ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ಮೀಸಲು: ಬಿ.ಸಿ.ಪಾಟೀಲ

ಧಾರವಾಡ, ನ.12 ಈ ಬಾರಿ ರಾಜ್ಯದೆಲ್ಲೆಡೆ ಕಳೆದ ವರ್ಷಕ್ಕಿಂತ ಶೇ.25 ರಷ್ಟು ಅಧಿಕ ಮಳೆಯಾಗಿದೆ.ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗಗಳ ಕೆಲವು ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಯೂ ಆಗಿದೆ. ರೈತರ ಆತ್ಮಹತ್ಯೆಗೆ ನೀರಾವರಿ, ಕೃಷಿ ಸಮಸ್ಯೆಗಳು ಕಾರಣವಾಗಬಾರದು. ಬರದ ನಾಡಾಗಿರುವ ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವ ನೀರನ್ನೇ ನ್ಯಾಯೋಚಿತವಾಗಿ ಬಳಸಿ ಯಶಸ್ವಿ ಕೃಷಿ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಬೇಕು, ಆಹಾರ ಸಂಸ್ಕರಣೆ ಘಟಕಗಳಿಗೆ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಈ ನಿಟ್ಟಿನಲ್ಲಿ ರೈತರು ಹೆಜ್ಜೆಯಿಟ್ಟು ಆರ್ಥಿಕ ಸದೃಢತೆ ಸಾಧಿಸಬೇಕು. ರಾಜ್ಯದ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಒಂದು ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆ ಇದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವವಿದ್ಯಾಲಯದ 34 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,

ಹಳೆಯ ಕೃಷಿ ಪದ್ಧತಿಯಲ್ಲಿನ ಉತ್ತಮ ಅಂಶಗಳನ್ನು ಉಳಿಸಿಕೊಂಡು, ತಂತ್ರಜ್ಞಾನ ಆಧಾರಿತ ಕೃಷಿ ಮಾಡಬೇಕು. ಬಿತ್ತನೆ ಕಾಲದಲ್ಲಿ ಕೂರಿಗೆ ಪದ್ಧತಿ ಉಳಿಸಿಕೊಂಡು ನಂತರ ಹರಗುವ, ಊಳುವ ಸಂದರ್ಭದಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. 1986 ರಲ್ಲಿ ಸ್ಥಾಪನೆಯಾದ ಧಾರವಾಡ ಕೃಷಿ ವಿ.ವಿ. ಈ 34 ವರ್ಷಗಳ ಕಾಲಘಟ್ಟದಲ್ಲಿ ಪ್ರಮುಖ ಸಾಧನೆಯ ಗರಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸಾಧನೆ ಮಾಡುತ್ತಿದ್ದಾರೆ.ದೇಶದ ಉತ್ತಮ ಸಾವಿರ ವಿ.ವಿ.ಗಳಲ್ಲಿ ಧಾರವಾಡ ಕೃಷಿ ವಿ.ವಿ.83 ನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಬರುವ ದಿನಗಳಲ್ಲಿ ಈ ಗುಣಮಟ್ಟ ಉತ್ತಮಗೊಳ್ಳುತ್ತ ಸಾಗಬೇಕು. ಇಲ್ಲಿಯವರೆಗೆ ವಿ.ವಿ.ಯು ಸುಮಾರು 200 ಕ್ಕೂ ಹೆಚ್ಚು ತಳಿಗಳನ್ನು ಅಭಿವೃದ್ಧಿ ಪಡಿಸಿ ರೈತರ ಮತ್ತು ರಾಜ್ಯದ ಆದಾಯ ಉತ್ಪನ್ನ ಹೆಚ್ಚಿಸಿರುವುದು ಅಭಿನಂದನೀಯ . ವಿಶ್ವಬ್ಯಾಂಕ್ ಪ್ರಾಯೋಜಕತ್ವದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅಗ್ರಿ ವಾರ್ ರೂಂ ಸ್ಥಾಪಿಸಿ, ಕೃಷಿಕರ ಉತ್ಪನ್ನಗಳ ಮಾರಾಟಕ್ಕೆ ನೆರವಾಗಿರುವುದು ಹೆಮ್ಮೆಯ ಸಂಗತಿ.ಕೃಷಿ ವಿವಿಯು ಕೇವಲ ಅಕಾಡೆಮಿಕ್ ತರಗತಿಗಳಿಗೆ ಸೀಮಿತವಾಗದೇ ರೈತ ಸಮುದಾಯಕ್ಕೆ ಈ ಕೃಷಿತಜ್ಞರ ಮಾರ್ಗದರ್ಶನ ಸಿಗುವಂತಾಗಬೇಕು. ಕೃಷಿಕರಿಗೆ ಸಕಾಲದಲಿ ಕೃಷಿ ವಿವಿಗಳಿಂದ ಮಾರ್ಗದರ್ಶನ ಸಿಗಬೇಕು ಎಂದು ಸಚಿವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಮಹಾದೇವ ಬ.ಚೆಟ್ಟಿ ಮಾತನಾಡಿ, ಕೃಷಿ ವಿವಿಯು ನವೋದ್ಯಮ ಕೇಂದ್ರದ ಮೂಲಕ ಕೃಷಿ ಉದ್ಯಮಕ್ಕೆ ಪೆÇ್ರೀತ್ಸಾಹಿಸುತ್ತಿದೆ. ಬೀಜೋತ್ಪಾದನೆ, ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಯೋಜನೆ ಜಾರಿಗೊಳಿಸಲಾಗುತ್ತಿದೆ. ವಿವಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು 47 ಕ್ಕೂ ಹೆಚ್ಚು ಪ್ರಕಟಣೆಗಳನ್ನು ಇಲ್ಲಿನ ಶಿಕ್ಷಕರು ಹೊರತಂದಿದ್ದಾರೆ. 5 ಕೋಟಿ ರೂ.ವೆಚ್ಚದಲ್ಲಿ ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುತ್ತಿದೆ. ಕೃಷಿ ಸಚಿವರ ಆಶಯದಂತೆ ವಿ.ವಿ.ಯು ಅಗ್ರಿವಾರ್ ರೂಂ ಸ್ಥಾಪಿಸಿ, ರೈತರಿಗೆ ನೆರವಾಗುತ್ತಿದೆ ಎಂದು ಕೃಷಿ ವಿವಿಯ ಸಾಧನೆಗಳನ್ನು ವಿವರಿಸಿದರು.

ನ್ಯೂಸ್ ಲೆಟರ್, ಕೃತಿಗಳ ಬಿಡುಗಡೆ: “ಯುನಿವರ್ಸಿಟಿ ಎಟ್ ಎ ಗ್ಲಾನ್ಸ್ “ನ್ಯೂಸ್ ಲೆಟರ್, ಆತ್ಮ ನಿರ್ಭರ ಕಾರ್ಯಕ್ರಮ ಅನುμÁ್ಠನ, ಕೃಷಿ ಉದ್ಯಮಶೀಲತೆ, ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಚಟುವಟಿಕೆಗಳ ಕಿರುಪುಸ್ತಕ, “ಆಶಿಯಾನಾ”ಕಾಫಿಟೇಬಲ್ ಪುಸ್ತಕ, ಬಿಟಿ ಹತ್ತಿಯಲ್ಲಿ ಐಸಿಎಂ ತಂತ್ರಜ್ಞಾನ ಹಾಗೂ ಸಮಗ್ರ ಸುಧಾರಣೆ ಕುರಿತ ಫೆÇೀಲ್ಡರ್, ವಿವಿಧ ತರಬೇತಿಗಳ ಡಿವಿಡಿಗಳನ್ನು ಹಾಗೂ ಸ್ಟಾರ್ಟ್ ಅಪ್ ಪೆÇ್ರಜೆಕ್ಟ್ ಗಳು, ಇಂಗ್ಲಿμï ಕಲಿಕಾ ಲ್ಯಾಬ್ ಸಾಫ್ಟ್‍ವೇರುಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.ಸಂಸ್ಥೆಯ ಆಂತರಿಕ ಸವಾರ್ಂಗೀಣ ಅಭಿವೃದ್ಧಿ ಕುರಿತ ಸಾಕ್ಷ್ಯಚಿತ್ರ ವೀಕ್ಷಿಸಿದರು.

ಪ್ರಶಸ್ತಿ ಪ್ರದಾನ: ಕೃಷಿಯಲ್ಲಿ ಬೋಧನೆ, ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದಿರುವ 76 ಗಣ್ಯರಿಗೆ, ಕೃಷಿ ವಿ.ವಿ.ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಿ ಸಚಿವರು ಗೌರವಿಸಿದರು.

ಕೃಷಿ ವಿ.ವಿ.ಯ ಪ್ರಥಮ ಕುಲಪತಿ ಡಾ.ಜೆ.ವಿ.ಗೌಡ, ಕೃಷಿ ವಿ.ವಿ.ಆಡಳಿತ ಮಂಡಳಿ ಸದಸ್ಯರಾದ ಶಶಿಮೌಳಿ ಕುಲಕರ್ಣಿ, ವೈ.ಎನ್.ಪಾಟೀಲ, ಪಿ.ಮಲ್ಲೇಶ, ಡಾ.ಎಸ್.ಬಿ.ಕಲಘಟಗಿ, ಎಲ್.ಎಸ್.ಅಜಗಣ್ಣನವರ್, ಡಾ.ಎಸ್.ಬಿ.ಹೊಸಮನಿ, ಕುಲಸಚಿವ ಡಾ.ವಿ.ಆರ್.ಕಿರೇಸೂರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯಲ್ಲಪ್ಪ ಮಾಳಗಿ ಮತ್ತು ಸಂಗಡಿಗರು ರೈತಗೀತೆ ಪ್ರಸ್ತುತ ಪಡಿಸಿದರು.