ಆಟೋ ಚಾಲಕನ ಪ್ರಾಮಾಣಿಕತೆಗೆ ಪೋಲಿಸ್ ಇಲಾಖೆ ಶ್ಲಾಘನೆ

ಬೀದರ್: ಮಾ.14:ನಗರದ ಗುಂಪಾ ನಿವಾಸಿ ಮಹಿಳಾ ಪ್ರಯಾಣಿಕರೊಬ್ಬರು ಗುಂಪಾದಿಂದ ರೈಲ್ವೆ ನಿಲ್ದಾಣದ ಕಡೆಗೆ ಆಟೋದಲ್ಲಿ ಪ್ರಯಾಣಿಸಿ ಆಟೋದ ಹಿಂದುಗಡೆ ತಮ್ಮ ಬ್ಯಾಗನ್ನು ಇಟ್ಟು ಆಟೋದಿಂದ ಅವಸರದಲ್ಲಿ ಇಳಿದು ಹೋಗಿರುತ್ತಾರೆ. ಬ್ಯಾಗ ಮರೆತಿರುವ ಬಗ್ಗೆ ಮನಗಂಡು ಮಾರ್ಕೇಟ್ ಪೆÇಲೀಸ್ ಠಾಣೆಗೆ ಬಂದು ಸಂಪರ್ಕಿಸಿ, ತಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ತನ್ನ ಬ್ಯಾಗದಲ್ಲಿ 4.1/2 ತೊಲೆ ಬಂಗಾರ ಇರುವ ಬ್ಯಾಗ ಆಟೋದ ಸೀಟಿನ ಹಿಂದುಗಡೆ ಇಟ್ಟಿದ್ದು ಅವಸರದಲ್ಲಿ ಇಳಿದಿರುತ್ತೇನೆ. ಅಂತ ಪಿ.ಎಸ್.ಐ ರವರಿಗೆ ತಿಳಸಿದ್ದರಿಂದ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಶ್ರೀ, ಪ್ರೇಮ್ ಕೊಡ್ಡಿಕಾರ, ಸಿಪಿಸಿ-1250 ರವರು ಕಾರ್ಯ ಪ್ರವರ್ತರಾಗಿ ಸಿ.ಸಿ ಕ್ಯಾಮರಾಗಳಲ್ಲಿಯ ದೃಶ್ಯಾವಳಿಯನ್ನು ಪರಿಶೀಲಿಸಿ ಮಹಿಳೆಯು ಪ್ರಯಾಣಿಸಿದ ಆಟೋ ಬೀದರ ಜಿಲ್ಲಾ ಪೆÇಲೀಸ್ ರಿಂದ ಆಟೋಗಳಿಗೆ ಅಳವಡಿಸಿದ ವಿಶೇಷ ಸಂಖ್ಯೆ (Unique No)-513 ಅಂತ ಖಚಿತ ಪಡಿಸಿ, ಆಟೋದ ಚಾಲಕನಿಗೆ ಸಂಪರ್ಕಿಸಿ ದಾಗ ಆಟೋ ಚಾಲಕ ತಾನು ಕೂಡ ಈ ವಿಷಯ ಟ್ರಾಫಿಕ್ ಸಿಬ್ಬಂದಿ ಅವರಿಗೆ ತಿಳಿಸಿ ಠಾಣೆಗೆ ಬರುತ್ತಿರುವ ದಾಗಿ ತಿಳಿಸಿ ಚಾಲಕ ಶ್ರೀ, ಗೊವೀಂದ ಹಣಮಂತ ಸಿಂಧೆ ರವರು ಠಾಣೆಗೆ ತಂದು ಒಪ್ಪಿಸಿರುತ್ತಾರೆ. ಸದರಿ ಬ್ಯಾಗನ್ನು ಮಹಿಳಾ ಪ್ರಾಣಿಕರಾದ ಶ್ರೀಮತಿ, ಮುತ್ತಮ್ಮ w/o ರಾಜಕುಮಾರವರಿಗೆ ಪಿ.ಎಸ್.ಐ ಮಾರ್ಕೇಟ್ ಪೆÇಲೀಸ್ ಠಾಣೆ ರವರಿಂದ ಹಸ್ತಾಂತರಿಸಲಾಯಿತು.
ಮಾರ್ಕೇಟ್ ಪೆÇಲೀಸ್ ಠಾಣೆಯ ಸಿಬ್ಬಂದಿಯವರ ಸ್ಪಂದನೆ ಮತ್ತು ಆಟೋ ಚಾಲಕ ರವರ ಪ್ರಮಾಣಿಕತೆಗೆ ಪ್ರಶಂಸನಾ ಪತ್ರದೊಂದಿಗೆ ನಗದು ಬಹುಮಾನ ಮತ್ತು ಹೊಂಡ ಶೋ ರೂಮ್ ಮಾಲೀಕರಾದ ಶ್ರೀ, ಪ್ರವೀಣ್ ರವರು ನೀಡಿದ ಜಾಕೆಟ್ ನ್ನು ನೀಡಿ ಗೌರವಿಸಲಾಯಿತು.