ಆತ್ಮ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮೂಲಕ ಹೆಣ್ಣು ಮಕ್ಕಳ ಸಬಲೀಕರಣ

ಕೊಲ್ಹಾರ :ಮೇ.7:ಎನ್‍ಟಿಪಿಸಿ ಸಿಎಸ್‍ಆರ್ ಅಡಿಯಲ್ಲಿ 40 ಬಾಲಕಿಯರಿಗೆ ಸಬಲೀರಕರಣ ಮಿಷನ್-2024 ಕಾರ್ಯಕ್ರಮವನ್ನು ಎನ್‍ಟಿಪಿಸಿಯ ಮಹಾಕ್ತಿನಗರ ಟೌನ್‍ಶಿಪ್‍ನಲ್ಲಿ ಇಂದು ಪ್ರಾರಂಭ ಮಾಡಲಾಯಿತು.

ಎನ್‍ಟಿಪಿಸಿ ಸಿಎಸ್‍ಆರ್ ಅಡಿಯಲ್ಲಿ ಬಾಲಕಿಯರ ಸಬಲೀಕರಣ ಮಿಷನ್ ಕಾರ್ಯಕ್ರಮವನ್ನು ಎನ್‍ಟಿಪಿಸಿ ಕೂಡಗಿಯ ಗ್ರುಪ್ ಜನರಲ್ ಮ್ಯಾನೇಜರ ಶ್ರೀ. ಬಿದ್ಯಾನಂದ ಝಾರವರು ಮತ್ತು ಮೀತಾಲಿ ಮಹಿಳಾ ಸಮೀತಿಯ ಅಧ್ಯಕ್ಷರಾದ ಶ್ರೀಮತಿ ಅಂಜು ಝಾರವರು ಹಾಗೂ ಎನ್‍ಟಿಪಿಸಿ ಕೂಡಗಿಯ ಸೂತ್ತಮುತ್ತಲಿನ ಗ್ರಾಮಗಳಾದ, ಮಸೂತಿ ಗ್ರಾಮದ ಶ್ರೀ ಸಿ.ಪಿ ಪಾಟೀಲ, ಕೂಡಗಿ ಗ್ರಾಮದ ಶ್ರೀ ಲಾಲಸಾಬ ಚುಡಿವರೋಸ್, ತೆಲಗಿ ಗ್ರಾಮದ ಶ್ರೀ ಸಿ.ಎಮ್. ಹಂಡಗಿ, ಗೊಳಸಂಗಿ ಗ್ರಾಮದ ಶ್ರೀ ಎಚ್ .ಜಿ. ಕಮತಗಿ. ಮುತ್ತಗಿ ಗ್ರಾಮದ ಶ್ರೀ ರಮೇಶ ಎನ್. ಸುಳಿಬಾವಿ ಇವರುಗಳು ದೀಪ ಬೆಳಗುವುದರೊಂದಿಗೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲಿ ಎನ್‍ಟಿಪಿಸಿ ಕೂಡಗಿಯ ಭೂಸ್ವಾಧೀನ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಸರಕಾರಿ ಹಾಗೂ ಸರಕಾರಿ ಅನುಧಾನಿತ ಪ್ರಾಥಮಿಕ ಶಾಲೆಯ ಐದನೇ ತರಗತಿಯಿಂದ ತೇರ್ಗಡೆಯಾದ 40 ವಿದ್ಯಾರ್ಥಿನಿಯರು ಹಾಗೂ ಪಾಲಕರು ಮತ್ತು ಶಾಲೆಯ ಶಿಕ್ಷಕರು ಈ ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಭಿದ್ಯಾನಂದ ಝಾರವರು ಮಾತನಾಡುತ್ತಾ, ಈ ಕಾರ್ಯಕ್ರಮವು ನಾಲ್ಕು ವಾರಗಳ ಅವಧಿಯಲ್ಲಿ ಮೂಲಭೂತ ಶಿಕ್ಷಣ, ಆರೋಗ್ಯ ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳುತ್ತಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆ ಆಗುವುದು ಎಂದು ಹೇಳಿದರು.

ಈ ಬಾಲಕಿಯರ ಸಬಲೀಕರಣ ಮಿಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ವಿವಿಧ ಕೌಶಲ್ಯಗಳನ್ನು ಅಂದರೆ ಇಂಗ್ಲಿಷ್, ವಿಜ್ಞಾನ, ಕನ್ನಡ, ಗಣಿತ, ಹಿಂದಿ, ಸಾಮಾನ್ಯ ಜ್ಞಾನ, ಕರಾಟೆ, ಯೋಗ, ನೃತ್ಯ, ಸಂಗಿತ. ಚಿತ್ರಕಲೆ, ಆರೋಗ್ಯ ಆತ್ಮ ಸುರಕ್ಷಾ ಹಾಗೂ ಜೀವನ ಕೌಶಲ್ಯ ಮತ್ತು ಪತ್ಯೇತ ಚರುವಟಿಕೆಗಳು ಇತ್ಯಾದಿ ವಿಷಯಗಳನ್ನು ಕಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗಹಿಸಿದ ವಿದ್ಯಾರ್ಥಿನಿಯರಿಗೆ ಉಪಹಾರ, ಊಟ, ವಸತಿ ಹಾಗೂ ಕಲಿಕೆಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಮತ್ತು ಉಡುಗೆಗಳನ್ನು ಎನ್‍ಟಿಪಿಸಿ ವತಿಯಿಂದ ಕಲ್ಪಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಎನ್‍ಟಿಪಿಸಿಯ ಪೆÇ್ರಜೆಕ್ಟ್ ವಿಭಾಗದ ಜಿ.ಎಮ್. ಶ್ರೀ ಅಲೋಕೆಶ್ ಬೆನರ್ಜಿ, ಆರೋಗ್ಯ ವಿಭಾಗದ ಸಿ.ಎಮ್.ಓ ಡಾ. ರಾಜ ಬೂನವಾಂಕರ, ಎಚ್.ಆರ್ ವಿಭಾಗದ ಸಿ.ಜಿ.ಎಮ್ ಶ್ರೀ ಕಲಿಯಾ ಎಸ್. ಮೂರ್ತಿ, ಎಪ್.ಎಮ್ ವಿಭಾಗದ ಜಿ.ಎಮ್ ಓ. ಶ್ರೀನಿವಾಸ ಮತ್ತು ಎನ್‍ಟಿಪಿಸಿಯ ಎಲ್ಲ ಹಿರಿಯ ಅಧಿಕಾರಿಗಳು, ಮಿತಾಲಿ ಮಹಿಳಾ ಸಮಿತಿಯ ಎಲ್ಲ ಸದಸ್ಯರು ಹಾಗೂ ಇತರ ಗಣ್ಯಮಾನ್ಯರು ಉಪಸ್ಥಿತರಿದ್ದರು.