ಆತಂಕವಿಲ್ಲದೆ ತಪ್ಪದೇ ಮತದಾನ ಮಾಡಿ; ಎಸಿ ಚಿದಾನಂದ ಸ್ವಾಮಿ.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಏ.7; ಚುನಾವಣೆಯಲ್ಲಿ ಯಾರು ಯಾವುದೇ ಭಯ, ಆತಂಕವಿಲ್ಲದೆ, ನಿರ್ಭಿತವಾಗಿ ಮತದಾನ ಮಾಡಿ ಎಂದು ಉಪವಿಭಾಗ ಅಧಿಕಾರಿ ಚಿದಾನಂದ ಸ್ವಾಮಿ ಹೇಳಿದರು.ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾವನಪುರ ಗ್ರಾಮ ಅತೀ ಸೂಕ್ಷ್ಮ ಮತಗಟ್ಟೆಯಾಗಿದ್ದು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಕೇಂದ್ರೀಯ ಅರೆಸೇನೆ ಪಡೆ, ರೂಟ್ ಮಾರ್ಚ್ ಮಾಡಲಾಯಿತು.ಪ್ರತಿಯೊಬ್ಬರು ಶಾಂತಿಯುತವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಸಹಕಾರ ನೀಡಬೇಕು ಎಂದರು.ತಹಶೀಲ್ದಾರ್ ಗಿರೀಶ್ ಬಾಬು ಮಾತನಾಡಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ನಮ್ಮ ಮತ ನಮ್ಮ ಹಕ್ಕು, ಎಲ್ಲರೂ ತಪ್ಪದೇ ಮತದಾನ ಮಾಡಿರಿ ಎಂದು ಹೇಳಿದರು.ಪಿಎಸ್‌ಐ ಕೆ. ರಂಗಯ್ಯ ಮಾತನಾಡಿ ಯಾವುದೇ ಆಮಿಷಕ್ಕೆ ಒಳಗಾಗದೆ ತಪ್ಪದೇ ಮತದಾನ ಮಾಡಿ, ದೇಶದ ಹಿತವನ್ನು ಕಾಪಾಡಿ. ಯಾವುದೇ ಕಾರಣಕ್ಕೂ ಮತ ಹಾಕದೆ ಇರಬೇಡಿ, ನಿಮಗೆ ಏನೇ ತೊಂದರೆ ಇದ್ದಲ್ಲಿ ಅಧಿಕಾರಿಗಳು ನಿಮ್ಮ ರಕ್ಷಣೆಗೆ ಇರುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆಯವರು, ಕೇಂದ್ರೀಯ ಅರೆ ಸೇನೆ ಪಡೆಯವರು, ಪೊಲೀಸ್ ಇಲಾಖೆಯವರು ಹಾಗೂ ಗ್ರಾಮಸ್ಥರು ಹಾಜರಿದ್ದರು.