ಆಟೋ ಮೇಲಿದ್ದ ರಾಜಕಾರಣಿಗಳ ಭಾವಚಿತ್ರ ತೆರವು

ಚಿಕ್ಕಬಳ್ಳಾಪುರ,ಏ.೧-ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಕಚೇರಿ ಬಳಿ ಹಾಗೂ ವಾಹನಗಳ ಮೇಲೆ ರಾಜಕಾರಣಿಗಳ ಹಾಗೂ ಚುನಾವಣಾ ಸ್ಪರ್ಧಾಕಾಂಕ್ಷಿಗಳ ಭಾವಚಿತ್ರಗಳು ಇರಬಾರದು ಎಂಬ ನೀತಿ ಸಂಹಿತೆಯ ಮಹತ್ವವನ್ನು ಅರಿತ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ತಮ್ಮ ಆಟೋಗಳಿಗೆ ಮೆತ್ತಿದ್ದ ರಾಜಕಾರಣಿಗಳ ಭಿತ್ತಿಚಿತ್ರಗಳನ್ನು ತಾವೇ ತೆರವುಗೊಳಿಸುತ್ತಿರುವುದು ಒಂದು ಸಾಮಾಜಿಕ ಕಳಕಳಿಯ ವಿಚಾರವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಈ ಹಿಂದೆ ಎಲ್ಲಂದರಲ್ಲಿ ರಾಜಕಾರಣಿಗಳನ್ನು ವೈಭವೀಕರಿಸುವ ಡಿಜಿಟಲ್ ಲಕ್ಸ್ ಗಳು ವಾಹನಗಳ ಮೇಲೆ ಅವರ ಯೋಜನೆಗಳನ್ನು ಬಿಂಬಿಸುವ ಮುದ್ರಣ ಬಿತ್ತಿ ಪತ್ರಗಳನ್ನು ಅಂಟಿಸಿದ್ದರು. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯನ್ನು ಕರೆದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವವರು ಯಾರೇ ಆಗಲಿ ಅವರು ದಂಡನಾರು ಹರು ಎಂದು ಹೇಳಿದ್ದರು ಈ ವಿಷಯ ಮಾಧ್ಯಮಗಳಲ್ಲಿ ಬಂದ ನಂತರ ಅನೇಕ ತ್ರಿಚಕ್ರ ವಾಹನ ಚಾಲಕರುಗಳು ತಮ್ಮ ವಾಹನಗಳಿಗೆ ಅಂಟಿಸಿದ್ದ ರಾಜಕಾರಣಿಗಳ ರಾಜಕೀಯ ಪ್ರೇರಿತ ಡಿಜಿಟಲ್ ಪತ್ರಿಕೆಗಳನ್ನು ಗೊಳಿಸಿರುವ ದೃಶ್ಯ.
ನಗರದ ಕೋರ್ಟ್ ಕಾಂಪ್ಲೆಕ್ಸ್ ಬದಿ ಇರುವ ದಿನಪತ್ರಿಕೆಗಳ ಮಾರಾಟಗಾರ ಹಾಗೂ ಕನ್ನಡ ಪುಸ್ತಕಗಳ ಮಾರಾಟಗಾರ ನಾಗರಾಜ್ ರವರು ತಮ್ಮ ಆಟೋಗಳ ಮೇಲೆ ಅಂಟಿಸಿದ್ದ ಪತ್ರಗಳನ್ನು ತೆರವುಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದರು.