ಆಟೋ ಚಾಲಕರಿಗೆ ಶಿವಮೊಗ್ಗ ಎಸ್‌ಪಿ ಖಡಕ್ ಸೂಚನೆ

ಶಿವಮೊಗ್ಗ, ನ.3: ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು, ಆಟೋ ಚಾಲಕರ ಸಭೆ ನಡೆಸಿದರು. ಅವರುಗಳ ಕುಂದುಕೊರತೆ ಆಲಿಸಿದರು. ಜೊತೆಗೆ ಚಾಲಕರಿಗೆ ಕೆಲ ಖಡಕ್ ಸೂಚನೆ ನೀಡಿದ್ದಾರೆ.ಸೂಚನೆಗಳೇನು?: ಕನಿಷ್ಠ ದರವನ್ನು ನಿಗಧಿ ಪಡಿಸಿದ ನಂತರ ಎಲ್ಲಾ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಗಳನ್ನು ಅಳವಡಿಸಿಕೊಳ್ಳ ಬೇಕು. ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು.ಶಿಸ್ತಿನ ಸಂಬಂಧ ಆಟೋ ಚಾಲಕರು, ಚಾಲನೆಯ ವೇಳೆಯಲ್ಲಿ ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸಬೇಕು. ಎಲ್ಲಾ ಆಟೋಗಳಿಗೆ ಚಾಲಕರ ಮಾಹಿತಿ ಮತ್ತು ಕ್ಯೂ ಆರ್ ಕೋಡ್ ಹೊಂದಿರುವ ಡಿಸ್ ಪ್ಲೇ ಕಾರ್ಡ್ ಅನ್ನು ಇಲಾಖೆ ವತಿಯಿಂದ ಉಚಿತವಾಗಿ ನೀಡಲಿದ್ದು,  ಸದರಿ ಡಿಸ್ ಪ್ಲೇ ಕಾರ್ಡ್ ಅನ್ನು ಎಲ್ಲಾ ಆಟೋ ಗಳಲ್ಲಿ ಅಳವಡಿಸಿಕೊಳ್ಳಬೇಕು.ಆಟೋ ಚಾಲಕರು ನೀಡುವ ದಾಖಲಾತಿಗಳನ್ನು ಪರಿಶೀಲಿಸಿ ಪ್ರತೀ ಆಟೋಗಳಿಗೆ ಎಸ್.ಎಂ.ಜಿ ನಂಬರ್‌ ಅನ್ನು ನೀಡಲಾಗುವುದು, ನಂತರ ಎಸ್.ಎಂ.ಜಿ ನಂಬರ್ ಇರುವ ಸ್ಟಿಕ್ಕರ್‌ ಗಳನ್ನು ಪ್ರತೀ ಆಟೋ ಚಾಲಕರು ತಮ್ಮ ತಮ್ಮ ಆಟೋ ಗಳಲ್ಲಿ, ಕಾಣುವ ರೀತಿಯಲ್ಲಿ ಅಂಟಿಸಿಕೊಳ್ಳಬೇಕು.ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದ ಸಾರ್ವಜನಿಕರಿಂದ ಆಟೋ ಚಾಲಕರ ಮೇಲೆ ದೂರುಗಳು ಬರುತ್ತಿದ್ದು, ಇದೇ ರೀತಿ ದೂರುಗಳು ಪುನರಾವರ್ತಿತವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಆಟೋ ಗಳನ್ನು ನಿಲ್ದಾಣವಲ್ಲದೇ ಬೇರೆ ಸ್ಥಳಗಳಲ್ಲಿ ನಿಲುಗಡೆ ಮಾಡುವಂತಿಲ್ಲ. ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Attachments area