ಆತ್ಮಜ್ಞಾನ ಪಡೆದುಕೊಳ್ಳಬೇಕು, ಜ್ಞಾನದಿಂದಲೇ ಮುಕ್ತಿ : ಸಂತೋಷ

ತಾಳಿಕೋಟೆ:ಎ.27: ಆಧ್ಯಾತ್ಮ ಧರ್ಮದ ಮೇಲೆ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಮೋಕ್ಷವನ್ನು ಪಡೆದುಕೊಳ್ಳುವದು ನಮ್ಮ ಭಾರತ ದೇಶದ ಸಂಸ್ಕøತಿಯಾಗಿದೆ ಕಾಲಕಾಲಕ್ಕೆ ಅನಾಚಾರ ಅತ್ಯಾಚಾರಗಳು ನಡೆಯುತ್ತಿದ್ದಾಗ ಆ ಸಮಯದಲ್ಲಿ ಮಹಾತ್ಮರು ಮಹಾಯೋಗಿಗಳು ಜನ್ಮತಾಳಿ ಅವತರಿಸಿ ಬಂದು ಧರ್ಮವನ್ನು ಎತ್ತಿಹಿಡಿದವರಾಗಿದ್ದಾರೆ ಅಂತಹ ಮಹಾನ್ ಯೋಗಿಗಳಲ್ಲಿ ಸನಾತನ ಧರ್ಮಕ್ಕಾಗಿ ಶ್ರಮಿಸಿದವರು ಶಂಕರಾಚಾರ್ಯರವರಾಗಿದ್ದಾರೆಂದು ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ|| ಸಂತೋಷ ಭಟ್ ಜೋಷಿ ಅವರು ನುಡಿದರು.

    ಮಂಗಳವಾರರಂದು ಭಗವದ್ಗೀತಾ ಸೇವಾ ಸಮೀತಿಯವತಿಯಿಂದ ಸ್ಥಳೀಯ ಶ್ರೀ ಕೃಷ್ಣ ದೇವಾಲಯದಲ್ಲಿ ಏರ್ಪಡಿಸಲಾದ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ಅವರು ಶಂಕರಾಚಾರ್ಯರು ದೇವನ ಒಲುಮೆಯಿಂದ ಜನ್ಮತಾಳಿದವರಾಗಿದ್ದರು 8 ವರ್ಷದವರೆಗಿನ ಇದ್ದ ಅವರು ವಯೋಮಿತಿಯನ್ನು ವೇದವ್ಯಾಸರ ಕೃಪೆಯಿಂದ 32 ವರ್ಷ ಹೆಚ್ಚಾಗಲು ಕಾರಣವಾಯಿತೆಂದರು. ಶೃಂಗೇರಿ ಪೀಠದಲ್ಲಿ ಶಕ್ತಿದೇವಿಯ ಪೀಠವನ್ನು ಸ್ಥಾಪನೆ ಮಾಡಿದ ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ಆತುರದ ಸನ್ಯಾಸತ್ವವನ್ನು ಸ್ವೀಕರಿಸಿ ಲೋಕಪ್ರಖ್ಯಾತರಾಗಿ ಸನಾತನ ಧರ್ಮ ಉಳಿಸಲು ಮುಂದಾಗಿದ್ದರೆಂದರು. ವೇದ ಉಪನಿಷತ್ ಭಗವದ್ಗೀತೆ ವ್ಯಾಖ್ಯಾನ ಭ್ರಹ್ಮಸೂತ್ರ ಅನೇಕ ಟಿಪ್ಪಣೆಗಳನ್ನು ಬರೆಯುತ್ತ ಸಾಗಿದ್ದ ಶಂಕರಾಚಾರ್ಯರು ಜಗತ್ಪ್ರಸಿದ್ದತೆ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆಂದು ಹೇಳಿದ ಜೋಷಿ ಅವರು ಕೇರಳದಲ್ಲಿ ಜನ್ಮತಾಳಿದ ಶಂಕರಾಚಾರ್ಯರ ಸ್ವರ್ಣತೇಲಿ ಎಂಬ ಮನೆತನವು ಇವತ್ತಿಗೂ ನೋಡಲು ದೊರೆಯುತ್ತದೆ ಎಂದು ಹೇಳಿದ ಅವರು ಇಂದಿನ ದಿನಮಾನದಲ್ಲಿ ಜನತೆಗೆ ಆಧ್ಯಾತ್ಮದತ್ತ ಒಲವು ಇಲ್ಲಾ ಎಂದು ವಿಷಾಧಿಸಿದ ಅವರು ಹಿರಿಯರು ಯುವ ಜನಾಂಗಕ್ಕೆ ಅನೇಕ ರಾಮಾಯಣ ಮಹಾಭಾರತದಂತಹ ಕಥೆಗಳನ್ನು ಹೇಳಿ ಮನವರಿಕೆ ಮಾಡಿ ಧರ್ಮದ ನೆಲೆಯಲ್ಲಿಯೇ ಇಂದಿನ ದಿನಮಾನದಲ್ಲಿ ಬದುಕುತ್ತಾ ಸಾಗಿದ್ದೇವೆ ಎಂಬುದನ್ನು ಅರಿವು ಮೂಡಿಸಬೇಕೆಂದರು.
 ಇನ್ನೋರ್ವ ಶಾರದಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಶಾಂತಾಬಾಯಿ ನೂಲಿಕರ ಅವರು ಮಾತನಾಡಿ ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸಿದ ಶ್ರೀ ಶಂಕರಾಚಾರ್ಯರು ನಿಷ್ಕಾಮದಿಂದ ಪಂಚಜ್ಞಾನಗಳನ್ನು ಮಾಡಬೇಕೆಂಬುದನ್ನು ತಿಳಿಹೇಳಿದ್ದಾರೆ ಕೇರಳದ ಕಾಲಾಡಿ ಎಂಬ ಗ್ರಾಮದಲ್ಲಿ ಜನಿಸಿದ ಶಂಕರಾಚಾರ್ಯರು ಶಿವನ ಒಲುಮೆಯಿಂದಲೇ ಜನ್ಮತಾಳಿದ ಇವರು ಚಿಕ್ಕವರಿರುವಾಗಲೇ ಹಿಂದೂ ಧರ್ಮ ಅದ್ವೈತ ಧರ್ಮ ಪ್ರಚಾರಕ್ಕಿಳಿದು ಸನ್ಯಾಸ ಧರ್ಮವನ್ನು ಸ್ವೀಕರಿಸಲು ಮುಂದಾಗುತ್ತಾರೆಂದು ಶಂಕರಾಚಾರ್ಯರ ಸವಿಸ್ತಾರ ಇತಿಹಾಸವನ್ನು ವಿವರಿಸಿದರು.
 ಇನ್ನೋರ್ವ ಮುಖ್ಯ ಅಥಿತಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು ಮಾತನಾಡಿ ಶಂಕರಾಚಾರ್ಯರು ಮಾತಾಪಿತರಿಗೆ ಒಬ್ಬನೇ ಮಗನಾಗಿದ್ದರು ಅವರ ಒಲುವು ಆಧ್ಯಾತ್ಮದತ್ತವೇ ಮುಂದುವರೆದಿತ್ತು ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ ತಾಯಿಯ ರಕ್ಷಣೆಗೆ ಮುಂದಾಗಿದ್ದ ಶಂಕರಾಚಾರ್ಯರು ಒಮ್ಮೆ ತಾಯಿಯು ಭಟ್ಟೆ ತೊಳೆಯಲು ನದಿಗೆ ಹೋಗಿದ್ದಾಗ ಅವರೊಂದಿಗೆ ತಾನೂ ಹೋಗಿದ್ದ ಶಂಕರಾಚಾರ್ಯ ಕಾಲು ಜಾರಿ ಕೆಳಗೆ ಬಿದ್ದ ತಾಯಿಯನ್ನು ಲಕ್ಷಿಸಿ ದೇವನಲ್ಲಿ ಬೇಡಿಕೊಂಡ ಶಂಕರಾಚಾರ್ಯರು ಮನೆಯಿಂದ ದೂರವಾಗಿದ್ದ ನದಿಯನ್ನು ಭಕ್ತಿಭಾವದಿಂದ ಆ ನದಿಯನ್ನೇ ತಮ್ಮ ಮನೆಯ ಮಗ್ಗಲು ಹರಿಸುವಂತ ಕಾರ್ಯ ಮಾಡಿಸಿಕೊಂಡಿರುವ ಶಂಕರಾಚಾರ್ಯರ ಭಕ್ತಿ ಹಾಗೂ ಅವರ ನಿಷ್ಟತನದ ಭಗ್ಗೆ ಎಷ್ಟು ಕೊಂಡಾಡಿದರೂ ಸಾಲದು ಎಂದು ಹೇಳಿದ ಘೋರ್ಪಡೆ ಅವರು ಇಂದಿನ ದಿನಮಾನದಲ್ಲಿ ಇಂತಹ ಮಹಾತ್ಮರ ಇತಿಹಾಸ ಮೇಲಿಂದ ಮೇಲೆ ಮೆಲಕು ಹಾಕುವ ಕಾರ್ಯ ಮಾಡಿ ನಮ್ಮ ಮುಂದಿನ ಪೀಳಿಗೆಗಳಿಗೆ ಅರ್ಥೈಯಿಸುವ ಕಾರ್ಯವಾಗಬೇಕು ಅಂದರೆ ನಮ್ಮ ಸನಾತನ ಧರ್ಮವೆಂಬುದು ಉಳಿದು ಹೆಮ್ಮರವಾಗಲು ಸಾಧ್ಯವಾಗಲಿದೆ ಎಂದರು.
  ಇದೇ ಸಮಯದಲ್ಲಿ ವೇ|| ಗುಂಡುರಾವ್ ಜೋಷಿ ಅವರು ಶ್ರೀಕೃಷ್ಣ ಪರಮಾತ್ನನ ಮಹಾಮೂರ್ತಿಗೆ ಹಾಗೂ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸಿದರಲ್ಲದೇ ಮಹಾಪೂಜಾ ಕಾರ್ಯಕ್ರಮ ನೆರವೇರಿಸಿ ಭಕ್ತಸಮೂಹಕ್ಕೆ ಮಹಾಪ್ರಸಾದ ವಿತರಿಸಿದರು.
 ಭಗವದ್ಗೀತಾ ಸೇವಾ ಸಮೀತಿಯ ಅಧ್ಯಕ್ಷರಾದ ಡಾ. ಬಿ.ಎಸ್. ಯಾದವಾಡ ಅಧ್ಯಕ್ಷತೆ ವಹಿಸಿದ್ದರು.
 ಈ ಸಮಯದಲ್ಲಿ ಯಂಕಣ್ಣ ತಾಳಪಲ್ಲೆ ಘನಶ್ಯಾಮ ಚವ್ಹಾಣ, ಗುರಣ್ಣ ಕುಲಕರ್ಣಿ, ಮಲ್ಲಯ್ಯ ಗೊಟಗುಣಕಿ, ಈರಣ್ಣ ಕಲಬುರ್ಗಿ ಮೊದಲಾದವರು ಉಪಸ್ತಿತರಿದ್ದರು.
ಈರಣ್ಣ ಸ್ವಾಗತಿಸಿ ನಿರೂಪಿಸಿ ವಂದಿಸಿದರು.