ಆಟೋ ಚಾಲಕರು ಕಾನೂನು ಪಾಲಿಸಿ : ಡಿ.ವೈ.ಎಸ್.ಪಿ.ಚೈತ್ರ

ಸಂಜೆವಾಣಿ ವಾರ್ತೆ

ಹಿರಿಯೂರು.ಜೂ. 1 – ಆಟೋ ಚಾಲಕರು ತಮ್ಮ ಮತ್ತು ತಮ್ಮ ವಾಹನದ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಹಾಗೂ ಕಾನೂನು ಪಾಲಿಸಬೇಕು ಎಂದು ಡಿ.ವೈ.ಎಸ್. ಪಿ.  ಎಸ್ ಚೈತ್ರ ಹೇಳಿದರು,   ಹಿರಿಯೂರು ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಆಟೋ ಚಾಲಕರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಸಂಚಾರಿ ನಿಯಮದ ಪ್ರಕಾರ ಇರುವಷ್ಟು  ಪ್ರಯಾಣಿಕರನ್ನು ಮಾತ್ರ ಕೂರಿಸಿಕೊಳ್ಳಬೇಕು ಎಂದರು. ಜೊತೆಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಿ ಎಂದು  ತಿಳಿಸಿದರು.ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಇವರು ಮಾತನಾಡಿ ನಗರದಲ್ಲಿ ಸುಮಾರು 10 ಆಟೋ ನಿಲ್ದಾಣಗಳಿದ್ದು ಆಟೋಗಳನ್ನು ನಿಲ್ಲಿಸಿಕೊಂಡು ಸರದಿ ಸಾಲಿನ ಮೂಲಕ ಹೊರಡಬೇಕು, ಎಲ್ಲಿಂದರಲ್ಲಿ ಆಟೋಗಳನ್ನು ನಿಲ್ಲಿಸಬಾರದು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.  ಕಾರ್ಯಕ್ರಮದಲ್ಲಿ ಪಿ ಎಸ್ ಐ. ಸತ್ಯನಾರಾಯಣ, ಸಿಬ್ಬಂದಿಗಳಾದ ರಾಘವೇಂದ್ರ, ರವಿ, ನಳಿನ, ಹಾಗೂ  ಬೈಲಪ್ಪ, ರಾಮಣ್ಣ, ಯಶು, ಮಾಧು, ತಿಪ್ಪೇಸ್ವಾಮಿ, ಮದನ್ , ನರಸಿಂಹಮೂರ್ತಿ, ಕೃಷ್ಣ ಖಲೀಲ್ ಜಗದೀಶ್ ರಂಗಸ್ವಾಮಿ ಮತ್ತಿತರರು ಇದ್ದರು