ಆಣದೂರನಲ್ಲಿ ಜಾನಪದ ಸಂಭ್ರಮ

ಬೀದರ:ಸೆ.21:ಕಲ್ಚರಲ್ ಐಂಡ್ ರೂರಲ್ ಡೇವಲಪ್‍ಮೇಂಟ್ ಸೋಸೈಟಿ (ರಿ), ಚಿಮಕೋಡ ತಾ|| ಜಿ|| ಬೀದರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಇವರ ಸಹಕಾರದಲ್ಲಿ 2022-23ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಾಯೋಜಿತ, ಸಾಂಸ್ಕøತಿಕ ಕಾರ್ಯಕ್ರಮ ಸೆಪ್ಟೆಂಬರ್ 19ರಂದು ಸಂಜೆ 06:00 ಗಂಟೆ ಬೀದರ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನ ಭಂತ್ಯೆ ಶಾಂತಿಪಾಲ ಇವರು ಹಲಗಿ ಭಾರಿಸುವ ಮೂಲಕ ಚಾಲನೆ ನೀಡಿ, ಹಿಂದಿನ ಯುವ ಜನತೆ ದುಚ್ಛಟಕ್ಕೆ ಬಲಿಯಾಗದೆ, ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕøತಿಕ ಕಲೆಗಳತ್ತ ಒಲವು ತೋರಿಸಬೇಕೆಂದರು. ವೇದಿಕೆಯ ಮೇಲೆ ಡಾ. ಬಾಬು ಆಣದೂರೆ, ಸುನೀಲ ಬಲ್ಲುರೆ, ಭಂತ್ಯೆ ಕರ್ಣಪಾಲ, ಭಂತ್ಯೆ ರಾಹುಲ್ ಗುರುಜೀ, ಗ್ರಾಮದ ಹಿರಿಯರು ಕಲಾಪೇಕ್ಷಕರು ಭಾಗವಹಿಸಿದರು. ಕು. ವೀಣಾ ದೇವದಾಸ ತಂಡದವರಿಂದ ಸುಗಮ ಸಂಗೀತ, ಗಾಯನ ಕಾರ್ಯಕ್ರಮ ಹಾಗೂ ಕು. ವಾಣಿ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ ಗಾಯನ ಕಾರ್ಯಕ್ರಮ ಬಹಳ ಸುಶಾವ್ರವಾಗಿ ಹಾಡಿ ಪ್ರಕ್ಷಕರ ಮನ ತಲುಪಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನ ದೇವದಾಸ ಚಿಮಕೋಡ ಅಧ್ಯಕ್ಷರು, ಕಲ್ಚರಲ್ ಐಂಡ್ ರೂರಲ್ ಡೇವಲಪ್‍ಮೇಂಟ್ ಸೋಸೈಟಿ (ರಿ), ಚಿಮಕೋಡ ಇವರು ನೆರವೆರಿಸಿದರು.