
ಇಂಡಿ :ಮೇ.24: ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ರವರು ಇಂಡಿ ಪುರಸಭೆಗೆ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಇಂಡಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಮುಗಿದ ನಿಮಿತ್ಯ ಆಡಳಿತ ಅಧಿಕಾರಿಯಾಗಿ ಗಡದೆಯವರು ಅಧಿಕಾರ ವಹಿಸಿದ್ದಾರೆ.
ಮುಂದಿನ 30 ತಿಂಗಳ ಅವಧಿಗೆ ಮೀಸಲಾತಿ ಘೋಷಿಸುವ ವರೆಗೂ ಗಡದೆಯವರು ಅಧಿಕಾರದಲ್ಲಿರುತ್ತಾರೆ.