ಆಡಳಿತ ನಡೆಸಲು ಮಂತ್ರಿಗಳಿದ್ದೇವೆ: ಎಸ್.ಟಿ.ಸೋಮಶೇಖರ್

ಮೈಸೂರು, ಏ.5: ರಾಜ್ಯದಲ್ಲಿ ಆಡಳಿತ ನಡೆಸಲು ಸರ್ಕಾರದಲ್ಲಿ ಮಂತ್ರಿಗಳಿದ್ದೇವೆ. ಜಿಲ್ಲಾಡಳಿತವಿದೆ, ಶಾಸಕರಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಅವರು ಇಂದು ಬೆಳಿಗೆ ಸುದ್ಧಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಶಾಸಕರು ಸುದ್ದಿಗೋಷ್ಠಿ ನಡೆಸಿ ಉಸ್ತುವಾರಿ ಸಚಿವರಿಗೆ ಏನು ಕೆಲಸ ಇಲ್ಲ, ಉಸ್ತುವಾರಿ ಸಚಿವರು ಡಮ್ಮಿ ಆಗಿದ್ದಾರೆ. ವಿಜಯೇಂದ್ರ ಅವರೇ ಎಲ್ಲ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದ್ಯಾಕೆ ವಿಜಯೇಂದ್ರ ಅವರ ಹೆಸರನ್ನು ಪದೇ ಪದೇ ಯಾಕೆ ತರುತ್ತಾರೆ ಎಂದು ಗೊತ್ತಿಲ್ಲ, ಅವರ ಹೆಸರೇಳಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಾದರೆ ಅದಕ್ಕೇನು ಅಭ್ಯಂತರವಿಲ್ಲ.
ಪದೇ ಪದೇ ಯಾಕೆ ವಿಜಯೇಂದ್ರ ಹೆಸರನ್ನು ಎರಡು ವರ್ಷ ಆದಮೇಲೆ ತರುತ್ತಾರೆ ಎನ್ನತಕ್ಕಂತದ್ದನ್ನು ಬಹುಶಃ ವಿಜಯೇಂದ್ರ ಅವರು ಮೈಸೂರಿಗೆ ಬಂದರೆ ತಮ್ಮ ಅಸ್ತಿತ್ವಕ್ಕೆ ಕುಂದು ಬರಲಿದೆ ಎಂಬ ದೂರಾಲೊಚನೆಯಿಂದ ಈ ರೀತಿ ಅವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರಬಹುದು ಎಂದರು.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನದ ಕೊರತೆ ಇದೆ, ಅನುದಾನ ಕೊಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿಗಳಿಗೆ 224 ಕ್ಷೇತ್ರವೂ ಒಂದೇ. ಕಾಂಗ್ರೆಸ್, ಜೆಡಿಎಸ್ ಬಿಜೆಪಿ, ಶಾಸಕರ ಕ್ಷೇತ್ರ ಎನ್ನುವುದು ಕೂಡ ಯಾವುದೂ ಇಲ್ಲ, 224ಕ್ಷೇತ್ರಕ್ಕೆ ಯಾವ ರೀತಿ ಅನುದಾನ ಕೊಡುತ್ತಾರೆ. ಸಮನಾಗಿ ನೋಡಿಕೊಳ್ಳತಕ್ಕ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿಕೊಂಡು ಬಂದಿದ್ದಾರೆ. ಆತರಹದ್ದು ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ ಎಂದರು.
ಸಂಪೂರ್ಣ ರಾಜ್ಯ ಸರ್ಕಾರ ಯಡಿಯೂರಪ್ಪನವರ ಕುಟುಂಬ ಕೇಂದ್ರೀಕೃತವಾಗಿದೆ ಕುಟುಂಬ ಅಧಿಕಾರ ನಡೆಸುತ್ತಿದೆ. ಇದು ನೂರಕ್ಕೆ ನೂರು ಸುಳ್ಳು ಯಾವ್ಯಾವ ಮುಖ್ಯಮಂತ್ರಿಗಳ ಕಾಲದಲ್ಲಿ ಯಾರ್ಯಾರು ಅಧಿಕಾರ ನಡೆಸಿದರು ಅನ್ನೋದು ಕರ್ನಾಟಕದ ಜನತೆಗೆ ಗೊತ್ತಿದೆ. ನಮ್ಮ ಸಹಕಾರ ಇಲಾಖೆ ಯಾರೂ ಕೂಡ ಹಸ್ತಕ್ಷೇಪ ಮಾಡತಕ್ಕಂತದ್ದು ಇದುವರೆಗೂ ಕೂಡ ಇಲ್ಲ. ಮೈಸೂರು ಉಸ್ತುವಾರಿ ಇದ್ದೇನೆ. ಮೈಸೂರು ಉಸ್ತುವಾರಿ ಸಹ ಯಾವುದೇ ಅಡಚಣೆ ಇಲ್ಲದೆ ನಡೆಯುತ್ತಿದೆ.
ಯಾರೂ ಸಹ ಹಸ್ತಕ್ಷೇಪ ಮಾಡತಕ್ಕಂತದ್ದಿಲ್ಲ, ಮುಖ್ಯಮಂತ್ರಿಗಳು 45 ವರ್ಷದಿಂದ ಇರತಕ್ಕಂತಹವರು ಅವರು ಸಮರ್ಥರಿದ್ದಾರೆ. ಹಸ್ತಕ್ಷೇಪ ಅನ್ನತಕ್ಕಂತದ್ದು ವಿರೋಧ ಪಕ್ಷದವರಿಂದ. ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಮಕ್ಕಳೆಲ್ಲ ಕಡ್ಳೆಪುರಿ ತಿಂದುಕೊಂಡು ದೇವರಪೂಜೆ ಮಾಡುತ್ತಿದ್ದರಾ? ನಮಗೂ ಮಾಹಿತಿ ಇದೆ. ಅದಕ್ಕೆ ಸೂಕ್ತ ಸಮಯ ಬಂದಾಗ ಉತ್ತರ ನೀಡಬೇಕಾಗುತ್ತದೆ. ಸಿಎಂ ಆಡಳಿತದಲ್ಲಿ ಯಾರಿಗೂ ಹಸ್ತಕ್ಷೇಪ ಮಾಡಲು ಮುಖ್ಯಮಂತ್ರಿಗಳು ನೀಡುತ್ತಿಲ್ಲ.
ಮುಖ್ಯಮಂತ್ರಿಗಳು ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಹೇಳಲು ಅವರಿಗೆ ಆಗುತ್ತಿಲ್ಲ. ಕುಟುಂಬ ಎನ್ನುವುದನ್ನು ತೆಗೆದುಕೊಂಡು ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕೆಂದು ವಿರೋಧಪಕ್ಷದವರೇನು ಮಾಡುತ್ತಿದ್ದಾರೆ ಆ ಆಪಾದನೆ ಒಂದು ಬಿಟ್ಟರೆ ಬೇರೆ ಏನಿಲ್ಲ, ಎರಡು ವರ್ಷ ಆಯಿತು ಮುಖ್ಯಮಂತ್ರಿಗಳ ಆ ತರಹದ ಒಂದೇ ಒಂದು ನಿದರ್ಶನ ಯಾವುದೇ ಇಲ್ಲ, ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅವರು ಹೇಳಿದಂತೆ ನಡೆಯಬಹುದು, ಸರ್ಕಾರದಲ್ಲಿ ಸಿಎಂಗೆ ಅಧಿಕಾರ. 40ವರ್ಷದ ಇತಿಹಾಸ ನಾಲ್ಕುವರ್ಷ ಸಿಎಂ ಆಗಿದ್ದವರನ್ನು ಯಾವ ಆಧಾರದಲ್ಲಿ ರಬ್ಬರ್ ಸ್ಟ್ಯಾಂಪ್ ಅನ್ನುತ್ತಾರೆ. ಏನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವರಾ ಎಂದು ಪ್ರಶ್ನಿಸಿದರು.