ಆಡಂಬರದ ಉತ್ಸವಗಳು ನಿಲ್ಲಿಸಿ, ಪರಿಸರ ಸಂರಕ್ಷಿಸಿ: ಅರುಣಕುಮಾರ ಹೊಸಪೇಟೆ

ಬೀದರ:ಜೂ.5: ಮದುವೆ, ವಿವಾಹ ವಾರ್ಷಿಕೋತ್ಸವಗಳು ಹಾಗೂ ಜನ್ಮದಿನಾಚರಣೆ ಸಂದರ್ಭದಲ್ಲಿ ಲಕ್ಷಾವಧಿ ಹಣ ವ್ಯಯ ಮಾಡುವ ಬದಲು ಪರಿಸರ ಸಮತೋಲನ ಕಾಪಾಡಲು ಎಲ್ಲೆಡೆ ಗಿಡ, ಮರಗಳನ್ನು ನೆಡುವಂತೆ ಜೆಡಿಎಸ್ ಮುಖಂಡ ಅರುಣಕುಮಾರ ಹೊಸಪೇಟೆ ಹೇಳಿದರು.

ನಗರದ ವಿದ್ಯಾನಗರ ಬಡಾವಣೆಯ ಶ್ರೀ ರಾಮ ಮಂದಿರ ಮುಂಭಾಗದಲ್ಲಿ ಶನಿವಾರ ಸಂಜೆವಾಣಿ ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಪಾಟೀಲ ಹಾಗೂ ಪೂಜಾ ಪಾಟೀಲ ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಲ್ಕೆ ಚಾಲನೆ ನೀಡಿದರು.

ಇಂದು ಎಲ್ಲಡೆ ಆಕ್ಷಿಜನ್‍ಗಾಗಿ ಹಾಹಾಕಾರ ನಡೆಯುತ್ತಿದೆ. ಬಗಲಲ್ಲಿ ಕೂಸು ಇಟ್ಟಿಕೊಂಡು ಊರೆಲ್ಲ ಸುತ್ತುವ ಹಾಗೇ ವಿವಿಧ ಸಸ್ಯೆಗಳಿಂದ ಹೆಚ್ಚಿನ ಆಮ್ಲಜನಿಕ ದೊರೆಯುತ್ತದೆ ಎಂಬ ಪರಿಜ್ಞಾನ ನಮ್ಮಿಂದ ಮಾಸಿ ಹೋಗಿದೆ. ಹೊಂಗೆ, ಬೇವು, ಆಲ, ಇತ್ಯಾದಿ ಬೃಹತ್ತಾಕಾರದ ಗಿಡಗಳು ನೆಟ್ಟು ಪರಿಸರ ಶುದ್ದವಾಗಿಸುವುದರ ಜೊತೆಗೆ ಭವಿಷ್ಯದ ಆಕ್ಷಿಜನ್ ಭಂಡಾರ ನಿರ್ಮಿಸಲು ಸನ್ನದ್ದರಾಗುವಂತೆ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಕೋವಿಡ್ ಮೂರನೇ ಅಲೆ ಎದುರಿಸಲು ಹೆಚ್ಚಿನ ಆಮ್ಲಜನಕದ ಅಗತ್ಯವಿದ್ದು ಹೊರ ದೇಶಗಳಿಂದ ತರುತ್ತ ಕೂತರೆ ಸಮಯ, ಹಣ ಎಲ್ಲವೂ ವ್ಯರ್ಥ ಮಾಡುವ ಬದಲು ಈ ವರ್ಷ ಸಮಯಕ್ಕೆ ಸರಿಯಾಗಿ ಮಳೆ ಆರಂಭವಾಗಿರುವುದರಿಂದ ಇದು ಗಿಡ, ಮರಗಳು ನೆಡುವ ಸುಸ್ಸಂಧಿ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳ ಹಾಗೂ ತಮ್ಮವರ ಸಂಪ್ರದಾಯಿಕ ಉತ್ಸವಗಳನ್ನು ಸಸಿ ನೆಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಕರೆ ನೀಡಿದರು.

ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಮಾತನಾಡಿ, ಪರಿಸರ ಶುಚಿಯಾಗಿದ್ದರೆ ಭವಿಷ್ಯದ ಗಂಡಾಂತರಗಳಿಂದ ಈ ದೇಶ ರಕ್ಷಿಸಬಹುದು. ಕೋವಿಡ್‍ನಂತಹ ಎಂತಹದೇ ರೋಗಗಳಿಗೆ ಎಷ್ಟೋ ಸಸಿಗಳೇ ರಾಮಬಾಣವಾಗಿರುವುದರಿಂದ ಅನೇಕ ವನಸ್ಪತಿಯ ಸಸಿಗಳನ್ನು ನೆಟ್ಟು ಪರಿಸರ ಪ್ರೇಮಿಯನ್ನಾಗಿ ಗುರುತಿಸುವಂತೆ ಕರೆ ನೀಡಿದರು.

ಬಡಾವಣೆಯ ಮುಖಂಡ ಕಲ್ಯಾಣರಾವ ಬಿರಾದಾರ, ಜೈಶ್ರೀರಾಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ, ಪ್ರಮುಖರಾದ ಮೋಹನ್ ಚಾರಿ, ಪ್ರಭಾಕರ ಜಚಿme, ಮಲ್ಲಿಕಾರ್ಜುನ್ ಬೆಳಕೇರಿ, ಮಹೇಶ ತಿವಾರಿ ಮಹಾರಾಜ, ಪ್ರಭು ಆಲೂರೆ, ರಾಜು ಜಾಧವ್, ನಾಗೇಂದ್ರ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.