ಆಟೋ ಟೈರ್ ಬ್ಲಾಸ್ಟ್ 37ಜನರಿಗೆ ಗಾಯ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.12: ತಾಲೂಕಿನ ಅರಳಿಗನೂರು ಗ್ರಾಮದಿಂದ ಜಾಲಿಬೆಂಚೆ ಗ್ರಾಮದ ಹೊಲಗಳಲ್ಲಿ ಮೆಣಸಿನಕಾಯಿ ಕೀಳಲು  ಆಟೋದಲ್ಲಿ ಹೋಗಿ ಅರಳಿಗನೂರು ಗ್ರಾಮಕ್ಕೆ ತೆರಳುತ್ತಿದ್ದಾಗ ತೆಕ್ಕಲಕೋಟೆ ಬಳಿ ರಾಷ್ಷ್ರೀಯ ಹೆದ್ದಾರಿಯಲ್ಲಿ ಆಟೋ ಬುಲೆರೊ ಟೈರ್ ಬ್ಲಾಸ್ಟ್ ಆಗಿದ್ದು    ಹೋಗಿದ್ದ 50 ಜನರಲ್ಲಿ 37 ಜನರಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ತೆಕ್ಕಲಕೋಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸ್ಮಾಶನ ಮುಂದೆ ಕೂಲಿ ಕಾರ್ಮಿಕರ ಆಟೋ ಪಲ್ಟಿಯಾಗಿ 37 ಜನ ಕಾರ್ಮಿಕರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಅರಳಿಗನೂರು ಗ್ರಾಮದ ಕೂಲಿಕಾರ್ಮಿಕರು ಜಾಲಿಬೆಂಚ ಗ್ರಾಮದ ಹೊಲಗಳಿಗೆ ಮೆಣಸಿನಕಾಯಿ ಕೀಳಲು ಆಟೋದಲ್ಲಿ ಹೋಗಿ ಮರಳಿ ಗ್ರಾಮಕ್ಕೆ ಬರುವ ವೇಳೆ ತೆಕ್ಕಲಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕರು ತೆರಳುತ್ತಿದ್ದ ಬುಲೆರೋ ಆಟೋ ಟೈರ್ ಬ್ಲಾಸ್ಟ್ ಆದ ಪರಿಣಾಮ ಆಟೋ ಮುಗುಚಿ ಬಿದ್ದು, ಅದರಲ್ಲಿದ್ದ 50 ಜನರಲ್ಲಿ 37 ಜನರಿಗೆ ತೀವ್ರ ಗಾಯಗಳಾಗಿವೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.