
ಬೀದರ:ನ.14: ತಾಲ್ಲೂಕಿನ ಆಣದೂರ ಗ್ರಾಮದ ಸರ್ವಜ್ಞ ಶಾಲೆಯಲ್ಲಿ ಬೀದರ ದಕ್ಷಿಣ ಕ.ಸಾ.ಪ. ಯುವ ಘಟಕ ಮತ್ತು ಗ್ರಾಮ ವಿಕಾಸ ಟ್ರಸ್ಟ್ (ರಿ) ಆಣದೂರ ಇವುಗಳ ಸಂಯುಕ್ತಾಶ್ರಯದಲ್ಲಿ ಗ್ರಾಮ ವಿಕಾಸ ಟ್ರಸ್ಟ್‍ನ ದಶಮಾನೋತ್ಸವ ಸಂಭ್ರಮ ಹಾಗೂ ಕರ್ನಾಟಕ ನಾಮಕರಣ 50 ಸುವರ್ಣ ಸಂಭ್ರಮ ಪ್ರಯುಕ್ತ 50 ಕನ್ನಡ ಕಾರ್ಯಕ್ರಮಗಳ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು. “ಈ ಸಮಾರಂಭದ ಉದ್ಘಾಟನೆಯನ್ನು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸುರೇಶ ಚನ್ನಶೆಟ್ಟಿ ನೇರವೇರಿಸಿ” ಕರ್ನಾಟಕ ನಾಮಕರಣದ 50 ವರ್ಷದ ಸವಿನೆನಪಿಗಾಗಿ ರಾಜ್ಯಾದಾದ್ಯಾಂತ ಹಲವು ಕಾರ್ಯಕ್ರಮಗಳು ಜರುಗುತ್ತಿವೆ. ಶ್ರೀಮಂತವಾದ ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವ ತಿಳಿಸುವಲ್ಲಿ ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ. ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಕನ್ನಡ ಹೆಚ್ಚು ಬಳಸುವ ಪರಿಪಾಠ ರೂಢಿಯಾಗಬೇಕು ಕನ್ನಡ ಪುಸ್ತಕ ಮತ್ತು ಪತ್ರಿಕೆಗಳು ನಿಯಮ ನಿಮಿತ್ಯ ಕಾಲಿಕೆಗಳು ಹೆಚ್ಚೆಚ್ಚು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ನಾಡು – ನುಡಿ ಸಾಹಿತ್ಯದ ಪರಿಚಯ ಮತ್ತಯು ಪ್ರಚಾರ ಮಾಡುವ ನಿಟ್ಟಿನಲ್ಲಿ ಗ್ರಾಮ ವಿಕಾಸ ಟ್ರಸ್ಟ್ ಮತ್ತು ಬೀದರ ದಕ್ಷಿಣ ಕ.ಸಾ.ಪ. ಯುವ ಘಟಕ ಕೈಗೊಂಡಿರುವ 50 ಕನ್ನಡ ಕಾರ್ಯಕ್ರಮಗಳನ್ನು ಬೀದರ ದಕ್ಷಿಣ ಕ್ಷೆತ್ರದ ಶಾಲಾ, ಕಾಲೇಜುಗಳಲ್ಲಿ ಮಾಡುವ ಪ್ರಯತ್ನ ಇಡೀ ರಾಜ್ಯಕ್ಕೆ ಮಾದರಿಯಾದುದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರು ಬಸವ ಧನಿ ಪತ್ರಿಕೆಯ ಸಂಪಾದಕರಾದ ಶ್ರೀ ವೀರುಪಾಕ್ಷ ಗಾದಗಿ ಅವರು "ಕನ್ನಡ ಉಳಿಸಿ-ಬೆಳೆಸುವ ಕಾರ್ಯಕ್ಕಾಗಿ" ಯುವಕರ ತಂಡ ಮುಂದೆ ಬರುತ್ತಿರುವದು ಬಹಳ ಆಶಾದಾಯಕ ಸಂಗತಿ ಸಂಘಟನೆಗಳು ಸೇವಾ - ಉದ್ದೇಶಕ್ಕಾ ಕಾರ್ಯಮಾಡಬೇಕೆ ಹೊರತು ಹಣ ಮಾಡುವದಕ್ಕಲ್ಲ. ಇತ್ತೀಚಿಗೆ ಸಂಘ - ಸಂಸ್ಥೆಗಳು ಅವುಗಖ ಮೂಲ ಉದ್ದೇಶ ಮರೆಯುತ್ತಿರುವುದು ಒಳ್ಳೆಯದಲ್ಲ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕಾರ್ಯದೊಂದಿಗೆ ಸಾಮಾಜಿಕ, ಕನ್ನಡ ನಾಡು - ನುಡಿ ಸೇವೆ ಮಾಡುತ್ತಿರುವ ಗ್ರಾಮ ವಿಕಾಸ ಟ್ರಸ್ಟ್ ಕಾರ್ಯ ಮೆಚ್ಚುವಂತಹುದು. ಟ್ರಸ್ಟ್ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ವಿಕಾಸ ಟ್ರಸ್ಟ್ (ರಿ) ಮತ್ತು ಬೀದರ ದಕ್ಷಿಣ ಕ.ಸಾ.ಪ. ಯುವ ಘಟಕದ ಅಧ್ಯಕ್ಷರಾದ ಶ್ರೀ ಬಸವರಾಜ ಬಶಟ್ಟಿ ಅವರು ಕರ್ನಾಟಕ ನಾಮಕರಣದ 50 ವರ್ಷದ ಸುವರ್ಣ ಸಂಭ್ರಮದ ಸಂದರ್ಭ ಪ್ರತಿ ಕನ್ನಡಿಗರಿಗೂ ಸ್ರಣೀಯವಾದುದು. ಕರ್ನಾಟಕದ ಏಕೀಕರಣಕ್ಕೆ ನಾಡಿನ ಅನೇಕ ಹೋರಾಟಗಾರರು, ಸಾಹಿತಿಗಳು, ಸಾಂಸ್ಕøತಿಕವಾಗಿ ಮತ್ತಷ್ಟು ಶ್ರೀಮಂತಗೊಂಡಿದೆ. ಕನ್ನಡತನ ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಬೇಕು. ಕರ್ನಾಟಕ ಹೆಸರಾಗಿದೆ, ಆದರೆ ಕನ್ನಡ ಇನ್ನೂ ನಮ್ಮ ಉಸಿರಾಗಲೇ ಇಲ್ಲ. ನೆರೆಯ ತಮಿಳು ನಾಡು, ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ರಾಜ್ಯಗಳು ಅವರ ನಾಡಭಾಷಾಭಿಮಾನ ಹೊಂದಿರುವಂತೆ ಕರ್ನಾಟಕದಲ್ಲಿ ಭಾಷಾಭಿಮಾನದ ಕೊರತೆಕಾಣಿಸುತ್ತಿದೆ. ಕನ್ನಡ ಪ್ರೀತಿಸೋಣ, ಅಪ್ಪಿಕೊಳ್ಳೋಣ ಬೇರೆ ಭಾಷೆಗೆ ಎರಡನೇ ದರ್ಜೆ ಕೋಡೋಣ. ವಿಶೇಷವಾಹಿ ಶಾಲಾ - ಕಾಲೇಜು ಮಕ್ಕಳಲ್ಲಿ ಕನ್ನಡ ನಾಡು - ನುಡಿ, ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ 50 ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರೋಷರೇಷೆ ಹಾಕಿಕೊಳ್ಳಲಾಗಿದೆ. ಎಲ್ಲರ ಸಹಕಾರದೊಂದಿಗೆ ಈ ಅಭಿಮಾನ ಪೂರ್ಣಗೊಳಿಸಿಲಾಗುವುದು ಎಂದು ಅಧ್ಯಕ್ಷರು ಭಾಷಣದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುತಸ್ಕøತರಾದ ಶ್ರೀ ಬಸವರಾಜ ಬಶರಟ್ಟಿ ಅವರನ್ನು ಗ್ರಾಮದ ಯುವಕ ಸಂಘದವರು, ಕುಟುಂಬದವರು, ಹಿತೈಷಿಗಳು ಸನ್ಮಾನಿಸಿದರು. ಹಾಗೂ ಗಾಂಧಿ ಗ್ರಾಮ ಪಂಚಾಯತ ಅಧ್ಯಕ್ಷ - ಉಪಾಧ್ಯಾಕ್ಷರಿಗೂ ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ 'ಜನಜಾಗೃತಿ ವೇದಿಕೆಯ' ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ಯ ಶ್ರೀ ವೀರುಪಾಕ್ಷ ಗಾದಗಿ ಅವರನ್ನು ಮತ್ತು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ, ಬೀದರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರಾಜೇಂದ್ರ ಮಣಿಗೆರೆ ಅವರನ್ನು ಖ್ಯಾತ ವೈದ್ಯರಾದ ಡಾ|| ಎಸ್.ಎಮ್. ಮಠಪತಿ ಅವರನ್ನು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶ್ರೀ ಸಂಜೀವಕುಮಾರ ಅತಿವಾಳೆ ಅವರನ್ನು ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕರಾಗಿ ಆಯ್ಕೆಯಾದ ಶ್ರೀ ಭೀಮಣ್ಣಾ ಸೋರಳ್ಳಿ, ಸಹ ಸಂಯೋಜಕರಾಗಿ ಆಯ್ಕೆಯಾದ ಶ್ರೀ ವಿಶಾಲ ಅತಿವಾಳೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೀದರ ಸರ್ಕಾರಿ ಐ.ಟಿ.ಐ. ಕಾಲೇಜುನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಶಿವಶಂಕರ ಟೋಕರೆ, ಬೀದರ ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಶ್ರೀ ವೀರಶೆಟ್ಟಿ ಚನಶೆಟ್ಟಿ ತಾಲ್ಲೂಕಾ ಉಪಾಧ್ಯಕ್ಷರಾಗಿ ಶ್ರೀ ಸಿದ್ದಾರೂಢ ಭಾಲ್ಕೆ, ಜನಜಾಗೃತಿ ವೇದಿಕೆಯ ಜಿಲ್ಲಾಉಪಾಧ್ಯಾಕ್ಷರಾದ ಶ್ರೀ ಶ್ರೀನಿವಾಸ ರೆಡ್ಡಿ ನರಸಾರೆಡ್ಡಿ, ಗ್ರಾಮ ಪಂಚಾಯತ ಆಣದೂರಿನ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಗುಮತಾಪೂರೆ, ಉಪಾಧ್ಯಾಕ್ಷೆ ಶ್ರೀಮತಿ ಶ್ರೀದೇವಿ ಸೋನಿ ಮಾಜಿ ಉಪಾಧ್ಯಕ್ಷೆ ಕಲಾವತಿ ಸಾಗರ, ಬೀದರ ದಕ್ಷಿಣ ಕ.ಸಾ.ಪ. ಗೌರವಾಧ್ಯಕ್ಷರಾದ ಶ್ರೀ ರೇವಣಪ್ಪಾ ಚಿಲ್ಲರ್ಗಿ ವಲಯ ಕ.ಸಾ.ಪ. ಅಧ್ಯಕ್ಷರಾದ ಶ್ರೀ ಚೇತನ್ ಸೋರಳ್ಳಿ, ವಿಜಯ ಬಿರಾದರ, ಆಕಾಶ ರಾಜಗೀರಾ, ಗುರು ಪಾಪಡೆ, ಮಂಜು ಮುದ್ದಾ, ಗ್ರಾಮದ ಮುಖಂಡರಾದ ವಸಂತರೆಡ್ಡಿ, ಪ್ರಭುಶೆಟ್ಟಿ ಪಸರ್ಗಿ, ಶಿವಕುಮಾರ ಹಿರೇಮಠ, ಬಾಬುರಾವ ತಡಗೂರೆ, ಪ್ರವೀಣ್ ಪಾಟೋದಿ, ರಾಜು ತಿಪ್ಪಣ್ಣಾ ಉಪಾರ, ಮಚೇಂದ್ರ ಕಾಂಬಳೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂತೋಷ ಗೋರ್ಟೆ, ಸ್ವಾಗತವನ್ನು ಶ್ರೀ ಸಾಯಿನಾಥ ಸಿಂದಬಂದಗಿ ವಂದನಾರ್ಪಣೆಯನ್ನು ಶ್ರೀ ಸಿದ್ದಾರೂಢ ಭಾಲ್ಕೆ ಮಾಡಿದರು.