ಧಾರವಾಡ,ಮೇ.28: ‘ಹೆಣ್ಣು ಹುಟ್ಟಿದರೆ ಪೀಡೆ, ಗಂಡು ಹುಟ್ಟಿದರೆ ಫೇಡೆ’ ಎಂಬ ಮಾತುಇವತ್ತಿನ ಸಮಾಜ ವ್ಯವಸ್ಥೆಯಲ್ಲಿಜನಜನಿತವಾಗಿರುವಂಥದ್ದು. ಇಂತಹ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯನ್ನು ನಡೆಸಬೇಕಾಗಿರುವ ಮಹಿಳೆಗೆ ಹತ್ತು ಹಲವಾರು ಸಮಸ್ಯೆಗಳು ಎದುರಾಗುವುದು ಸಹಜ.ಆದರೂಕೂಡ ನಿಷ್ಠೆ, ಪ್ರಾಮಾಣಿಕತೆಯಿಂದ ಮಹಿಳೆಯರು ಸಲ್ಲಿಸುವ ಸೇವೆಗೆ ಗೌರವ ಸಿಕ್ಕೆ ಸಿಗುತ್ತದೆ ಎಂದುರಾಮಾಪೂರಗ್ರಾಮಪಂಚಾಯತಿ ಪಂಚಾಯತಿಅಭಿವೃದ್ಧಿಅಧಿಕಾರಿ ಶ್ರೀಮತಿ ಶಶಿರೇಖಾ ಚಕ್ರಸಾಲಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀಮತಿ ಶಾಂತಕ್ಕ ಮಠದದತ್ತಿಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ’ಆಡಳಿತ ವ್ಯವಸ್ಥೆಯಲ್ಲಿ ಮಹಿಳೆ’ ವಿಷಯಕುರಿತು ಮಾತನಾಡುತ್ತಿದ್ದರು.
ಹೆಣ್ಣುಮಕ್ಕಳು ಕೂಡಾ ವಹಿಸಿದ ಕೆಲಸವನ್ನು ನಿಭಾಯಿಸಬಲ್ಲ ಸಾಮಥ್ರ್ಯವನ್ನು ಹೊಂದಿರುತ್ತಾರೆಎಂಬುದಕ್ಕೆ ಅನೇಕ ಮಹಿಳೆಯರು ಸಾಕ್ಷಿಯಾಗಿ ನಿಲ್ಲುತ್ತಾರೆ.ಸ್ಪರ್ಧಾತ್ಮಕಜಗತ್ತಿನಲ್ಲಿ ಮಹಿಳೆ ಪ್ರತಿಯೊಂದುರಂಗದಲ್ಲಿಯೂ ಮುಂದಿರುವುದನ್ನುಕಾಣುತ್ತೇವೆ. ಹೆಣ್ಣು, ಹೆಣ್ಣುಎಂದು ಹೀಗಳಿಯುವುದಕ್ಕಿಂತ ಅವರಿಗೆ ಪ್ರೋತ್ಸಾಹದಅಗತ್ಯಇರುತ್ತದೆ.ಉದ್ಯೋಗಸ್ಥ ಮಹಿಳೆಯರಿಗೆ ಸ್ವಾತಂತ್ರ್ಯಇರಬೇಕಾಗುತ್ತದೆ.ಸಿಕ್ಕ ಸ್ವಾತಂತ್ರ್ಯದ ಬಳಕೆಯನ್ನು ಮಹಿಳೆ ದುರುಪಯೋಗಪಡಿಸಿಕೊಳ್ಳಬಾರದು.ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಬಾರದು.ಕಚೇರಿ ಹಾಗೂ ಕುಟುಂಬ ನಿರ್ವಹಣೆ ನಿಭಾಯಿಸುವ ಸಾಮಥ್ರ್ಯ ಮಹಿಳೆಗೆ ಇರಬೇಕಾದದ್ದುಅಗತ್ಯಎಂದು ಹೇಳಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವ್ಹಿ.ಎನ್. ಕೀರ್ತಿವತಿಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಹಿತಕ್ಕಾಗಿ, ನಾಡಿನರಕ್ಷಣೆಗಾಗಿ ಪುರುಷರಿಗೆ ಸರಿಸಮಾನವಾಗಿ ಆಡಳಿತ ನಿರ್ವಹಿಸಿದ ಅನೇಕ ಮಹಿಳೆಯರನ್ನು ಕಾಣುತ್ತೇವೆ. ಆಡಳಿತದಲ್ಲಿರುವ ಮಹಿಳೆಯರನ್ನು ಗುರುತಿಸಬೇಕಾದಅಗತ್ಯತೆಇದೆ.ಪ್ರಾರಂಭದಿಂದಲೂ ಪುರುಷ ಮತ್ತು ಮಹಿಳೆಯರು ಮಾಡಬೇಕಾದ ಕೆಲಸಗಳನ್ನು ಹಂಚಿಕೆ ಮಾಡುತ್ತಾ ಬರಲಾಗಿದೆ.ಹೆಣ್ಣು ಮಕ್ಕಳ ಕಲಿಕೆಗೂ ಪ್ರೋತ್ಸಾಹ ಸಿಗಲಾರದ ಸಂದರ್ಭ, ಸನ್ನಿವೇಶಗಳು ಇವತ್ತಿಗೂಕೂಡಾಇರುವುದನ್ನುಕಾಣುತ್ತೇವೆ. ಪುರುಷ ಮತ್ತು ಸ್ತ್ರೀ ಒಂದೇ ನಾಣ್ಯದಎರಡು ಮುಖಗಳಾಗಿದ್ದು, ಆಡಳಿತ ವ್ಯವಸ್ಥೆಯಲ್ಲಿ ಪುರುಷನಷ್ಟೇ ಅವಕಾಶ ಮಹಿಳೆಗೂ ದೊರಕುವಂತಾಗಬೇಕುಎಂದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಶೈಲಜಾಅಮರಶೆಟ್ಟಿ, ಗುರು ಹಿರೇಮಠ, ಡಾ.ಶ್ರೀಶೈಲ ಹುದ್ದಾರ, ಡಾ.ಧನವಂತ ಹಾಜವಗೋಳ, ಎಂ.ಎಂ. ಚಿಕ್ಕಮಠ, ಮಹಾಂತೇಶ ನರೇಗಲ್, ಸಿ.ಜಿ. ಹಿರೇಮಠ, ಸಜ್ಜನ, ಸೇರಿದಂತೆಅನೇಕರು ಭಾಗವಹಿಸಿದ್ದರು.