ಆತ್ಮಹತ್ಯೆ ಮಾಡಿಕೊಂಡಸ್ಥಿತಿಯಲ್ಲಿ ನವವಿವಾಹಿತೆ ಪತ್ತೆ


ಶಿವಮೊಗ್ಗ, ನ.೭- ನವವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಖ್ಯಾತ ವೈದ್ಯೆ ಅಶ್ವತ್‌ನಗರದ ಜಯಶ್ರೀ ಅವರ ಪುತ್ರ ಆಕಾಶ್ ಹೊಮ್ಮರಡಿ ಅವರ ಪತ್ನಿ ನವ್ಯಶ್ರೀ (೨೩) ಆತ್ಮಹತ್ಯೆಗೆ ಶರಣಾದವರು. ಐದು ತಿಂಗಳ ಹಿಂದೆಯಷ್ಟೇ ನವ್ಯಶ್ರೀ ಅವರಿಗೆ ವಿವಾಹವಾಗಿತ್ತು. ಅಲ್ಲದೆ ಶನಿವಾರ ತುಳಸಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನವ್ಯ ಅರಶಿನ, ಕುಂಕುಮ ಸ್ವೀಕರಿಸಿದ್ದರು. ಬಳಿಕ ಕಾರು ಶೆಡ್‌ಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ. ಸ್ಥಳಕ್ಕೆ ವಿನೋಬ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಆತ್ಮಹತ್ಯೆ ವಿಚಾರವಾಗಿ ನವ್ಯಶ್ರೀ ಕುಟುಂಬಿಕರು ಸಂಶಯ ವ್ಯಕ್ತಪಡಿಸಿದ್ದು, ಪತಿ ಮನೆಯವರೇ ನೇಣು ಬಿಗಿದಿದ್ದಾರೆ ಎಂದು ಆರೋಪಿಸಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದಾಗಿ ಹೀಗೆ ಮಾಡಿರಬಹುದು ಎಂದು ಶಂಕಿಸಿದ್ದಾರೆ ಎನ್ನಲಾಗಿದೆ.