ಆತಂಕ ಬೇಡ ಸೋಂಕುವುಳ್ಳವರು ಔಷಧಿ ತೆಗೆದುಕೊಳ್ಳಿ

ಹರಪನಹಳ್ಳಿ,ಮೇ,18- ಸಾರ್ವಜನಿಕರು ಆತಂಕ ಪಡಬೇಕಿಲ್ಲ ಕೋವಿಡ್ 19 ಸಾಂಕ್ರಾಮಿಕ ರೋಗದ ಲಕ್ಷಣಗಳುವುಳ್ಳ ಪ್ರತಿಯೊಬ್ಬರೂ ಈ ಔಷಧಿಯನ್ನು ಸೇವಿಸಿ ಕರೋನಾ ಸೋಂಕನ್ನು ನಿಯಂತ್ರಿಸಲು ಸಹಕರಿಸಬೇಕು. ಎಂದು ವಾರ್ಡ್ ನಿವಾಸಿಗಳಲ್ಲಿ ಪುರಸಭೆ ಸದಸ್ಯ ಜಾಕೀರ್ ಹುಸೇನ್ ಮನವಿ ಮಾಡಿದರು.ಪಟ್ಟಣದ ಪುರಸಭೆಯ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ವತಿಯಿಂದ ಮಂಗಳವಾರ ಪಟ್ಟಣದ 11ನೇ ವಾರ್ಡ್ನಲ್ಲಿ ಸಾಮಾನ್ಯ ಔಷಧಿ ಕಿಟ್ ವಿತರಿಸಿ ಮಾತನಾಡಿದ ಅವರು ಕೋವಿಡ್ 19 ಸಾಂಕ್ರಾಮಿಕ ರೋಗದ ಲಕ್ಷಣಗಳುವುಳ್ಳ ವ್ಯಕ್ತಿಗಳ ಸಮೀಕ್ಷೆ ನಡೆಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕೊರೋನಾ ಎರಡನೇ ಅಲೆ ತಾಲೂಕಿನಲ್ಲಿಯೂ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಮಂಜುನಾಥ.ಬಿ ಮಾತನಾಡಿ, ಅನಾವಶ್ಯಕವಾಗಿ ಯಾರೂ ರಸ್ತೆಗೆ ಬರದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಈ ಮನುಕುಲ ವಿರೋಧಿ ಮಹಾಮಾರಿ ಕೊರೋನಾ ವೈರಸ್ ನಿರ್ಮೂಲನೆಗೆ ಮುಂದಾಗಬೇಕು ಎಂದು ವಾರ್ಡ್ ನಿವಾಸಿಗಳಲ್ಲಿ ಹಾಗೂ ಪಟ್ಟಣದ ಜನರಲ್ಲಿ ಮನವಿ ಮಾಡಿದರು.ಈ ಸಂಧರ್ಭದಲ್ಲಿ ಅಂಗನವಾಡಿ ಟೀಚರ್ ಕೋಟ್ರಮ್ಮ, ಶಿಕ್ಷರು ಹಜಮತ್ತುನಿಸಾ, ಆಶಾ ಕಾರ್ಯಕರ್ತರಾದ ನಸೀರಿನ್, ಹಾಗೂ ಇತರರು ಇದ್ದರು.