ಆಡಳಿತಾತ್ಮಕ ಸೌಧ ನಿರ್ಮಾಣಕ್ಕೆ ಕಾರ್ಯಸಿದ್ಧತೆ ಆರಂಭ

ಮಾನ್ವಿ,ಮಾ.೨೭- ತಾಲೂಕಿನ ಹಲವಾರು ವರ್ಷಗಳ ಕನಸ್ಸಾಗಿದ್ದ ಮಿನಿ ವಿಧಾನಸೌಧ ಅಥಾವ ಆಡಳಿತಾತ್ಮಕ ಸೌಧ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲ ನಿವೇಶನದ ತೊಡಕುಗಳು ನಿವಾರಣೆಯಾಗಿದ್ದು ಆಡಳಿತಾತ್ಮಕ ಇಲಾಖೆಯ ಐದು ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಇಲಾಖೆಯ ಐದು ಕೋಟಿ ವೆಚ್ಚದಲ್ಲಿ ಒಟ್ಟು ಹತ್ತು ಕೋಟಿ ವೆಚ್ಚದಲ್ಲಿ ಎಲ್ಲ ಇಲಾಖೆಯನ್ನು ಒಳಗೊಂಡಿರುವ ಒಂದು ಆಡಳಿತಾತ್ಮಕ ಸೌಧ ನಿರ್ಮಾಣ ಮಾಡಿ ತಾಲೂಕಿನ ಜನತೆಗೆ ಒಂದೇ ಸೂರಿನಡಿಯಲ್ಲಿ ಕೆಲಸಗಳು ಆಗುವಂತೆ ಮಾಡಲಾಗುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ಕುಮಾರಸ್ವಾಮಿ ಸರ್ಕಾರದ ಸಮಯದಲ್ಲಿ ಮಿನಿ ವಿಧಾನ ಸೌದ ನಿರ್ಮಾಣಕ್ಕೆ ಹತ್ತು ಕೋಟಿ ಅನುದಾನ ನೀಡಲಾಗಿತ್ತು ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಗೂ ಸೌಧ ನಿರ್ಮಾಣದ ಜಾಗದ ತೊಂದರೆಯಾಗಿ ಅರ್ಧಕ್ಕೆ ನಿಂತು ಹೋಗಿತ್ತು ಆದರೆ ಸಚಿವ ಆರ್ ಆಶೋಕ ಅವರ ಸಹಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಒಟ್ಟು ೭.೨೮ ಎಕರೆಯಷ್ಟು ಜಾಗದಲ್ಲಿ ಒಟ್ಟು ನಾಲ್ಕು ಎಕರೆಯಷ್ಟು ಜಾಗವನ್ನು ನನ್ನ ಕಾಲಾವಧಿಯಲ್ಲಿ ತಾಲೂಕ ಆಡಳಿತದ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಮುಂದಿನ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ತಾಲೂಕ ಆಡಳಿತಾಧಿಕಾರಿಗಳಿಂದ ಕಾಮಗಾರಿಗೆ ಶಂಕು ಸ್ಥಾಪನೆಯಾಗಲಿದ್ದು ಕಾಮಗಾರಿಯು ಆರಂಭವಾಗಲಿದೆ ಇದು ನನ್ನ ಕಾಲಾವಧಿಯಲ್ಲಿನ ಕೆಲಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆ ಡಿ ಎಸ್ ಪಕ್ಷದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಪಾಟೀಲ, ಜಂಭುನಾಥ ಯಾದವ್. ನಾಗರಾಜ ಬೋಗವತಿ, ಖಲೀಲ್ಚಖುರೇಷಿ, ರವಿಕುಮಾರ್, ಇಸ್ಮಾಯಿಲ್ ಸಾಬ್, ಸೈಯಾದ್ ಹುಸೇನ್ ಸಾಹೇಬ್,ಶರಣಪ್ಪ ಮೇದಾ, ಭಾಷ ಸಾಬ್, ಸೇರಿದಂತೆ ಅನೇಕರು ಇದ್ದರು.