ಆತ್ಮವಲೋಕನ ಸಭೆಯಲ್ಲಿ ಡಿಕೆಸು ಭಾವುಕ

ರಾಮನಗರ.ಜೂ.೧೦- ಎಲ್ಲವನ್ನೂ ದೇವರು ನೋಡ್ಕೋತ್ತಾನೆ ಧೈರ್ಯವಾಗಿರಿ ಯಾರಿಗೂ ಅಂಜಿಬೇಕಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆತ್ಮಾವಲೋಕನ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಡಿಕೆ ಶಿವಕುಮಾರ್‌ಗೆ ಸೋಲಾಗಿದ್ದು ಭಾರೀ ಮುಖಭಂಗ ಅನುಭವಿಸಿದ್ದಾರೆ.
ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ನಿಮ್ಮಲ್ಲರಿಗೂ ನಾನು ನಿಮ್ಮ ಮನೆಗೆ ಬರುವುದಿಲ್ಲವೆಂದು ನಿಮಗೆ ಕೊರಗಿತ್ತು. ಇನ್ನು ಮುಂದೆ
ನಿಮ್ಮ ಬೀದಿಗೆ, ಮನೆಗೆ ಬರುತ್ತೇನೆ. ನಿಮ್ಮ ಜತೆಗೆ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತೇನೆ. ಧೈರ್ಯವಾಗಿರಿ ಯಾರಿಗೂ ಅಂಜಬೇಕಿಲ್ಲ ಎಲ್ಲವನ್ನೂ ದೇವರು ನೋಡ್ಕೋತ್ತಾನೆ ಎಂದು ಕಾರ್ಯಕರ್ತರಿಗೆ ಗದ್ಗದಿತರಾಗಿ ಹೇಳಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ, ನಾನು ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು
ಹೇಳಿ ಕುತೂಹಲ ಮೂಡಿಸಿದ್ದಾರೆ.
ಮಾಜಿ ಸಿಎಂ ಎಚ್‌ಡಿ ಕುಮಾರ್ ಸ್ವಾಮಿ ಸ್ಪರ್ಧಿಸಿದ್ದರಿಂದ ಚನ್ನಪಟ್ಟಣದ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ಉಪಚುನಾವಣೆ
ನಡೆಯಬೇಕಿದೆ.