ಆಟೋ ಚಾಲಕರ ಮೂಲಕ ಭರ್ಜರಿ ಪ್ರಚಾರಕ್ಕಿಳಿದ
 ಕೆಆರ್ ಪಿ ಪಕ್ಷ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ಎರಡು ರಾಷ್ಟ್ರೀಯ ಪಕ್ಷಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪ್ರಾದೇಶಿಕ  ಪಕ್ಷ ಕೆಆರ್ ಪಿಪಿ ನಗರದಲ್ಲಿಂದು  ಆಟೋ ಚಾಲಕರ ಬೃಹತ್ ಸಮಾವೇಶ ನಡೆಸಿತು.
ಆಟೋ ಚಾಲಕರನ್ನು ಗುರಿಯಾಗಿರಿಸಿಕೊಂಡು ಪ್ರಚಾರ ಮಾಡ್ತಿರೋ ಪಕ್ಷದ ಸಂಸ್ಥಾಪಕ‌ ಜನಾರ್ಧನರೆಡ್ಡಿ ಅವರ ಪತ್ನಿ‌, ನಗರ ಕ್ಷೇತ್ರದ ಅಭ್ಯರ್ಥಿ ಅರುಣಾ ಲಕ್ಷ್ಮೀ ಅವರು ನಗರದ ಮುನಿಷಿಪಲ್ ಹೈಸ್ಕೂಲಗ ಮೈದಾನದಲ್ಲಿ. ಎರಡು ಸಾವಿರಕ್ಕೂ ಹೆಚ್ಚು ಆಟೋ ಗಳನ್ನು ಒಂದೆಡೆ ಸೇರಿಸಿ ಪ್ರಚಾರ ನಡೆಸಿದರು.
ಬಿಜೆಪಿ ನಿಮಗೆ  ಆಟೋ ಚಾಲಕರಿಗೆ ಕೈಕೊಟ್ಟಿದ ಮಾತನ್ನು  ಪೂರ್ಣಗೊಳಿಸಲು ನಾನು ಮತ್ತು ಜನಾರ್ಧನರೆಡ್ಡಿ ಅವರು ಬದ್ಧರಿದ್ದೇವೆ. ನಗರದ
ಎರಡು ಸಾವಿರ ಆಟೋ ಚಾಲಕರಿಗೆ ಹತ್ತು ಲಕ್ಷ ಮೌಲ್ಯದ ಅಪಘಾತ ವಿಮೆ ಮಾಡಿಸಿದೆಂದು‌ ವಿಮೆ ಪತ್ರಗಳನ್ನು ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ವಿತರಿಸಿದರು. ಇದೇ ಸಂದರ್ಭದಲ್ಲಿ ಅವರು ಆಟೋ ಚಾಲಕರಿಗೆ ನಿವೇಶನ ನೀಡುವ ಭರವಶೆ ನೀಡಿದರು.
ಜನಾರ್ದನ ರೆಡ್ಡಿ ಹುಲಿ ಇದ್ದ ಹಾಗೆ ಅವರು ಕೊಟ್ಟ ಮಾತು ಯಾವತ್ತೂ ಮೀರಲ್ಲ, ಯಾವ ನಾಯಕರು ನಮ್ಮ ಜೊತೆಗೆ ಇಲ್ಲದೇ ಇದ್ರೂ ನಾವು ಗೆಲ್ತೇವೆ.
ಜೆಡಿಎಸ್ ಮಾದರಿಯಲ್ಲಿ ಸರ್ಕಾರ ರಚನೆ ಮಾಡಲು ನಮ್ಮ ಪಕ್ಷದ ಸಹಕಾರ ಬೇಕು ಬೇಕು. ಆ ಪರಿಸ್ಥಿತಿ‌ ನಿರ್ಮಾಣವಾಗ್ತದೆಂದರು.
ಜನಾರ್ದನ ರೆಡ್ಡಿ ದೂರದೃಷ್ಟಿ ಇರೋ ನಾಯಕ. ಸ್ವಾತಂತ್ರ್ಯ  ನಂತರ ಬಳ್ಳಾರಿ‌ನಗರ  ಜನಾರ್ದನ ರೆಡ್ಡಿ ಅವರ ಆಡಳಿತದಲ್ಲೆಯೇ ಅಭಿವೃದ್ಧಿಯಾಗಿರೋದು. ಇನ್ನೂ ಸಮಯವಿದೆ ಇನ್ನಷ್ಟು ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡ್ತೇವೆಂದರು.