ಆಡಗಲ್ ಗ್ರಾಮದೇವತೆ ಜಾತ್ರೆ ಆರಂಭ

ಬಾದಾಮಿ,ಮೇ.17: ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ತಾಲೂಕಿನ ಆಡಗಲ್ ಗ್ರಾಮದ ಗ್ರಾಮದೇವತೆ ವೈಶಿಷ್ಟಮಯವಾದ ಶ್ರೀ ಕೋಣಮ್ಮದೇವಿ ಹಾಗೂ ದುರ್ಗಾದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಕಳೆದ ಮೇ 10 ರಿಂದ ಆರಂಭವಾಗಿದ್ದು, ಮೇ 20 ರ ವರೆಗೆ ನಡೆಯಲಿವೆ.
ಮೇ 12 ರಂದು ಶ್ರೀ ಕೋಣಮ್ಮದೇವಿಯ ಅಂಕಿ ಹಾಕಿದ್ದು, ಮೇ 16 ರಂದು ಮಂಗಳವಾರ ಶ್ರೀ ಕೋಣಮ್ಮದೇವಿಯ ಹಂದರ ಹಾಕಲಾಗಿದೆ. ಇಂದು(ಮೇ 17) ಬುಧವಾರ ಬೆಳಿಗ್ಗೆ ಶ್ರೀ ಗುನ್ನಮ್ಮದೇವಿ ಗುಡಿಯಿಂದ ಶ್ರೀ ಕೋಣಮ್ಮದೇವಿ ಗುಡಿಯವರೆಗೆ ಸೀರಿ ಗಳಿಗೆ ಮತ್ತು ಘಟೆ ಗಡಿಗೆ, ನಂದಾದೀಪ ಕಳಸದವರು, ಪಲ್ಲಕ್ಕಿ ಮತ್ತು ಡೊಳ್ಳಿನ ಮೇಳದವರು ಸಕಲ ಭಕ್ತರೊಂದಿಗೆ ಶ್ರೀ ಕೋಣಮ್ಮದೇವಿ ದೇವಸ್ಥಾನದವರೆಗೆ ತೆರಳಲಿದೆ. ಇಂದು ಮತ್ತು ನಾಳೆ ಗುರುವಾರ ಶ್ರೀ ಕೋಣಮ್ಮದೇವಿಗೆ ದೀರ್ಘ ನಮಸ್ಕಾರ ಹಾಕುವುದು ಹರಕೆ ತೀರಸಲಿದ್ದಾರೆ. ಗುರುವಾರ ರಾತ್ರಿ 10 ಗಂಟೆಗೆ ರಾಜ್ಯದಲ್ಲಿ ರೌಡಿಗಳ ಧರ್ಬಾರ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 19 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸಂಗ್ರಾಣಿ ಕಲ್ಲು ಎತ್ತುವುದು, ಸಿಡಿ ಹೊಡೆಯುವುದು ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಜಂಗಿ ಕುಸ್ತಿಗಳು ನಡೆಯಲಿವೆ. ಶ್ರೀ ಕೋಣಮ್ಮದೇವಿಗೆ ಭಕ್ತರು ಕಾಯಿ ಬಾನ ಮುಟ್ಟಿಸಲಿದ್ದಾರೆ. ಮೇ 20 ರಂದು ಶನಿವಾರ ಸಂಜೆ ಕಾರಬಾನ ಹೊರಡಲಿದೆ. ಗರಿ ಕಳಸ ಹೊರಡಿಸುವುದು. ರಾತ್ರಿ ಶ್ರೀ ಕೋಣಮ್ಮದೇವಿ ರಂಗ ಬಳಿಯುವುದು ಕಾರ್ಯಕ್ರಮ ನಡೆಯಲಿದೆ. ಮೇ 17 ರಂದು ಬುಧವಾರದಿಂದ ಮೇ 20 ರ ವರೆಗೆ ಪ್ರತಿದಿನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ;9880259840, 8151930386 ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.