ಆಟೋ ಲಾರಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:  ಹೊಸಪೇಟೆ ತಾಲೂಕಿನ  ವಡ್ರಳ್ಳಿ ಬಳಿ ಸಂಭವಿಸಿದ ಲಾರಿ‌ ಮತ್ತು
ಅಟೋ ಅಪಘಾತದಲ್ಲಿ ಮೃತಪಟ್ಟ ಒಂದೇ ಕುಟುಂಬದ ಏಳು ಜನರಿಗೆ  ತಲಾ ಎರೆಡು ಲಕ್ಷ ರೂಗಳಂತೆ ಪರಿಹಾರದ ಚೆಕ್ ನ್ನು   ಸಚಿವ ಬಿ.ನಾಗೇಂದ್ರ ಅವರು ಇಂದು ವಿತರಿಸಿದರು.
ಈ  ಅಪಘಾತದಲ್ಲಿ ಕೌಲ್ ಬಜಾರ್ ನ ಏಳು  ಅಂದ್ರಾಳ್ ನ ಇಬ್ಬರು ಸೇರಿ ಒಂಬತ್ತು ಜನರು ಮೃತಪಟ್ಟಿದ್ದರು
ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ಎರೆಡು ಲಕ್ಷ ಪರಿಹಾರ ಘೋಷಣೆ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ  ಅದೇಶದಂತೆ ನಾಗೇಂದ್ರ ಅವರು ಮೃತರ ಕೌಲ್ ಬಜಾರ್ ನಲ್ಲಿ ಇದ್ದ ಮನೆ ಬಾಗಿಲಿಗೆ ತೆರಳಿ ಪರಿಹಾರದ ಚೆಕ್ ನೀಡಿದ್ದಾರೆ.
ಇನ್ನುಳಿದ ಇಬ್ಬರಿಗೆ ನಗರ ಶಾಸಕರು ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆಂದು ಈ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ.