ಆಟೋದಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಿತ್ತುಕೊಂಡು ಪರಾರಿ

ಕಲಬುರಗಿ,ಡಿ.21-ಆಟೋದಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಆಳಂದ ಚೆಕ್ ಪೋಸ್ಟ್ ಹತ್ತಿರದ ಅಹ್ಮದ್ ನಗರ ಬಳಿ ನಡೆದಿದೆ.
ಮಿಸ್ಬಾ ನಗರದ ಸೈಯದ್ ಪಟೇಲ್ ಎಂಬುವವರೆ ಮೊಬೈಲ್ ಕಳೆದುಕೊಂಡು ಕಂಗಾಲಾಗಿದ್ದಾರೆ.
ಮಿಸ್ಬಾ ನಗರದ ಸೈಯದ್ ಪಟೇಲ್ ಅವರು ಝಂ ಝಂ ಕಾಲೋನಿಗೆ ಹೋಗಿ ರಾತ್ರಿ 8.30ರ ಸುಮಾರಿಗೆ ಅಲ್ಲಿಂದು ಆಟೋದಲ್ಲಿ ಕುಳಿತು ಮಿಸ್ಬಾ ನಗರಕ್ಕೆ ಹೊರಟಿದ್ದರು. ಆಟೋ ಆಳಂದ ಚೆಕ್ ಪೋಸ್ಟ್ ಮಾರ್ಗವಾಗಿ ಅಹ್ಮದ್ ನಗರ ಹತ್ತಿರ ಹೋಗುತ್ತಿದ್ದಂತೆಯೇ ಬೈಕ್ ಮೇಲೆ ಬಂದ 20 ರಿಂದ 22 ವರ್ಷ ವಯಸ್ಸಿನ ಮೂವರು ಅಪರಿಚಿತ ಯುವಕರು ಇವರ ಜೇಬಿನೊಳಗೆ ಕೈ ಹಾಕಿ 10 ಸಾವಿರ ರೂಪಾಯಿ ಮೌಲ್ಯದ ವಿಪೋ ಕಂಪನಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸೈಯದ್ ಪಟೇಲ್ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.