ಆಟೋ-ಕಾರು ಡಿಕ್ಕಿ; ವ್ಯಕ್ತಿ ಸಾವು

ಮಲೇಬೆನ್ನೂರು.ಡಿ.೨೧; ಆಟೋ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿ 8 ಜನರು ಗಾಯಗೊಂಡಿರುವ ಘಟನೆ ಹರಿಹರ ತಾಲ್ಲೂಕು ಬ್ಯಾಲದ ಹಳ್ಳಿ ಸೇತುವೆ ಬಳಿ ಜರುಗಿದೆ. ಇಂದು ಬೆಳಗ್ಗೆ ಮಲೇಬೆನ್ನೂರು ಮಾರ್ಗವಾಗಿ ಬರುತ್ತಿದ್ದ ಆಟೋ ಹಾಗೂ ಹರಿಹರಿಂದ ಬಂದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.ಇದರಿಂದಾಗಿ ಆಟೋದಲ್ಲಿದ್ದ ಗದಿಗೆಪ್ಪ(50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಆಟೋದಲ್ಲಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದರು.ಗಾಯಗೊಂಡವರನ್ನು ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.