ಆಡಂಬರಕ್ಕೆ ಸೀಮಿತವಾಗದೆ ಜನರ ಸಮಸ್ಯೆಗೆ ಸ್ಪಂದಿಸಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಮಾ.19:ಗ್ರಾಮೀಣ ಭಾಗದ ಜನರ ಸಮಸ್ಯೆಗಳ ನಿವಾರಣೆಗಾಗಿ ಸರಕಾರ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಕೇವಲ ಆಡಂಬರಕ್ಕೆ ಸೀಮಿತವಾಗದೇ ಜನರ ಸಮಸ್ಯೆಗೆ ಸ್ಪಂಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಹೇಳಿದರು.
ತಾಲೂಕಿನ ಕಲ್ಲೂರ ಗ್ರಾಮದಲ್ಲಿ ತಾಲೂಕ ಆಡಳಿತ ವತಿಯಿಂದ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಧಿಸಿದ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವಂತ ವಿನೂತ ಕಾರ್ಯಕ್ರಮವಾಗಿದೆ. ಗ್ರಾಮೀಣ ಭಾಗದ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನಸಾಮಾನ್ಯರು ಪದೆ ಪದೇ ಕಚೇರಿಗಳಿಗೆ ಬರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮದಲ್ಲಿ ವಿದ್ಯುತ್ ಸಂರ್ಪಕ ಇಲ್ಲದ ಕೆಲ ಮನೆಗಳಿಗೆ ವಿದ್ಯುತ್ ಸಂರ್ಪಕ ಕೊಡಬೇಕು ಜತೆಯಲ್ಲಿ ಹಳೆ ವಿದ್ಯುತ್ ತಂತಿಗಳನ್ನು ಶೀಘ್ರಗತಿಯಲ್ಲಿ ಬದಲಾಯಿಸಬೇಕು. ಜನರಿಗೆ ವಿದ್ಯುತ್ ಸಂರ್ಪಕ ಅಗತ್ಯವಾಗಿದೆ. ಹೀಗಾಗಿ ಜೇಸ್ಕಾಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ತ್ವರಿತವಾಗಿ ಈ ಎಲ್ಲ ಕೆಲಸಗಲು ಮುಗಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪಶು ವೈದ್ಯಧಿಕಾರಿ ಶಾಂತಕುಮಾರ್ ಸಿದ್ದೇಶ್ವರ್. ರೇಷ್ಮೆ ಇಲಾಖೆ ರವಿಕುಮಾರ್
ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೀಯಂಕಾ ಜಮಾದರ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರೇವಣಸಿದ್ದ ಮರಕುಂದೆ, ತಹಸೀಲ್ದಾರ್ ಅಂಜು ಲಸ್ಕರ್, ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ. ನಿರ್ದೇಶಕ ರಾಜಶೇಖರ ಬುಳ್ಳಾ, ಗ್ರಾಪಂ. ಸದಸ್ಯರಾದ ಅನೀಲ ಕೊನೆರಿ, ಸಂಜುಕುಮಾರ ಕಟ್ಟಿಮನಿ, ಶಿವರಾಜ ಕೋಳಾರ, ಪಾರ್ವತಿ ಬಿರಾದಾರ, ತೇಜಮ್ಮ ಕಟ್ಟಿಮನಿ, ಮಹಾನಂದ ಶರಣಪ್ಪ, ವೀರಭದ್ರಪ್ಪ ಪಾಟೀಲ್ ಇದ್ದರು.