
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.20 :- ಪಟ್ಟಣದ ಆಡಿಟರ್ ಉಮೇಶ ಅವರು ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅವರ ಕಾರ್ಯವೈಖರಿ ಮೆಚ್ಚಿ ಇಂದು ಬಿಜೆಪಿ ಅಭ್ಯರ್ಥಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಇಂದು ಬಿಜೆಪಿ ಪಕ್ಷದ ಹಾಗೂ ಅಭ್ಯರ್ಥಿ ಕಚೇರಿಯಲ್ಲಿ ಆಡಿಟರ್ ಉಮೇಶ, ಇಂಜಿನಿಯರ್ ಮಲ್ಲಿಕಾರ್ಜುನ ಗೌಡ, ಮಾಜಿ ಪ ಪಂ ಸದಸ್ಯೆ ರೇಣುಕಮ್ಮ ಅವರ ಪತಿ ಮಲ್ಲಿಕಾರ್ಜುನ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಕ್ಷದ ಶಾಲು ಹಾಕಿ ಲೋಕೇಶ ನಾಯಕ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕೆ ಹೆಚ್ ವೀರನಗೌಡ, ಕೆ ಎಂ ತಿಪ್ಪೇಸ್ವಾಮಿ, ಸೂರ್ಯಪಾಪಣ್ಣ, ಗುಳಿಗಿ ವೀರೇಂದ್ರ, ಗುರುಪ್ರಸನ್ನ, ಕಾಟಮಲ್ಲಿ ಕೊಟ್ರೇಶ ಇತರರಿದ್ದರು.