
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಮೇ,22- ತಾಲ್ಲೂಕಿನ ತೆಕ್ಕಲಕೋಟೆಯಲ್ಲಿ ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ನಿವಾಸದ ಕಛೇರಿಯ ಆವರಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋತಿರುವ ಕಾರಣ ಆತ್ಮಾಅವಲೋಕನ ಸಭೆಯನ್ನು ನಡೆಸಿದರು.
ತಾಲ್ಲೂಕಿನಲ್ಲಿ ಪಕ್ಷ ಸೋತರು ಕಾರ್ಯಕರ್ತರನ್ನು ಬೆನ್ನ ಯಿಂದೆನೆ ಇಟ್ಟುಕೊಂಡು ನಿರಂತರವಾಗಿ ಹೋರಾಟ ಮಾಡಲು ಸದ ಸಿದ್ದರಾಗಿರುವ ಮಾಜಿ ಶಾಸಕ ಸೋಮಲಿಂಗಪ್ಪ ತಿಳಿಸಿದರು.
ವಿಶ್ವಾಸಕ್ಕೆ ಮೃತಿಯಾಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕಾರ್ಯಕರ್ತರಿಗೆ ತೊಂದರೆಯಾದಲ್ಲಿ ಪೊಲೀಸ್ ಠಾಣೆಯ ಗೇಟ್ ಮುಂದೆ ನ್ಯಾಯಕ್ಕಾಗಿ ನಾನೇ ನಿಲ್ಲುತ್ತೆನೆ, ಕಾಂಗ್ರೇಸ್ ಪಕ್ಷವು ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ಈ ಸುಳ್ಳು ಭರವಸೆಗಳ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ,
ಸೋಲೆ ಗೆಲುವಿನ ದಾರಿಯಾಗಿದೆ, 1999ರಲ್ಲಿ ಸೋತರು 2004ರಲ್ಲಿ ಗೆಲ್ಲಲು ದಾರಿಯಾಯಿತು ಆಗಿನ ತಾಲ್ಲೂಕಿನಲ್ಲಿ ಮೀಸಲಾತಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದೆನೆ, ನಿಮಗೆ ಪ್ರೀ ನಮಗೆ ಪ್ರೀ ಎನ್ನುವ ಮಾತು ಸಮಂಜಸ ಅಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ತಿಳಿಯಲಿ ಎಂದರು, ಕಾಂಗ್ರೇಸ್ ಸರ್ಕಾರವು ಐದು ಯೋಜನೆಗಳನ್ನು ಪ್ರೀಯಾಗಿ ಕೊಡದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಮುಖಾಂತರ ಬೃಹತ್ ಹೋರಾಟ ಮಾಡಲಾಗುತ್ತದೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ತೊಂದರೆಗಳನ್ನು ಮಾಡಿದರೆ ಕಾರ್ಯಕರ್ತರ ಯಿಂದ ನಿಲ್ಲಲು ಸಿದ್ದನಾಗಿರುತ್ತನೆ, ನಮ್ಮ ಪಕ್ಷದ ಕಾರ್ಯಕರ್ತರ ಹೋರಾಟದಿಂದ ನಾನು ಮೂರು ಬಾರಿ ಶಾಸಕನಾಗಿ ಗೆದ್ದು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೆನೆ, ಚುನಾವಣೆಯಲ್ಲಿ ಸೋತಿದ್ದೆನೆ ಎಂದು ಯಾವೊಬ್ಬ ಕಾರ್ಯಕರ್ತರು ಭಯಪಡುವ ಅವಶ್ಯಕತೆ ಇಲ್ಲ ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷ ಗೆಲ್ಲಲು ಶ್ರಮ ವಹಿಸುತ್ತವೆ ಎಂದು ಹೇಳಿದರು.
ಪಕ್ಷದ ಮುಖಂಡರಾದ ದೇಶನೂರು ಹುಲುಗಪ್ಪ, ಕುಂಟ್ನಾಳ್ ಮಲ್ಲಿಕಾರ್ಜುನ, ದಮ್ಮುರು ಸೋಮಪ್ಪ ಮಾತನಾಡಿದರು.
ಬಿ.ಇ.ದೊಡ್ಡಯ್ಯ, ಅರ್.ಸಿ ಪಂಪನಗೌಡ,ಉಡೆಗೋಳ ಖಾಜಸಾಬ್, ಸುಳುವಾಳಿ ಮಲ್ಲಿಕಾರ್ಜುನ, ವೆಂಕಟರಮಣ ರೆಡ್ಡಿ, ಮೆಕಾಲಿ ವೀರೇಶ, ಎಂ.ಆರ್ ಬಸವನಗೌಡ, ಶಿವರಾಮ ಗೌಡ, ಎಚ್.ಕೆ ತಿಮ್ಮಪ್ಪ, ರಾಮರಾಜು, ಮಾಣಿಕ್ಯ ರೆಡ್ಡಿ, ಜಡೆರುದ್ರಪ್ಪ ಹಾಗೂ ಕಾರ್ಯಕರ್ತರು ಮತ್ತು ಮುಖಂಡರು ಇದ್ದರು.