ಆಟ ಆಡಲು ಹೋದ ಮಗ ಶವವಾಗಿ ಪತ್ತೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 6 :- ಆಟ ಆಡಲು ಹೋಗಿದ್ದ ಮಗ ಮನೆಗೆ ಬಾರದೆ ಕಾಣೆಯಾಗಿದ್ದು ಕಳೆದ ರಾತ್ರಿ ಹಳ್ಳದ ನೀರಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯದ ಉಪ್ಪಳ್ಳದಲ್ಲಿ  ಜರುಗಿದೆ.
ಬಣವಿಕಲ್ಲು ಗ್ರಾಮದ ಸಾಗರ (12) ಐದನೇ ತರಗತಿ ವಿದ್ಯಾರ್ಥಿ ಎಂದು ಹೇಳಲಾಗುತ್ತಿದ್ದು ಈತನು ತನ್ನ ತಾಯಿಗೆ ಆಟವಾಡಿ ಬರುವುದಾಗಿ ನಿನ್ನೆ ಸಂಜೆ ಹೇಳಿ ಹೋದವನು ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಗ್ರಾಮದ ಎಲ್ಲಾಕಡೆ ಹುಡುಕಾಡಿದರೂ ಸಿಗದೇ ಇದ್ದು ಒಬ್ಬನೇ ಮಗ ಇರುವುದರಿಂದ ಗಾಬರಿಗೊಂಡ ತಾಯಿ ಅವನ ಸ್ನೇಹಿತರು ಹಾಗೂ ಇತರರನ್ನು ವಿಚಾರಿಸಲಾಗಿ ನಂತರ ಗ್ರಾಮದ ಹೊರವಲಯದ ಉಪ್ಪಳ್ಳದ ಕಡೆ ಹೋಗಿ ನೋಡಲಾಗಿ ಅಲ್ಲಿ ಸಾಗರನ ಬಟ್ಟೆಗಳನ್ನು ನೋಡಿ ಗುರುತಿಸಲಾಗಿ ನೀರಿನಲ್ಲಿ ಈಜಲು ಹೋಗಿ ಮುಳುಗಿರಬಹುದೇದು ಅರಿತು ನೀರಿನಲ್ಲಿ ಹುಡುಕಲಾಗಿ ರಾತ್ರಿ 11ಗಂಟೆ ಸುಮಾರಿಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಗರನ ಶವ ಪತ್ತೆಯಾಗಿದೆ. ಈ ಶವ ತೆಗೆಯುವಲ್ಲಿ ಗ್ರಾಮಸ್ಥರು ಕೂಡ್ಲಿಗಿ ಅಗ್ನಿಶಾಮಕ ದಳ ಹಾಗೂ ಹೊಸಹಳ್ಳಿ ಪೊಲೀಸರು ಶ್ರಮಿಸಿದ್ದಾರೆ ಎಂದು ತಿಳಿದಿದೆ ಇದ್ದೊಬ್ಬ ಮಗನನ್ನು ಕಳಕೊಂಡ ನೊಂದ ಜೀವ ಪುಷ್ಪವತಿ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಇಂದು ಬೆಳಿಗ್ಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದಿದೆ.

One attachment • Scanned by Gmail