ಆಟೋ ಚಾಲಕರಿಗೆ ಗ್ರಾಮಾಂತರ ಡಿವೈಎಸ್ಪಿಯಿಂದಕೋರೋನಾ ಜಾಗೃತಿ

ಹರಿಹರ.ಏ.22; ಲಾಕ್  ಡೌನ್ ಮಾಡುವುದನ್ನು ಕೈ ಬಿಟ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರ ಜಾರಿ ಮಾಡಿದರು ಸಾರ್ವಜನಿಕರು ನಿರ್ಲಕ್ಷ ವಹಿಸಿದರೆ ಮುಲಾಜಿಲ್ಲದೆ ದಂಡ ಕಾನೂನು ರೀತಿ    ಕ್ರಮಗಳನ್ನು ಜರುಗಿಸಬೇಕು ಎಂದು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ ಹೇಳಿದರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರಿಗೆ ಮಹಾಮಾರಿ ವೈರಸ್ ಬಗ್ಗೆ ಜಾಗೃತಿ ಮತ್ತು ಉಚಿತ ಮಾಸ್ಕ್ ವಿತರಣೆ ಮಾಡಿ ಮಾತನಾಡಿದ ಅವರು ಈಗಾಗಲೇ ಎರಡನೇ ಹಂತದ ವೈರಸ್ ಅಲೆಯೂ ಅತೀ ವೇಗವಾಗಿ ಸಾರ್ವಜನಿಕರ ಮೇಲೆ ಅತಿಕ್ರಮಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚೆಚ್ಚು ಆಗುತ್ತಿದೆ ಆದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ . ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರುಗಿಸಬೇಕು  ಪೋಲಿಸ್ ಇಲಾಖೆ ಸೇರಿದಂತೆ ಇಲಾಖೆ ಎಲ್ಲ  ಇಲಾಖೆಗಳಲ್ಲೂ ಸರ್ಕಾರದ ನಿರ್ದೇಶನ ಇರುತ್ತದೆ .ಆದ್ದರಿಂದ ಆಟೊರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ಮೊದಲೇ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ಆಟೋರಿಕ್ಷದಲ್ಲಿ ಕರೆದೊಯ್ಯುವ ಪದ್ದತಿಯನ್ನು ಬೆಳೆಸಿಕೊಳ್ಳಬೇಕು ಕೋ ವ್ಯಾಕ್ಸಿನ್ ಲಸಿಕೆಗಳ ಈಗಾಗಲೇ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದಾರೆ ಆಟೋ ಚಾಲಕರು ಮಾಲೀಕರು ನೀವು ಸ್ವಯಂಪ್ರೇರಿತರಾಗಿ ಲಸಿಕೆಯನ್ನು ಹಾಕಿಸಿಕೊಂಡು ಮಹಾಮಾರಿ ವೈರಸ್ ಅನ್ನು ನಿಯಂತ್ರಣ ಮಾಡುವುದಕ್ಕೆ ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಹೇಳಿದರು ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಮಾತನಾಡಿ ಪೊಲೀಸರು ಆಟೋ ರಿಕ್ಷಾ ಚಾಲನೆ ಮಾಡುವಂತಹ ಡ್ರೈವರ್ ಗಳು ಅಣ್ಣ ತಮ್ಮಂದಿರು ಇದ್ದಂತೆ ನಾವು ಪೊಲೀಸ್ ಇಲಾಖೆಯಲ್ಲಿ ಖಾಕಿ ಹಾಕಿಕೊಂಡು ಕರ್ತವ್ಯ ನಿರ್ವಹಿಸಿದರೆ ನೀವು ಖಾಕಿ ಧರಿಸಿ ಕೊಂಡು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಅವರ ಮನೆಗೆ ಬಿಡುವ   ಕಾರ್ಯವನ್ನು ಮಾಡುತ್ತಾ ಬಂದಿರುತ್ತೀರಿ  ಆಟೋರಿಕ್ಷಾ ಚಾಲನೆ ಮಾಡುವಂಥವರು ತಮ್ಮ ಚಾಲನಾ ಪರವಾನಿಗೆ ಇನ್ಸುರೆನ್ಸ್ ಇತರೆ ದಾಖಲಾತಿಗಳನ್ನು  ಹೊಂದಿರತಕ್ಕದ್ದು ಪ್ರತಿಯೊಬ್ಬ ಚಾಲಕರು ತಮ್ಮ ಸಮವಸ್ತ್ರವನ್ನು ಧರಿಸಿಕೊಂಡೇ ಚಾಲನೆ ಮಾಡಬೇಕು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ  ಪಾಲಿಸಿ ಎಂದರುನಂತರ ಡಿವೈಎಸ್ಪಿ ವೃತ್ತ ನಿರೀಕ್ಷಕರ ತಂಡ ನಗರದ ಗ್ರಾಮಾಂತರ ಪ್ರದೇಶಗಳಿಗೆ ಮದುವೆ ಮತ್ತು ಇತರೆ ಸಮಾರಂಭಗಳು ನಡೆಯುತ್ತಿರುವ ಕಲ್ಯಾಣಮಂಟಪ ಇತರೆ ಸ್ಥಳಗಳಿಗೆ ಭೇಟಿ ನೀಡಿದರುಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಸೈ ಲತಾ ತಾಳೇಕರ್ .ಎಎಸ್ ಐ ರಾಜಶೇಖರ್ .ಪೊಲೀಸ್ ಪೇದೆಗಳಾದ ಲಿಂಗರಾಜ್. ಸತೀಶ್ ಟಿವಿ .ನಾಗರಾಜ್ ಸುಣಗಾರ. ಡಿ ಟಿ ಶ್ರೀನಿವಾಸ್  .ಆಟೋ ಚಾಲಕರ ಸಂಘದ ಅಧ್ಯಕ್ಷ ಮೋಹನ್ .ಕಾರ್ಯದರ್ಶಿ ಸಿದ್ಲಿಂಗ ಸ್ವಾಮಿ . ಪೋಲಿಸ್ ಸಿಬ್ಬಂದಿ ಹಾಗೂ ಆಟೋ ಚಾಲಕರು ಮಾಲಕರು ಇತರರು ಇದ್ದರು