ ಸಾಬ

ಸೈದಾಪುರ:ಮಾ.27:ಪರೀಕ್ಷೆ ಬಗಗೆ ಭಯ ಪಡದೆ ತಾವು ಅಭ್ಯಾಸ ಮಾಡಿರುವುದನ್ನು ಆತ್ಮ ವಿಶ್ವಾಸದೊಂದಿಗೆ ಬರೆದಾಗ ಉತ್ತಮ ಅಂಕಗಳು ಪಡೆಯಲು ಸಾಧ್ಯವಾಗುತ್ತದೆ ಎಂದು ಎಸ್‍ಡಿಎಂಸಿ ಸದಸ್ಯ ಪಕೀರ ಸಾಬ ಅಭಿಪ್ರಾಯಪಟ್ಟರು.

ಸಮೀಪದ ಕಂದಕೂರ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು. ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವಂತರು ನಾವಾಗಬೇಕು. ಪರಿಸರ ಸೇರಿದಂತೆ ಸುತ್ತಲು ಉತ್ತಮ ವಾತವರಣವನ್ನು ಕಂಡುಕೊಂಡಾಗ ಆರೋಗ್ಯವಂತರು ನಾವಾಗುತ್ತೇವೆ. ಮುಂದಿನ ಕಲಿಕೆಗಾಗಿ ಶಾಲೆಯಿಂದ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡಿ ಅವುಗಳ ಬೆಳವಣಿಗೆಯ ಜವಬ್ದಾರಿ ನೀಡುತ್ತಿರುವ ಶಾಲೆಯ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಶಿಕ್ಷಣ ಪ್ರೇಮಿ ಸತ್ಯನಾರಾಯಣ ಮಾತನಾಡಿ, ಗುರು ಶಿಷ್ಯರ ಸಂಬಂದ ಅಂತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗದಲ್ಲಿ ಪೋಷಕರಿಗೆ ಶಿಕ್ಷಣದ ಬಗಗೆ ಮಾಹಿತಿ ಕೊರತೆ ಇರುತ್ತದೆ. ಇದನ್ನು ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡುವ ಮೂಲಕ ನಿಮ್ಮ ಭವಿಷ್ಯ ರೂಪಿಸುವಲ್ಲಿ ನೆರವಾಗುತ್ತಾರೆ. ಕಲಿತ ಶಾಲೆ ಹಾಗೂ ಗುರುಗಳನ್ನು ಗೌರವದಿಂದ ಕಾಣುವ ಮೂಲಕ ಉತ್ತಮ ಫಲಿತಾಂಶದೊಂದಿಗೆ ಅವರ ಮಹತ್ವ ಹೆಚ್ಚಾಗುವಂತೆ ಮಾಡುಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.

ಮುಖ್ಯಗುರು ಎಸ್.ಎಂ.ಭೂತಾಲ, ಅಶೋಕ್ ರೆಡ್ಡಿ, ಶಿಕ್ಷಕರಾದ ವಿನೋದ್ ಕುಮಾರ್ ಗುಡಿ, ಮಧುಮತಿ ಸಿಂಗೆ, ಗಂಗಾಧರ್ ಬಡಿಗೇರ್, ಸಲಹುದ್ದೀನ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಾರ್ಥನಾ ಹಾಗೂ ಸುಷ್ಮಾ ಪ್ರಾರ್ಥಾನಾಗೀತೆ ಹಾಡಿದರು. ಶಿಕ್ಷಕ ನಾಗಪ್ಪ ಸ್ವಾಗತಿಸಿದರು. ಬಸವಲಿಂಗಪ್ಪ ನಿರೂಪಿಸಿದರು. ಶರಣಕುಮಾರ ವಂದಿಸಿದರು.