ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸರ್ಕಾರದ ಪರಿಹಾರ ಧನ ಬೇಗನೆ ನೀಡಿ:ಸಚಿವ ರಹೀಂಖಾನ

ಬೀದರ, ಜು.3:ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ವಿಳಂಭ ಮಾಡದೆ ಅವರ ದಾಖಲೆಗಳನ್ನು ಪರಿಶೀಲಿಸಿ ಬೇಗನೆ ಪರಿಹಾರ ನೀಡಬೇಕೆಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ರಹೀಂಖಾನ ಹೇಳಿದರು.

ಅವರು ರವಿವಾರ ಜನವಾಡ ಹೋಬಳಿ ರಾಜನಾಳ ಗ್ರಾಮಕ್ಕೆ ಭೇಟಿ ನೀಡಿ ರೈತ ರಾಮಣ್ಣ ತಂದೆ ಹುಲೆಪ್ಪ ಇತ್ತಿಚೆಗೆ ಸಾಲದ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು

ಮೃತ ರೈತ ರಾಮಣ್ಣನಿಗೆ 2 ಎಕರೆ ಜಮೀನಿದ್ದು, ಇಡೀ ಕುಟುಂಬ ಅದರ ಮೇಲೆ ಅವಲಂಭಿತವಾಗಿದೆ ಮತ್ತು ಅವರ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಹಾಗಾಗಿ ವಿಳಂಭ ಮಾಡದೆ ಪರಿಹಾರ ನೀಡಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ರಾಮಣ್ಣ ಆತ್ಮಹತ್ಯ ಮಾಡಿಕೊಂಡಿರುವುದು ನಮಗೆ ದು;ಖದ ಸಂಗತಿಯಾಗಿದೆ ಸರ್ಕಾರದಿಂದ ನಿಮಗೆ ಸಿಗಬೇಕಾದ ಸೌಲಭ್ಯಗಳನ್ನು ಆದಷ್ಟು ಬೇಗನೆ ಸಿಗಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆನೆ ನೀವು ಯಾವುದೇ ಕಾರಣಕ್ಕೆ ಎದೆಗುಂದದಿರಿ ನಿಮ್ಮೊಂದಿಗೆ ನಾವಿದ್ದೆವೆ ಎಂದು ಕುಟುಂಬದ ಸದಸ್ಯರಿಗೆ ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಅಮೃತರಾವ ಚಿಮಕೊಡ, ಡಾ. ಕಾಮಶೆಟ್ಟಿ, ಬೀದರ ತಹಶಿಲ್ದಾರ ದಿಲಶಾದ ಮಹತ್, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ಶಿವಕುಮಾರ, ಗೋರಕ, ಚಂದ್ರಕಾಂತ, ವೆಂಕಟ ಹಾಗೂ ಕೃಷಿ ಅಧಿಕಾರಿಗಳು ಸೇರಿದಂತೆ ರಾಜನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.