ಆಟೋ ಚಾಲಕರಿಗೆ ಆಹಾರ ಕಿಟ್ ವಿತರಣೆ

ಕೊಟ್ಟೂರು ಜೂ 0 7: ಎರಡನೇ ಅಲೆ ಯಿಂದ ಲಾಕ್‌ ಡೌನ್‌ ಜಾರಿ ಮಾಡಿದ್ದು ಅನಾನುಕೂಲವಾದವರಿಗೆ ಅಗತ್ಯ ಸಾಮಗ್ರಿಗಳ ಕಿಟ್‌ ಅನ್ನು ಪಟ್ಟಣದ ಎಂಎಂಜೆ ಕಾಲೊನಿ ಯುವಕರು
ವಿತರಿಸಿದರು ಎಂಎಂಜೆ ರೇಣುಕುಮಾರಸ್ವಾಮಿ
ಮಾತನಾಡುತ್ತ ಸಾಕಷ್ಟು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದೇವೆ, ಆರ್ಥಿಕ ಹಾಗು ಸಾಮಾಜಿಕ ಚಟುವಟಿಕೆ ನಿಂತಿವೆ ಇದರಿಂದಾಗಿ ಎಲ್ಲ ವರ್ಗದ ಜನರಿಗೆ ಸಮಸ್ಯೆ ಉಂಟಾಗಿದೆ. ಅದಕ್ಕೆ ಪರಿಹಾರ ನೀಡುವಲ್ಲಿ ಆಟೊ ಚಾಲಕರಿಗೆ, ಬಡವರಿಗೆ ಹಾಗೂ ಅನಾಥಾಶ್ರಮಕ್ಕೆ ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು ಹೆಚ್.ಎಂ.ಕೊಟ್ರೇಶ, ಬಿಎಂಗೌತಮ, ಆನಂದ್ ಇದ್ದರು.