ಆಡಳಿತ ಮಂಡಳಿ ಪುರಸಭೆ ನಿರ್ಧಾರ ಖಂಡಿಸಿ ಮನವಿ

(ಸಂಜೆವಾಣಿ ವಾರ್ತೆ)
ನವಲಗುಂದ,ಆ19 : ಪುರಸಭೆಯಲ್ಲಿಯ ಮುಖ್ಯಾಧಿಕಾರಿಗಳು, ಅಧ್ಯಕ್ಷರು ಮತ್ತು ಸರ್ವಸದಸ್ಯರೆಲ್ಲರೂ ಪುರಸಭೆ ಪೌರಕಾರ್ಮಿಕ ನೇಮಕಾತಿ ಹಾಗೂ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ತಮಗೆ ಇಷ್ಟ ಬಂದವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಡಾ. ಅಂಬೇಡ್ಕರ್ ದಲಿತ ಸಂಘರ್ಷ ಸಮೀತಿಯಿಂದ ಧಾರವಾಡ ಜಿಲ್ಲಾ ಉಪವಿಭಾಗದಕಾರಿ ಅಶೋಕ ತೆಲಿ ಅವರಿಗೆ ಪುರಸಭೆ ಮುಂಭಾಗ ಮನವಿ ಸಲ್ಲಿಸಿದರು.
ಪುರಸಭೆ ಅನುದಾನವು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಮತ್ತು ಅಧಿಕಾರಿಳಿಗೆ ಹಾಗೂ ಸರ್ವ ಸದಸ್ಯರುಗಳಿಗೆ ಸರಕಾರದ ನಿಯಮಾವಳಿ ಪ್ರಕಾರ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ನಿರ್ದೇಶನ ನೀಡಬೇಕು. ಪಟ್ಟಣದ ಅಂಬೇಡ್ಕರ ನಗರದ ಮುಂಬಾಗ ಕಸಾಯಿಖಾನೆ ಹಾಗೂ ಇನ್ನಿತರೇ ಅಂಗಡಿಗಳಿದ್ದು ಅವುಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ದಲಿತರು ಈ ದುರ್ವಾಸನೆಯಿಂದ ನೆಮ್ಮದಿಯಿಂದ ಬದುಕಲು ಅನುಕೂಲ ಮಾಡಿಕೊಡಬೇಕು ಬೇಗನೆ ಕ್ರಮ ಕೈಗೊಳ್ಳದಿದ್ದಾರೆ ಪುರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ನಗರ ಘಟಕ ಅಧ್ಯಕ್ಷ ಶರಣಪ್ಪ ಚಲವಾದಿ. ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ, ಶಿವು ಚಲವಾದಿ, ಶಂಕ್ರು ಹುಣಶಿಮರದ ವಸಂತ ಹೊನ್ನಕುದರಿ, ಯಲ್ಲಪ್ಪ ಕಾಳೆ, ಮಂಜು ಚಲವಾದಿ, ಗುರುರಾಜ ಮಲ್ಲದಾಸರ ಇತರರು ಇದ್ದರು.