ಆಡಳಿತಾತ್ಮಕ ನ್ಯಾಯಮೂರ್ತಿ ಭೇಟಿ: ನ್ಯಾಯಲಯ ವೀಕ್ಷಣೆ

ಮಾನ್ವಿ.ಮಾ.೨೧-ರಾಯಚೂರು ಜಿಲ್ಲೆಯ ನ್ಯಾಯಲಯಗಳ ಆಡಳಿತಾತ್ಮಕ ಅಧಿಕಾರಿ ಹಾಗೂ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಕೆ.ನಟರಾಜ್ ಇವರು ಮಾನವಿ ನ್ಯಾಯಾಲಯಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯವನ್ನು ವೀಕ್ಷಣೆ ಮಾಡಿ ಉತ್ತಮ ಗುಟ್ಟಮಟ್ಟದಿಂದ ಕಟ್ಟಡ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿ ಕುಂದುಕೊರತೆಗಳನ್ನು ಆಲಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಇರುವ ಕುಂದುಕೊರತೆಗಳನ್ನು ವೀಕ್ಷಣೆ ಮಾಡುವುದಕ್ಕೆ ಆಗಮಿಸಿದ ಆಡಳಿತಾತ್ಮಕ ಅಧಿಕಾರಿ ಹೈಕೋರ್ಟ ನ್ಯಾಯಮೂರ್ತಿ ಕೆ ನಟರಾಜ್ ಹಾಗೂ ರಾಯಚೂರು ಜಿಲ್ಲೆಯ ಸತ್ರ ನ್ಯಾಯಮೂರ್ತಿ ಮಲ್ಲಿಕಾರ್ಜುನ ಗೌಡ ಇಂದು ಬೇಟಿ ಮಾಡಿ ನೂತನ ಕಟ್ಟಡವನ್ನು ವೀಕ್ಷಣೆ ಮಾಡಿದರು.
ನಂತರ ವಕೀಲರ ಸಂಘದ ಅಧ್ಯಕ್ಚರಾದ ಮಲ್ಲಿಕಾರ್ಜುನ ಪಾಟೀಲ ಹಾಗೂ ಪದಾಧಿಕಾರಿಗಳಿಂದ ನ್ಯಾಯಮೂರ್ತಿಗಳಿಗೆ ಮಾನವಿಯಲ್ಲಿ ಖಾಯಂ ಸಿವಿಲ್ ನ್ಯಾಯಪೀಠ ನಿರ್ಮಾಣ ಹಾಗೂ ಹೊಸದಾದ ಬಂಧಿಕಾನೆ ನಿರ್ಮಾಣ ಮಾಡುವುದಕ್ಕೆ ಮನವಿ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖಂಡಿತವಾಗಿ ನಿಮ್ಮ ಮನವಿಯನ್ನು ಪರಿಗಣಿಸಿ ಇದನ್ನು ರಾಜ್ಯ ಮಟ್ಟದ ನ್ಯಾಯದೀಶರಲ್ಲಿ ಚರ್ಚೆ ಮಾಡಿ ಅದಷ್ಟು ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದರು. ಸಂಘದ ಪದಾಧಿಕಾರಿಗಳಿಂದ ಹಾಗೂ ಹಿರಿಯ ವಕೀಲರಾದ ಶ್ಯಾಮಸುಂದರ್ ನಾಯಕ ಇವರಿಂದ ನ್ಯಾಯಮೂರ್ತಿಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಹನುಮಂತಪ್ಪ ನಾಯಕ ನೀರಮಾನವಿ ಸ್ವಾಗತಿಸಿದರು. ಉರುಕಂದ ಜಗ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ಮಾನವಿ ನ್ಯಾಯಮೂರ್ತಿಗಳಾದ ವಿಜಯಕುಮಾರ ಹಿರೇಮಠ. ಸರ್ಕಾರಿ ಅಭಿಯೋಜಕಿ ಅರ್ಚನಾ ಯಾದವ. ವಕೀಲರ ಸಂಘದ ಕಾರ್ಯದರ್ಶಿ ರವಿಕುಮಾರ್ ಪಾಟೀಲ. ಹಿರಿಯ ನ್ಯಾಯವಾದಿಗಳಾದ ಎ ಬಿ ಉಪ್ಪಳಮಠ. ಗುಮ್ಮ ಬಸವರಾಜ.
ಖಜಾಂಚಿ ಚಂದ್ರಶೇಖರ ಮದ್ಲಾಪೂರ. ಸೇರಿದಂತೆ ಹಿರಿಯ ಕಿರಿಯ ಮಹಿಳಾ ವಕೀಲರು ಉಪಸ್ಥಿತರಿದ್ದರು.