ಆತ್ಮ ನಿರ್ಭರ ಭಾರತಕ್ಕೆ ಫ್ರಾನ್ಸ್ ಪಾಲುದಾರ

ಪ್ಯಾರೀಸ್,ಜು.೧೫- ’ಮೇಕ್ ಇನ್ ಇಂಡಿಯಾ’ ಮತ್ತು ’ಆತ್ಮನಿರ್ಭರ ಭಾರತ್’ಗೆ ಫ್ರಾನ್ಸ್ , ಭಾರತದ ಪ್ರಮುಖ ಪಾಲುದಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಮತ್ತು ಫ್ರಾನ್ಸ್ ಮುಂದಿನ ೨೫ ವರ್ಷಗಳ ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಮಾರ್ಗಸೂಚಿ ಸಿದ್ಧಪಡಿಸುತ್ತಿವೆ . ಈ ನಿಟ್ಟಿನಲ್ಲಿ ಯುದ್ಧ ವಿಮಾನ ಎಂಜಿನ್‌ನ ಜಂಟಿ ಅಭಿವೃದಿ ಬೆಂಬಲಿಸುವ ಮೂಲಕ ಸುಧಾರಿತ ವೈಮಾನಿಕ ತಂತ್ರಜ್ಞಾನಗಳಲ್ಲಿ ಭಾರತ ಮತ್ತು ಫ್ರಾನ್ಸ್ ರಕ್ಷಣಾ ಸಹಕಾರವನ್ನು ವಿಸ್ತರಿಸಲಿವೆ ಎಂದು ಹೇಳಿದ್ದಾರೆ.
ಪ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಗಾಢವಾಗಿಸಲು ಪರಸ್ಪರ ಸಹಕಾರದ ಹಲವಾರು ಕ್ಷೇತ್ರಗಳಲ್ಲಿ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಈ ಕುರಿತು ಪ್ರಧಾನಿ ಅವರ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಐದು ದಶಕಗಳಲ್ಲಿ ಮಿಲಿಟರಿ, ವಾಯುಯಾನದಲ್ಲಿ, ಭಾರತಕ್ಕೆ ೩೬ ರಫೇಲ್ ಯುದ್ಧ ವಿಮಾನಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಿದ ಪ್ರಾನ್ಸ್ ಕ್ರಮವನ್ನು ಸ್ವಾಗತಿಸಿದ್ದಾರೆ.
“ಭವಿಷ್ಯದಲ್ಲಿ, ಭಾರತ ಮತ್ತು ಫ್ರಾನ್ಸ್ ಯುದ್ಧ ವಿಮಾನ ಎಂಜಿನ್‌ನ ಜಂಟಿ ಅಭಿವೃದ್ಧಿ ಬೆಂಬಲಿಸುವ ಮೂಲಕ ಸುಧಾರಿತ ಏರೋನಾಟಿಕಲ್ ತಂತ್ರಜ್ಞಾನಗಳಲ್ಲಿ ರಕ್ಷಣಾ ಸಹಕಾರ ವಿಸ್ತರಿಸಲಾಗುವುದು ಈ ವರ್ಷದ ಅಂತ್ಯದ ಮೊದಲು ಸಫ್ರಾನ್ ಮತ್ತು ಡಿಆರ್‌ಡಿಓ ನಡುವೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಫ್ರಾನ್ಸ್‌ನ ಸಫ್ರಾನ್ ಹೆಲಿಕಾಪ್ಟರ್ ಎಂಜಿನ್‌ನೊಂದಿಗೆ ಇಂಡಿಯನ್ ಮಲ್ಟಿ ರೋಲ್ ಹೆಲಿಕಾಪ್ಟರ್ ಕಾರ್ಯಕ್ರಮದ ಅಡಿಯಲ್ಲಿ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳ ಮೋಟಾರೀಕರಣಕ್ಕಾಗಿ ಭಾರತ ಮತ್ತು ಫ್ರಾನ್ಸ್ ಎರಡೂ ಸಹಕಾರ ನೀಡುವುದಾಗಿ ಉಭಯ ದೇಶಗಳ ಮುಖ್ಯಸ್ಥರು ಸಮ್ಮಿತಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಫ್ರಾನ್ಸ್‌ನ ಸಫ್ರಾನ್ ಹೆಲಿಕಾಪ್ಟರ್ ಎಂಜಿನ್ ನಡುವಿನ ಎಂಜಿನ್ ಅಭಿವೃದ್ಧಿಗಾಗಿ ತೀರ್ಮಾನಿಸಲಾಗಿದೆ. ತಂತ್ರಜ್ಞಾನ ವರ್ಗಾವಣೆಯಲ್ಲಿ ಯಶಸ್ವಿ ಇಂಡೋ-ಫ್ರೆಂಚ್ ಅನುಭವದ ಆಧಾರದ ಮೇಲೆ ನಿರ್ಣಾಯಕ ಘಟಕಗಳು ಮತ್ತು ತಂತ್ರಜ್ಞಾನ ಬಿಲ್ಡಿಂಗ್ ಬ್ಲಾಕ್‌ಗಳ ಹಂಚಿಕೆ ಮತ್ತು ಜಂಟಿ ಅಭಿವೃದ್ಧಿಯಲ್ಲಿ ಭಾರತ ಮತ್ತು ಫ್ರಾನ್ಸ್ ಸಹಕಾರ ಮುಂದುವರಿಸಲಾಗುವುದು ಎಂದು ತಿಳಿಸಿದೆ.