
ಸೊರಬ.ಎ.4: ಸಮಾಜದಲ್ಲಿ ಮಾನವೀಯ ಮತ್ತು ಮನುಷ್ಯತ್ವದ ಸಂಬಂಧಗಳು ಕ್ಲಿಷ್ಟಮಯವಾಗಲು ಮಾನವನು ಇಂದು ಅತಿಯಾದ ಆಡಂಬರದ ಸಂಪತ್ತಿನ ವ್ಯಾಮೋಹವನ್ನು ಬೆಳೆಸಿಕೊಂಡಿರುವುದೇ ಬದುಕಿನ ದುರಂತತೆಗೆ ಕಾರಣವಾಗಿದೆ ಎಂದು ಬೆಕ್ಕನಕಲ್ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ತಾಲೂಕಿನ ಬಸವ ಕೇಂದ್ರ ಮುರುಗ ಮಠ ಹಿರೇಮಾಗಡಿಯಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ಚನ್ನಬಸವ ಮುರುಗ ರಾಜೇಂದ್ರ ಮಹಾಶಿವಯೋಗಿಗಳವರ 218ನೇ ವರ್ಷದ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಸರ್ವ ಧರ್ಮದ ಚಿಂತನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವ ಇಂದು ಸಹಜತೆಯನ್ನು ಮರೆತು ಕೃತಕತೆಗೆ ಒಳಗಾಗುತ್ತಿದ್ದಾನೆ ಜೀವನವೆಂಬುದು ಸ್ವಂತಿಕೆಯ ಮೇಲೆ ಅವಲಂಬಿತವಾಗಿರಬೇಕು ಅದಕ್ಕೆ ಪೂರಕವಾದ ಚಿಂತನೆಯನ್ನು ಹೊಂದಿದಾಗ ಮಾತ್ರ ಬದುಕಿನ ಸಾರ್ಥಕತೆಯನ್ನು ಮೆರೆಯಬಹುದು. ಪ್ರಾಣಿಗಳಲ್ಲಿರುವ ಸಹೃದಯ ಕೃತಜ್ಞತೆಯ ಭಾವ ಮಾನವನಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸವಾಗಿದೆ ಎಂದ ಅವರು ಹುಟ್ಟು ಸಾವು ಮುಖ್ಯವಲ್ಲ ಜೀವನ ಮುಖ್ಯವೆಂಬ ಕಲ್ಪನೆ ಮೂಡಿದಾಗ ನೆಮ್ಮದಿಯ ಜೀವನದ ಸಾರ್ಥಕತೆ ತಲುಪಬಹುದು. ಸಮಾಜಕ್ಕೆ ಮಠ ಮಂದಿರಗಳ ಅವಶ್ಯಕತೆ ಇದ್ದು ಅವುಗಳು ಸಮಾಜವನ್ನು ತಿದ್ದುವ ಕೇಂದ್ರಗಳಾಗಿ ಪರಿವರ್ತನೆಯಾಗಿವೆ 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ. ದಾ ಸೋಹ ಪರಿಕಲ್ಪನೆಗಳನ್ನು ನೀಡಿದ್ದರ ಫಲವಾಗಿ ವಿರಕ್ತ ಪರಂಪರೆಯಿಂದ ಸೇವೆಯನ್ನ ಸಲ್ಲಿಸುತ್ತಾ ಬಂದಿದೆ ಎಂದರು. ಜಡೇ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಮಾತನಾಡಿ ಜಂಗಮ ತತ್ವಕ್ಕೆ ಯಾವುದೇ ಜಾತಿ ಭೇದಗಳಿಲ್ಲ ಭಕ್ತರಿಗೆ ಧರ್ಮೋಪದೇಶ. ಕಾಯಕ ನಿಷ್ಠೆಯನ್ನು ಬಿತ್ತರಿಸುವ ಕಾರ್ಯವನ್ನು ಮಠ ಮಾನ್ಯಗಳು ಸಮಾಜದಲ್ಲಿ ಮುಂದುವರೆಸಿಕೊಂಡು ಬಂದಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು. ಎಸ್ ಎಸ್ ಬ್ಯಾಡಗಿ ಉಪನ್ಯಾಸ ನೀಡಿದರು,ಹಿರೇ ಮಾಗಡಿ ಮಠದ ಶಿವಮೂರ್ತಿ ಮಹಾ ಸ್ವಾಮೀಜಿ, ಸಿದ್ದೇಶ್ವರ ಮಹಾಸ್ವಾಮಿಜಿ, ಮಹಾಂತದೇಶಿ ಕೇಂದ್ರ ಸ್ವಾಮೀಜಿ, ಶಿವಯೋಗಿ ದೇವರು, ಗದಗಯ್ಯ ದೇವರು, ಸಂಗಮೇಶ ದೇವರು, ಶಿವಬಸವ, ಮಹಾಂತೇಶ ಕಳ್ಳಿ ಕೊನೆ, ಎಂ ಎಸ್ ಕಾರ್ತಿಕ್, ಬಸವನಗೌಡ, ಚಂದ್ರಣ್ಣ ಸುರಣಗಿ, ರಾಜೇಶ್ವರಿ, ಸುರೇಶ್, ಸಂಪತ್ ,ರೇವಣಪ್ಪ, ಮುಕಯ್ಯ ಹಿರೇಮಠ, ಸೇರಿದಂತೆ ಮೊದಲಾದವರಿದ್ದರು