ಆತ್ಮಾವಲೋಕನದಿಂದ ವೃತ್ತಿಯಲ್ಲಿ ಪ್ರಗತಿ-ಎಸ್.ಕೆ.ಬಿ.ಪ್ರಸಾದ್

ಚಿತ್ರದುರ್ಗ.ನ.೨೨; ಆತ್ಮಾವಲೋಕನದಿಂದ ನಮ್ಮ ವೃತ್ತಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಹೇಳಿದರು. ನಗರದ ಡಯಟ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಲಿಕಲಿ(ಸಮಗ್ರ) ಪುನರ್ಬಲನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಮಗುವಿಗೆ ಕಲಿಯುವ ಹಕ್ಕಿದೆ. ಶಿಕ್ಷಕರು ಒಳನೋಟ ಹೊಂದುವುದರ ಮೂಲಕ ಕಲಿಕಾ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಬೇಕು.

zಪ್ರಸ್ತುತ ಸನ್ನಿವೇಶದಲ್ಲಿ ತಂತ್ರಜ್ಞಾನದ ಅವಶ್ಯಕತೆಯಿದ್ದು ಪ್ರತಿಯೊಬ್ಬ ಶಿಕ್ಷಕರು ತಂತ್ರಜ್ಞಾನದ ಜ್ಞಾನ ಪಡೆಯಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈಗ ನಿಷ್ಠಾ ತರಬೇತಿಯನ್ನು ಆನ್‌ಲೈನ್ ಮೂಲಕ ಆಯೋಜಿಸಿದ್ದು 18 ಮಾಡ್ಯೂಲ್‌ಗಳಲ್ಲಿ ಭಾಗವಹಿಸಿ ತರಬೇತಿಯಲ್ಲಿ ಕಲಿತ ಆಂಶಗಳನ್ನು ಅನುಷ್ಠಾನ ಮಾಡಬೇಕು ಎಂದರು. ನೋಡಲ್ ಅಧಿಕಾರಿ ಜಿ.ಎಸ್.ನಾಗರಾಜು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾದಂತೆ ನಮ್ಮ ಬೋಧನಾ ಪ್ರಕ್ರಿಯೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು. ತರಗತಿ ಸನ್ನಿವೇಶದಲ್ಲಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಸಮಸ್ಯೆಗಳು  ಕಂಡುಬರುತ್ತವೆ. ತರಬೇತಿ ಅವಧಿಯಲ್ಲಿ ಶಿಕ್ಷಕರು ತಮ್ಮ ಅನುಭವಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬೋಧನಾ ಕಲಿಕಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು. ಹಿರಿಯ ಉಪನ್ಯಾಸಕ  ಇ.   ಹಾಲಮೂರ್ತಿ,       ನಿವೃತ್ತ     ಹಿರಿಯ      ಉಪನ್ಯಾಸಕ ಗಂಗಯ್ಯ  ಉಪನ್ಯಾಸಕರಾದ  ಕೆ.ಜಿ.ಪ್ರಶಾಂತ್,  ಎಸ್.ಬಸವರಾಜು  ಉಪಸ್ಥಿತರಿದ್ದರು. ಫೋಟೋ: ನಗರದ ಡಯಟ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ನಲಿಕಲಿ ಪುನರ್ಬಲನ ತರಬೇತಿಯಲ್ಲಿ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಮಾತನಾಡಿದರು.