ಆತ್ಮಬಲ, ದೈವಬಲ ಇದ್ದರೆ ನಿರೋಗಿ ಸಾಧ್ಯ: ಶ್ರೀಗಳು

ಬಸವಕಲ್ಯಾಣ:ಮೇ.31: ನೀಲಗಂಗಾ ಆಯುರ್ವೆದಿಕ್ ಮೆಡಿಕಲ್ ಕಾಲೇಜ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಯರಬಾಗ ಮತ್ತು ವೀರ ಪುಲಕೇಶಿ ರೂರಲ್ ಆಯುರ್ವೆದಿಕ್ ಮೆಡಿಕಲ್ ಕಾಲೇಜ ಆಸ್ಪತ್ರೆ ಸಂಶೋಧನಾ ಕೇಂದ್ರ ಬದಾಮಿ ಇವರ ಆಶ್ರಯದಲ್ಲಿ ಕೋವಿಡ್ 19 ರೋಗಿಗಳ ಸಲುವಾಗಿ ಧೈರ್ಯ ತುಂಬಲು ಡಾ|| ಅನೀತಾ ಶಂಕರಗೌಡ ಇವರು ಹಮ್ಮಿಕೊಂಡಿರುವ ಧೈರ್ಯಂ ಸರ್ವತ್ರ ಸಾಧನಂ ವೆಬಿನಾರ್ ಕಾರ್ಯಕ್ರಮದಲ್ಲಿ ಹಾಕೂಡ ಸಂಸ್ಥಾನದ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ಮಾತನಾಡುತ್ತ, ಆಪಾತ್ಕಾಲದಲ್ಲಿ ಇದ್ದವರಿಗೆ ಮಾಡಿದ ಒಂದು ಸಹಾಯ ನೂರು ಉಪದೇಶಗಳಿಗೆ ಸಮಾನ ಎಂದು ತಿಳಿಸಿದರು.

ಕೋವಿಡ್ ಸಂಧರ್ಭದಲ್ಲಿ ಎಲ್ಲಾ ವೈಧ್ಯರು ಸಲ್ಲಿಸುವ ಸೇವೆ ಶ್ಲಾಘನೀಯ ವಾಗಿದೆ. ಕೋವಿಡ್ ಸೊಂಕಿತರು ಯಾರೂ ಧೈರ್ಯ ಬಿಡಬೇಡಿ ಆತ್ಮಬಲ ಮತ್ತು ದೈವಬಲ ಇದ್ದರೆ ರೋಗದಿಂದ ಬೇಗ ಗುಣಮುಖರಾಗಬಹುದು, ನೀವು ನಂಬಿಗೆ ಇಟ್ಟಿರುವ ದೇವರನ್ನು ಸದಾಕಾಲ ಸೇವೆ ಮಾಡಿ ಎಂದು ನುಡಿದರು.