ಆತ್ಮನಿರ್ಭರ ನಿಧಿ : ಸದುಪಯೋಗಕ್ಕೆ ಕರೆ

ಲಿಂಗಸುಗೂರು.ನ.೧೨- ಸ್ಥಳೀಯ ಪುರಸಭೆ ಕಚೇರಿಯಲ್ಲಿ ಆತ್ಮನಿರ್ಭರ ನಿಧಿಯ ಫಲಾನುಭವಿಗಳಿಗೆ ಅರ್ಜಿ ನಮೂನೆಗಳನ್ನು ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ರತ್ನ, ಸಮಾಜ ಸೇವಕ ಮಹ್ಮದ್ ಹಾಜಿಬಾಬಾ ಕರಡಕಲ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯಡಿ ಬೀದಿಬದಿಯ ವ್ಯಾಪಾರಿಗಳಿಗೆ ಸಾಲದ ಸೌಲಭ್ಯ ನೀಡಲಾಗುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪುರಸಭೆ ಸಿಬ್ಬಂಧಿಗಳು ಹಾಗೂ ಫಲಾನುಭವಿಗಳು ಈ ಸಂದರ್ಭದಲ್ಲಿ ಇದ್ದರು.