ಆತ್ಮಜ್ಞಾನ ಸಂಪಾದನೆಯಿಂದ ವಿಶ್ವ ಪರಿವರ್ತನೆ: ಬಿ.ಕೆ ಸಂತೋಷ ದೀದಿ

(ಸಂಜೆವಾಣಿ ವಾರ್ತೆ)
ಬೀದರ್:ನ.5: ಆತ್ಮಜ್ಞಾನ ಸಂಪಾದನೆಯಿಂದ ವಿಶ್ವ ಪರಿವರ್ತನೆ ಸಾಧ್ಯವಿದೆ ಎಂದು ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ಮಹಾರಾಷ್ಟ್ರ ವಲಯದ ಉಸ್ತುವಾರಿಗಳಾದ ಬಿ.ಕೆ ಸಂತೋಷ ದೀದಿ ಪ್ರತಿಪಾದಿಸಿದರು.
ಇತ್ತಿಚೀಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಬ್ರಹ್ಮಾಕಜುಮಾರಿ ಕೇಂದ್ರ ಪಾವನಧಾಮ ವತಿಯಿಂದ ಆಯೋಜಿಸಿದ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಮಾತ್ಮ ಒಬ್ಬ ಚೈತನ್ಯ ಜ್ಯೋತಿ. ನಾಲ್ಕು ದಿಕ್ಕುಗಳಲ್ಲಿ ಜ್ಞಾನವೆಂಬ ಜ್ಯೋತಿ ಪ್ರಜ್ವಲಿಸುತ್ತಾರೆ. ನಾಲ್ಕು ದಿನಗಳ ಕಾಲ ನಾವು ಮಣ್ಣಿನ ದೀವಟಗಿಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸುತ್ತೇವೆ. ಆದರೆ, ದೀಪರಾಜ ಪರಮಾತ್ಮನು ಧರೆಗೆ ಅವತರಿಸಿ ಮುಳುಗಿ ಹೋದ ನಮ್ಮ ಚೈತನ್ಯ ಆತ್ಮಗಳನ್ನು ಜ್ಞಾನವೆಂಬ ದೀಪ ಬೆಳಗಿಸಿ ಜಾಗೃತವಾಗಿಸುತ್ತಾನೆ. ಜಾಗೃತವಾದ ಜ್ಞಾನವೆಂಬ ಆತ್ಮವು ಕೇವಲ ತನಗಾಗಿ ಬದುಕದೇ ಇಡೀ ವಿಶ್ವ ಕಲ್ಯಾಣಕ್ಕಾಗಿ ಜೀವಿಸುತ್ತದೆ. ಇದು ಪರಮಾತ್ಮನನ್ನು ಒಳ್ಳೆಯ ರೀತಿಯಲ್ಲಿ ನೋಡುತ್ತದೆ, ಗುರ್ತಿಸಿ ಪರಮಾತ್ಮನ ಪ್ರೀತಿಗೆ ಪಾತ್ರವಾಗುತ್ತದೆ. ಪ್ರತ್ಯೇಕವಾಗಿ ಪ್ರಕಾಶಿಸುವ ಜ್ಯೋತಿ ಸರ್ವವ್ಯಾಪಿಯಾಗಿರದೇ ಸಂಘಟನಾತ್ಮಕ ದಿವ್ಯಜ್ಯೋತಿ ವಿಶ್ವಮಾನ್ಯವಾಗುತ್ತದೆ ಎಂದರು.
ಯೋಗಿ ಆತ್ಮಗಳ ಜ್ಞಾನ ಕಂಪನ 36 ಮೈಲುಗಳ ದೂರದ ವರೆಗೆ ಪಸರಿಸುತ್ತದೆ. ಅದರಲ್ಲೂ ರಾಜಯೋಗಿ ಆತ್ಮಗಳ ಕಂಪನ ಇಡೀ ವಿಶ್ವವ್ಯಾಪಕವಾಗಿರುತ್ತದೆ. ಪರಮಾತ್ಮನ ಮಕ್ಕಳಾದ ನಮ್ಮ ಮೇಲೆ ಜಗತ್ತಿನಲ್ಲಿ ಶಾಂತಿ ಸೇರಿದಂತೆ ಸಪ್ತಗುಣಗಳು ಬಿತ್ತರಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮನುಷ್ಯನ ಜೀವನದಲ್ಲಿ ಅತಿ ದೊಡ್ಡ ಖಜಾನೆ ಸಮಯ. ಬೇರೆ ಖಜಾನೆಗಳನ್ನು ಸಂಘಟಿಸಬಹುದು, ಒಗ್ಗೂಡಿಸಬಹುದು, ಸಂಗ್ರಹಿಸಬಹುದು ಹಾಗೂ ಉತ್ಪಾದಿಸಬಹುದು. ಆದರೆ ಸಮಯರೂಪಿ ಖಜಾನೆ ಒಂದು ಸಾರಿ ತೆರಳಿದರೆ ಮರಳಿ ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ಸಮಯವನ್ನು ನಾವು ವ್ಯರ್ಥ ಮಾಡಿದರೆ ಒಂದು ದಿನ ಸಮಯ ನಮ್ಮನ್ನು ಅರ್ಥಹೀನವನ್ನಾಗಿಸುತ್ತದೆ. ಈಗ ನಾವೆಲ್ಲ ಸಂಗಮ ಯುಗದಲ್ಲಿ ಇದ್ದೇವೆ. ಇದು ಅತ್ಯಮುಲ್ಯವಾದ ಸಮಯ. ಈ ಸಮಯದಲ್ಲಿ ನಾವು ಸಮಯಕ್ಕೆ ಬೆಲೆ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಪಶ್ಚಾತಾಪ ಮಾತ್ರ ಬಾಕಿ ಇರುತ್ತದೆ ಎಂದರು.
ಮಹಾರಾಷ್ಟ್ರ ವಲಯ ಮುಂಬೈನ ಸಾಯಿನ್‍ದ ಬಿ.ಕೆ ನಿತಿನ್ ಭಾಯಿ ಮಾತನಾಡಿ, ಬೆಳಗ್ಗಿನ ಜಾವ ಅಮೃತ ವೇಳೆಯಲ್ಲಿ ಮುರ್ಲಿ ಆಲಿಸುವುದರಿಂದ ನಮ್ಮ ದೈನಂದಿನ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಪರಮಾತ್ಮನನ್ನು ಪ್ರತಿ ದಿನ ನಾವು ಮೂರ್ನಾಲ್ಕು ಬಾರಿ ಸ್ಮರಿಸುವುದರಿಂದ ನಮ್ಮ ನಡೆ, ನುಡಿಯಲ್ಲಿ ಶುಚಿತ್ವ ಕಂಡು ಬರುತ್ತದೆ. ಇದರಿಂದ ಜ್ಞಾನ, ಪ್ರೇಮ, ಸುಖ, ಶಕ್ತಿ, ಶಾಂತಿ, ಆನಂದ ಹಾಗೂ ಪವಿತ್ರತೆ ಹೀಗೆ ಏಳು ಗುಣಗಳು ಜಾಗೃತಗೊಳ್ಳುತ್ತವೆ ಎಂದರು. ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಪ್ರಾಸ್ತಾವಿಕ ಮಾತನಾಡಿದರು.
ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ, ಮುಂಬೈನ ಪ್ರಭಾಕರ ಭಾಯಿ, ಮುಂಬೈನ ಬಿ.ಕೆ ಭಾವನಾ ಬಹೆನ್, ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಶಾಖಾ ಕೇಂದ್ರಗಳ ಮುಖ್ಯಸ್ಥರಾದ ಜಹಿರಾಬಾದ್‍ನ ಬಿ.ಕೆ ಉಷಾ ಬಹೆನ್, ಹುಮನಾಬಾದ್‍ನ ಬಿ.ಕೆ ಮಂದಾ ಬಹೆನ್, ಚಿಟಗುಪ್ಪದ ಬಿ.ಕೆ ಪಾರ್ವತಿ ಬಹೆನ್, ಹಳ್ಳಿಖೇಡ್‍ದ ಬಿ.ಕೆ ಸುಮನ ಬಹೆನ್, ಸ್ಥಳಿಯ ಪಾವನಧಾಮದ ಬಿ.ಕೆ ಗುರುದೇವಿ ಬಹೆನ್, ಬಿ.ಕೆ ಮಂಗಲಾ ಬಹೆನ್, ಮನ್ನಾಯಿಖೆಳ್ಳಿಯ ಬಿ.ಕೆ ಸವಿತಾ ಬಹೆನ್, ನಾರಾಯಣಖೇಡದ ಬಿ.ಕೆ ಲಕ್ಷ್ಮೀ ಬಹೆನ್, ಕೋಹಿರ್‍ದ ಬಿ.ಕೆ ಸವಿತಾ ಬಹೆನ್, ಮೇಹಕರ್‍ದ ಬಿ.ಕೆ ರಾಜೇಶ್ವರಿ ಬಹೆನ್, ಹಲಬರ್ಗಾದ ಬಿ.ಕೆ ವಾಣಿ ಬಹೆನ್, ಮನ್ನಳ್ಳಿಯ ಬಿ.ಕೆ ಮೀನಾ ಬಹೆನ್, ನೌಬಾದ್‍ದ ಬಿ.ಕೆ ಜ್ಯೋತಿ ಬಹೆನ್, ರಾಂಪೂರೆ ಕಾಲೋನಿಯ ಬಿ.ಕೆ ವಿಜಯಲಕ್ಷ್ಮೀ ಬಹೆನ್, ಜನವಾಡದ ಬಿ.ಕೆ ಆನಿತಾ ಬಹೆನ್, ಕಮಠಾಣಾದ ಬಿ.ಕೆ ಸಪ್ನಾ ಬಹೆನ್, ಸ್ಥಳಿಯ ಪಾವನಧಾಮದ ಬಿ.ಕೆ ಶಿಲ್ಪಾ ಬಹೆನ್ ವೇದಿಕೆ ಮೇಲಿದ್ದರು.
ಆರಂಭದಲ್ಲಿ ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ತಂಡದಿಂದ ಸ್ವಾಗತ ನೃತ್ಯ ಜರುಗಿತು. ಬಿ.ಕೆ ಪ್ರಭಾಕರ ಕೋರವಾರ ಸರ್ವರನ್ನು ಸ್ವಾಗತಿಸಿದರು. ಭಾಲ್ಕಿಯ ಬಿ.ಕೆ ರಾಧಾ ಬಹೆನ್ ಕಾರ್ಯಕ್ರಮ ನಿರೂಪಿಸಿದರು. ಸಹಸ್ರಾರು ಸಹೋದರ, ಸಹೋದರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.