ಆಟೋ ಚಾಲಕರ ಸಂಘದಿಂದ ಶಂಕರ ನಾಗ್ 67ನೇ ಹುಟ್ಟುಹಬ್ಬ ಆಚರಣೆ

ಯಾದಗಿರಿ: ಕನ್ನಡ ಚಿತ್ರರಂಗದ ಮಹಾನ್ ಕಲಾವಿದ, ಅದ್ಬುತ ನಟನೆಯ ಹೃದಯವಂತ ಮರೆಯಲಾಗದ ಮಾಣಿಕ್ಯ, ಕನ್ನಡದ ಕಣ್ಮಣಿ, ಕರ್ನಾಟಕದ ಕರ್ಣನಾಗಿ ಬಾಳಿದ ದಿ.ಶಂಕರ್ ನಾಗ ಅವರ ಹುಟ್ಟುಹಬ್ಬವನ್ನು ಇಲ್ಲಿನ ಶಂಕರ ನಾಗ್ ಅಟೋ ಚಾಲಕರ ಸಂಘದ ನೇತೃತ್ವದಲ್ಲಿ ಆಚರಿಸಲಾಯಿತು.
ನÀಗರದ ಹೊಸಳ್ಳಿ ಕ್ರಾಸ್ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕನ್ನಡದ ಅಚ್ಚಳಿಯದ ನಟ ದಿ|| ಶಂಕರ್ ನಾಗ್ ಅವರ 67ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹಿರಿಯ ಆಟೋ ಚಾಲಕ ಭಾಗಪ್ಪ ರಾಗೇರ ಅವರು ಚಾಲನೆ ನೀಡಿದರು.
ಕನ್ನಡ ಚಿತ್ರರಂಗವನ್ನು ತನ್ನ ಅಭಿನಯದಿಂದ ಶ್ರೀಮಂತಗೊಳಿಸಿದ ಸಜ್ಜನ, ಸರಳ , ಸುಶೀಲ, ಗುಣವಂತ ಅಂದಿಗೂ ಇಂದಿಗೂ ಎಂದೆಂದಿಗೂ ಯುವಜನತೆಯ ಸ್ಪೂರ್ತಿಯ ಸೆಲೆ, ನಗುಮೊಗದ ಅರಸ, ಕರುಣಾಮಯಿ,. ಕೋಟ್ಯಂತರ ಅಭಿಮಾನಿಗಳ ಹೃದಯಗಳ ಯಜಮಾನ ಕರಾಟೆ ಕಿಂಗ್ ಶಂಕರ್ ನಾಗ್ ನಮ್ಮ ನಿಮ್ಮೆಲ್ಲರ ಪ್ರೀತಿಯ ಸಾಂಗ್ಲಿಯಾನ್ ಶಂಕರ್ ನಾಗ್ ಸಾರ್ ಅವರ ಜನ್ಮದಿನದಂದು ಎಲ್ಲರೂ ಸ್ಮರಿಸಿಕೊಳ್ಳೋಣ ಎಂದು ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಅಗಲಿದ ನಟನ ನೆನಪು ನಮ್ಮ ಮನದ ಅಂಗಳದಲ್ಲಿ ಸದಾ ಹಸಿರು ಮತ್ತೆ ಹುಟ್ಟಿ ಬನ್ನಿ ಪ್ರೀತಿಯ ಅಣ್ಣನಾದ ಶಂಕರ್ ನಾಗ್ ಎಂದು ಅಭಿಪ್ರಾಯಿಸಿದರು.
ಶಿವಶರಣಪ್ಪ. ಕುಂಬಾರ್, ಮಲ್ಲಿಕಾರ್ಜುನ (ಸಾಂಗ್ಲಿಯಾನ), ಮುರಗೇಂದ್ರ ತಳವಾರ್, ಬಸವರಾಜ್ ಖಾನಪುರ್, ಸಾಬರೆಡ್ಡಿ ಇದ್ದಲಿ, ಮಲ್ಲಯ್ಯ ಕೊತ್ವಾಲ್, ಅಂಬಣ್ಣ ಕಲಬುರ್ಗಿ, ಮಲ್ಲಯ್ಯ ಅರಕೇರಿ, ಲಕ್ಷ್ಮಣ್ ಚವಾಣ್, ಮಲ್ಲು ನೀಡಿಗಿ, ಅನಿಲ್ ಮುಳ್ಳ್ ಅಗಿಸಿ, ಸ್ಯಾಮ್ ಮುಂಡ್ರಿಗಿ ಇನ್ನಿತರರು ಇದ್ದರು.