ಆಡಿಯೋ‌ ವಿಡೀಯೋ ಇದ್ದರೆ ಬಿಡುಗಡೆ ಮಾಡಲಿ; ಮಾಜಿ ಶಾಸಕರ ಸವಾಲು

ಜಗಳೂರು.ಜು.೩೦; ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಹತಾಶರಾದ ಹಾಲಿ ಶಾಸಕರ ವೈಯುಕ್ತಿಕ ವಿಚಾರಗಳನ್ನ ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ತಂತ್ರದ ಮೂಲಕ ಹೆದರಿಸಲು ಬರುತ್ತಿದ್ದಾರೆ ಧೈರ್ಯವಿದ್ದರೆ ನನ್ನ ಬಗೆಗಿನ ಆಡಿಯೋ‌ ವಿಡೀಯೋ ಇದ್ದರೆ ಬೆಳಿಗ್ಗೆ ಬಿಡುಗಡೆ ಮಾಡಲಿ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸವಾಲ್ ಹಾಕಿದರು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು  ಕ್ಷೇತ್ರದ ಅಭಿವೃದ್ದಿ ವಿಚಾರದ ಹಾಗು ಭ್ರಷ್ಟಾಚಾರ , ಕಳಪೆ ಕಾಮಗಾರಿ ಬಗ್ಗೆ ಮಾತನಾಡುವುದು ಕ್ಷೇತ್ರದ  ವಿರೋಧ ಪಕ್ಷದ ನಾಯಕನಾದ ನನ್ನ ಜವಾಬ್ದಾರಿ ಅದಕ್ಕಾಗಿ ಮಾತನಾಡಿದ್ದೇನೆ ಹೊರೆತು ವೈಯುಕ್ತಿಕ ವಿಚಾರ ಮಾತನಾಡಿಲ್ಲ ಆದರೆ ಶಾಸಕ ಎಸ್.ವಿ.ರಾಮಚಂದ್ರ ನನ್ನ ಬಗೆಗಿನ ವೈಯುಕ್ತಿಕ ವಿಚಾರ ಹೇಳಿಕೆ ಸರಿಯಲ್ಲ. ಐಷಾರಾಮಿ ಜೀವನ ನನ್ನದಲ್ಲ ನಾನೊಬ್ಬ ರೈತನ ಮಗ ಕಷ್ಟಪಟ್ಟು ವಿಧ್ಯಾಭಾಸ ಮಾಡಿ ಸಣ್ಣ ನೌಕರಿ ತೆಗೆದುಕೊಂಡಿದ್ದೇನೆ ಇಂದಿಗೂ ಸಹ ಅವಿಭಕ್ತ ಕುಟುಂಬದಲ್ಲಿ ಬದುಕುತಿದ್ದೇನೆ ಬದಲಾದ ಸನ್ನಿವೇಶದಲ್ಲಿ ಅನಿವಾರ್ಯ ರಾಜಕಾರಣಕ್ಕೆ ಬಂದು ಜನಸೇವೆ ಮಾಡಿದ್ದೇನೆ ಒಂದೇ ಬಾರಿ ಗೆದ್ದರು ಸಹ ಮರೆಯಲಾರದಂತ  ಅಭಿವೃದ್ದಿ ಮಾಡಿದ್ದೇನೆ ಎಂದರು