ಆಟೋಪಲ್ಟಿ ಸ್ಥಳದಲ್ಲಿ ಮಗು ಸಾವು

ಬಸವಕಲ್ಯಾಣ :ಜ.12: ಗೂಡ್ಸ್ ಆಟೋ ಪಲ್ಟಿಯಾಗಿ 3 ವರ್ಷದ ಬಾಲಕ ಮೃತಪಟ್ಟು, ಇಬ್ಬರಿಗೆ ಗಾಯಗೊಂಡ ಘಟನೆ ತಾಲೂಕಿನ ಮುಡಬಿ ಸಮೀಪದ ಖಾನಾಪೂರ ಕ್ರಾಸ್ ಬಳಿ ನಡೆದಿದೆ.

ತಾಲೂಕಿನ ಬಂದೇನವಾಜ್ ವಾಡಿಯ ಯೋಗೇಶ್ ದಾಸುರೆ(3) ಎಂಬಾತ ಮೃತ ಬಾಲಕ. ಪೆÇೀಷಕರಾದ ಜ್ಞಾನೇಶ್ವರ್ ಹಾಗೂ ಪತ್ನಿ ಸುಧಾರಾಣಿಗೆ ಗಂಭೀರ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ವಿವರ : ಜ್ಞಾನೇಶ್ವರ್ ತನ್ನ ಗೂಡ್ಸ್ ಆಟೋದಲ್ಲಿ ಪತ್ನಿ ಹಾಗೂ ಮಗನನ್ನು ಕೂರಿಸಿಕೊಂಡು ಸಂತೆ ಮುಗಿಸಿ ಹಿಂತಿರುಗುವ ವೇಳೆ ಪಕ್ಕದಲ್ಲಿ ಕುಳಿತಿದ್ದ 3 ವರ್ಷದ ಮಗ ಯೋಗೇಶ್, ಆಟೋ ಹ್ಯಾಂಡಲ್‍ಗೆ ಕಟ್ಟಿಗೆ ಸಿಲುಕಿಸಿದ್ದಾನೆ.

ಪರಿಣಾಮ ಆಟೋ ಹ್ಯಾಂಡಲ್ ಕೆಲಸ ಮಾಡದ ಕಾರಣ ರಸ್ತೆ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಮಗನನ್ನು ಕಳೆದುಕೊಂಡ ತಂದೆ, ಸಂಬಂಧಿಕರ ಆಕ್ರಂದನ ಹೃದಯ ಕುಲುಕುವಂತಿತ್ತು.

ಸ್ಥಳಕ್ಕೆ ಎಎಸ್‍ಪಿ ಗೋಪಾಲ್ ಬ್ಯಾಕೋಡ್, ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‍ಐ ಅರುಣಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಮುಡಬಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.