ಆತ್ಮವಿಶ್ವಾಸ ವಿದ್ದಲ್ಲಿ ಏನಾದರೂ ಸಾಧನೆ ಸಾಧ್ಯ

ಸಿಂಧನೂರುಸೆ.೧೦ – ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳಿವೆ ಕೇವಲ ಸರ್ಕಾರಿ ನೌಕರಿಯನ್ನು ಆಶ್ರಯಿಸದೆ ,ಆತ್ಮವಿಶ್ವಾಸ ಇದ್ದರೆ ಪ್ರತಿಯೊಬ್ಬರೂ ಏನಾದರೂ ಸಾಧನೆ ಮಾಡಲು ಸಾದ್ಯ ಎಂದು ಡಿವಾಯ್‌ಎಸ್ಪಿ ಬಿ.ಎಸ್ ತಳವಾರ ಹೇಳಿದರು.
ನಗರದ ಸತ್ಯ ಗಾರ್ಡನ್ ನಲ್ಲಿ ನಡೆದ ಎಕ್ಸಲೆಂಟ್ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಪಿ.ಯು.ಸಿ ,ಬಿ.ಎ,ಬಿ.ಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಮಯ ಅಮೂಲ್ಯ ವಾದದ್ದು ಅದನ್ನು ವ್ಯರ್ಥಗೊಳಿಸಬೇಡಿ ಮತ್ತೆಂದು ಸಮಯ ನಮಗಾಗಿ ಬರುವುದಿಲ್ಲ .ವಿದ್ಯಾರ್ಥಿ ಜೀವನ ಬಂಗಾರದ ಜೀವನ ಈ ಜೀವನ ಹಾಳು ಮಾಡಿಕೊಳ್ಳದೇ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಕಾಗುವುದಿಲ್ಲ ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಂಡು ಸಮಾಜಕ್ಕೆ, ಜನ್ಮದಾತರಿಗೆ ,ಕಾಲೀಜಿಗೆ ಉತ್ತಮ ಫಲಿತಾಂಶ ಕೊಡಿ ಎಂದು ವಿದ್ಯಾರ್ಥಿಗಳನ್ನು ಸ್ಪೂರ್ತಿ ಗೊಳಿಸಿದರು.
’ಭೂಮಿಗೆ ಬಿದ್ದ ಬೀಜ ,ಎದೆಗೆ ಬಿದ್ದ ಅಕ್ಷರ ಎಂದು ವ್ಯರ್ಥ ಆಗುವುದಿಲ್ಲ ’ತಂದೆ ತಾಯಿಯರ ಬೆವರಿನ ಹನಿ ಹಾಗೂ ಉಪನ್ಯಾಸಕರ ಬೋಧನೆ ವ್ಯರ್ಥ ಆಗದಂತೆ ಪ್ರತಿ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಿರಿ ಎಂದು ಪಗಡದಿನ್ನಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಗಿರೀಜಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪದವಿ ವಿಭಾಗದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವೇದಿಕೆಯ ಅದ್ಯಕ್ಷತೆಯನ್ನು ಪ್ರಾಚಾರ್ಯರಾದ ಮಂಜುನಾಥ ಸೋಮಲಾಪುರ ವಹಿಸಿದ್ದು ,ಸಂಸ್ಥೆಯ ಅದ್ಯಕ್ಷ ಎಂ.ತಿರುಪತಯ್ಯ ,ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯರಾದ ಡಾ.ಶಿವರಾಜ , ಆರ್.ಸಿ ಪಾಟೀಲ್ ,ಸೈಯದ್ ಹಾರುನ್ ಸಾಹೇಬ್ ಜಾಹಗೀರದಾರ ,ಜಗದೀಶ ಓತುರ ,ವಿರುಪನಗೌಡ,ಡಾ.ಹುಸೇನಪ್ಪ ಅಮರಾಪುರ , ಅಮರೇಗೌಡ ಮಲ್ಲಾಪುರ ,ಪ್ರದೀಪ್ ಪೂಜಾರ್ ,ಪ್ರಾಚಾರ್ಯರು ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಂ.ವೆಂಕಟರಾವ್ ,ವೇದಿಕೆಯಲ್ಲಿ ಉಪಸ್ಥಿತರಿದ್ದರು.