ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕನ ಅಮಾನತ್ತು ವಾಪಸ್‍ಗೆ ಆಗ್ರಹ

ಇಂಡಿ :ಜ.10:ಬಾರ್ ಶೇಡ್ಯೂಲ್ಡ ಡ್ಯೂಟಿಗೆ ಹೋಗಿರುವುದಿಲ್ಲ ಎಂದು ಅಮಾನತ್ತು ಮಾಡಿರುವ ಮೇಲಾ„ಕಾರಿಗಳ ಆದೇಶದಿಂದ ಮಾನಸಿಕಗೊಂಡು ಪೆಟ್ರೋಲ್ ಸುರಿವಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸರ್ಫರಾಜ ಅವರ ಮೇಲಿನ ಅಮಾನತ್ತು ಆದೇಶ ಹಿಂದೆ ಪಡೆದು ಪುನ ಇಂಡಿ ಘಟಕದಲ್ಲಿಯೇ ಕರ್ತವ್ಯ ನಿರ್ವಹಿಸಲು ಆದೇಶ ಮಾಡಬೇಕು.ಘಟಕದಲ್ಲಿರುವ ಕಾರ್ಮಿಕರಿಗೆ ಮೇಲಾ„ಕಾರಿಗಳ ಕಿರುಕುಳ ನಿಲ್ಲಬೇಕು.ಪುನ ಹಿಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು.ಇಲ್ಲವಾದರೆ ರಾಜ್ಯಾಧ್ಯಂ
ತ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಅ್ಯಂಡ್ ವರ್ಕರ್ಸ ಯುನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಐ.ಮುಶ್ರೀಪ ಎಚ್ಚರಿಕೆ ನೀಡಿದರು.

ಅವರು ಪಟ್ಟಣದಲ್ಲಿರುವ ಸಾರಿಗೆ ಘಟಕದ ತಾಲೂಕು ಯುನಿಯನ್ ಪದಾ„ಕಾರಿಗಳ ಭೇಟಿ ಹಾಗೂ ಸಭೆಯಲ್ಲಿ ಮಾತನಾಡಿದರು.

ಬಾರ ಶೇಡ್ಯೂಲ್ಡ ಡ್ಯೂಟಿ ನಿಲ್ಲಿಸಬೇಕು.ಕಾರ್ಮಿಕರಿಗೆ 8 ಗಂಟೆಯ ಕೆಲಸ ನೀಡಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು. ಪ್ರತಿ ತಿಂಗಳು ನಿಗದಿಪಡಿಸಿದ ದಿನಾಂಕದಂದು ವೇತನ ಪಾವತಿಯಾಗಬೇಕು.ನೌಕರರಿಗೆ ಸಾಂದರ್ಭಿಕ ರಜೆ ನೀಡಬೇಕು.ನಮ್ಮ ಈ ಎಲ್ಲ ಬೇಡಿಕೆಗಳು ಕೂಡಲೆ ಈಡೇರಿಸಬೇಕು .ಇಲ್ಲವಾದರೆ ಮುಂಬರುವ ದಿನದಲ್ಲಿ ರಾಜ್ಯಾಧ್ಯಂತ ಯುನಿಯನ್ ಮೂಲಕ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಕಾರ್ಮಿಕರು ಭಯಗೊಳ್ಳಬಾರದು. ಇದು ನಮ್ಮ ಹಕ್ಕು.ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಇಂಡಿ ಘಟಕ ಯುನಿಯನ್ ಅಧ್ಯಕ್ಷ ಎಂ.ಎಲ್.ಚೌದರಿ,ಟಿ.ಡಿ.ಬೆಳಗಲಿ,ನಿಂಗಪ್ಪ ಕವಲಗಿ,ಎ.ಎ.ಕೊರ್ತಿ,ಎನ್.ಎಚ್.ಸೌದಾಗರ,ಎನ್.ಎಚ್.ಮುಲ್ಲಾ,ಸಂಜೀವ ಚವ್ಹಾಣ,ಎ.ಡಿ.ಶಹಾಪೇಠ,ಎಂ.ಎನ್.ಬೊರಗಿ,ಶ್ರೀಶೈಲ ಬೊಳೆಗಾಂವ ಇತರರು ಈ ಸಂದರ್ಭದಲ್ಲಿ ಇದ್ದರು.