ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಆಟೋ ಚಾಲಕನ ಮಗುವಿಗೆ ಚಿಕಿತ್ಸೆಗಾಗಿ ನಿಮ್ಮ ಸಹಾಯ ಬೇಕಾಗಿದೆ.

ದಯವಿಟ್ಟು ದಾನಮಾಡಿ

ನನ್ನ ಮಗುವು ಆಸ್ಪತ್ರೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೋಡುತ್ತಿದ್ದೇನೆ. ದೇವರು ಅನಾರೋಗ್ಯದ ಮೂಲಕ ಅವನನ್ನು ಏಕೆ ಶಿಕ್ಷಿಸುತ್ತಿದ್ದಾನೆ ಎನಿಸುತ್ತದೆ. ತುಂಬಾ ಚಿಕ್ಕ ವಯಸ್ಸಿನ ನಮ್ಮ ಮಗು ನಮ್ಮ ಪ್ರೀತಿಯನ್ನು ಇದುವರೆಗೂ ಅನುಭವಿಸಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಮುಂದೆ ಅವನು ಅನೇಕ ನೋವು ಮತ್ತು ಸಂಕಟಗಳಿಂದ ಬಳಬೇಕಾಗುತ್ತದೆ. ದಿನಗಳು ಉರುಳುತ್ತಿರುವಂತೆ ಅವನಿಗೆ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ ನಮ್ಮಲ್ಲಿ ಕಡಿಮೆಯಾಗುತ್ತದೆ. ಹಾಗೂ ಮಗುವನ್ನು ಕಳೆದುಕೊಳ್ಳುವ ಭೀತಿ ಕಾಡುತ್ತಿದೆ ಎಂದು ಕಾಮಾಕ್ಷಿ ತಿಳಿಸಿದ್ದಾರೆ.

ಕಾಮಾಕ್ಷಿ ಅವರು ಪೂರ್ಣವಾಗಿ ಬೆಳವಣಿಗೆಯಾಗದ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ತುರ್ತು ನಿಗಾ ಘಟಕಕ್ಕೆ (ಎನ್‌ಐಸಿಯು) ಸ್ಥಳಾಂತರಿಸಲಾಗಿದೆ. ಮಗುವಿನ ದೇಹದ ತೂಕ ತುಂಬಾ ಕಡಿಮೆಯಿದೆ. ಶ್ವಾಸಕೋಶಗಳು ಬೆಳವಣಿಗೆಯಾಗಿಲ್ಲ. ಮಗುವನ್ನು ಇನ್‌ಕ್ಯುಬೇಟರ್ ಹಾಗೂ ಪ್ರತಿ ಜೀವಿಕಗಳ ಸಹಾಯದೊಂದಿಗೆ ಇರಿಸಲಾಗಿದೆ. ಮಗು ಚೇತರಿಸಿಕೊಳ್ಳಲು ದೀರ್ಘ ಕಾಲದ ಎನ್‌ಐಸಿಯು ಅಗತ್ಯವಿರುವುದಾಗಿ ವೈದ್ಯರು ಹೇಳಿದ್ದಾರೆ.

ಮಗುವಿನ ಆರೋಗ್ಯ ಸಮಸ್ಯೆಯಿಂದ ಕಾಮಾಕ್ಷಿ ಅವರ ಪತಿ ಸತ್ಯವೇನು ಕುಗ್ಗಿ ಹೋಗಿದ್ದಾರೆ. ಇಡೀ ಜಗತ್ತು ಅವರ ಪಾಲಿಗೆ ತಲೆ ಕೆಳಗಾದಂತೆ ಆಗಿದೆ. ಈ ಹತಾಸೆಯಿಂದ ಅವರು ಜೋರಾಗಿ ಕೂಗಲು ಮುಂದಾಗಿದ್ದರು. ಆದರೆ ತಮ್ಮನ್ನೇ ತಾವು ನಿಯಂತ್ರಿಸಿಕೊಂಡು ಹೇಗಾದರೂ ಮಾಡಿ ತಮ್ಮ ನವಜಾತ ಮಗುವಿಗೆ ಚಿಕಿತ್ಸೆ ಕೊಡಿಸಿ, ಉಳಿಸಿಕೊಳ್ಳಬೇಕೆನ್ನುವ ಆಶಯ ಹೊಂದಿದ್ದಾರೆ. ಆದರೆ ಚಿಕಿತ್ಸೆಗಾಗಿ ಬೇಕಾಗಿರುವ ವೆಚ್ಚ ೧೦ ಲಕ್ಷ ರೂ. ಅವರ ಕುಟುಂಬಕ್ಕೆ ಅತಿ ದೊಡ್ಡ ಮೊತ್ತವಾಗಿದೆ.

ನಾನು ಆಟೋ ಚಾಲಕನಾಗಿದ್ದೇನೆ. ನನ್ನ ಗಳಿಕೆಯಿಂದ ಮನೆಯವರನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಆದರೆ ಮಗುವಿನ ಚಿಕಿತ್ಸೆಗಾಗಿ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಬೇಕಾಗಿದೆ. ಇಲ್ಲದಿದ್ದರೆ ನನ್ನ ಮಗುವನ್ನು ಕಳೆದುಕೊಳ್ಳಬೇಕಾಗುತ್ತದೆ. ಚಿಕಿತ್ಸೆಗೆ ಹಣ ಹೊಂದಿಸಲು ನಾನು ಸ್ನೇಹಿತರಿಂದ ಸಾಲ ಪಡೆಯಲು ಹಾಗೂ ಹೆಚ್ಚು ಬಡ್ಡಿಗೆ ಹಣ ಪಡೆಯುವುದು ಸೇರಿದಂತೆ ಅನೇಕ ರೀತಿಯ ಪ್ರಯತ್ನ ಮಾಡಿದೆ. ಆದರೂ ಅಷ್ಟೊಂದು ದೊಡ್ಡ ಮೊತ್ತದ ಹಣ ಸಂಗ್ರಹಿಸಲು ನನಗೆ ಸಾಧ್ಯವಾಗಿಲ್ಲ. ನಾನು ನನ್ನ ಮಗುವನ್ನು ಉಳಿಸಿಕೊಳ್ಳುವ ಸಂಬಂಧ ತುಂಬಾ ಭಯಭೀತನಾಗಿದ್ದೇನೆ ಎಂದು ಸತ್ಯವೇನು ಹೇಳಿದ್ದಾರೆ.
ಮಗುವನ್ನು ಕಳೆದುಕೊಳ್ಳುವ ಆಲೋಚನೆಯಿಂದ ಪೋಷಕರು ಭಯದಿಂದ ಬಳಲುತ್ತಿದ್ದಾರೆ. ಊಟ ಮಾಡುವುದನ್ನು ನಿಲ್ಲಿಸಿದ್ದಾರೆ. ಅವರ ಎಲ್ಲ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದು ಸುಲಭವಲ್ಲ.

ಮಗುವಿನ ತಾಯಿ ಕಾಮಾಕ್ಷಿ ಹಗಲಿರುಳು ಮಗುವಿನ ಮುಖವನ್ನೇ ದಿಟ್ಟಿಸಿ, ನೋಡುತ್ತಾಳೆ. ಮಗುವಿನ ಪ್ರತಿ ನಿಮಿಷದ ಚಲನವಲನಗಳು ಕಾಮಾಕ್ಷಿಯಲ್ಲಿ ಗಾಬರಿ ಉಂಟು ಮಾಡುತ್ತಿದ್ದರೆ ಅತ್ತ ಮಗುವಿನ ತಂದೆ ಸತ್ಯವೇಲು ಚಿಕಿತ್ಸೆಗಾಗಿ ಹಣ ಹೊಂದಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಪರಿಚತರೆಲ್ಲರನ್ನು ಹಣ ಸಹಾಯ ಮಾಡುವಂತೆ ಕೇಳುತ್ತಿದ್ದಾನೆ. ಆದರೆ ಇದುವರೆಗೂ ಚಿಕಿತ್ಸೆ ವೆಚ್ಚ ಸಂಗ್ರಹಿಸುವಲ್ಲಿ ಯಶಸ್ವಿಯಾಗಿಲ್ಲ.

ಕೊನೆಯದಾಗಿ ಉಳಿದಿರುವ ಏಕೈಕ ಭರವಸೆಯನ್ನು ನಿಮ್ಮ ಔದಾರ್ಯ ನಿಮ್ಮ ದೇಣಿಗೆಗಳ ಸಹಾಯದಿಂದ ಅವರು ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿ, ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ನವಜಾತ ಶಿಶು ಈ ಭೂಮಿಯ ಮೇಲೆ ಬಹಳ ದಿನಗಳ ಕಾಲ ಬದುಕಲು ಚಿಕಿತ್ಸೆಗಾಗಿ ಧನಸಹಾಯ ಮಾಡಿ, ಹಾಗೂ ಮಗು ಹೆತ್ತವರ ಪ್ರೀತಿಯನ್ನು ಅನುಭವಿಸಲು ಹಾಗೂ ಮಗುವನ್ನು ಉಳಿಸಲು ದಯವಿಟ್ಟು ಹಣ ಸಹಾಯ ಮಾಡಿ.